ದುಬೈ : ಕಡಲಾಚೆ ನಾಡು ದುಬೈ ನಗರದಲ್ಲಿ ಅಗಸ್ಟ್ 14 ರಂದು ಸರ್ವಧರ್ಮೀಯರ ಕೂಡುವಿಕೆಯಿಂದ ಅದ್ದೂರಿಯಾಗಿ ಆಟಿಗೊಂಜಿ ದಿನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತ್ತು.
ಸಂಧ್ಯಾ ಕ್ರೀಯೆಷನ್ಸ್ ಇವೆಂಟ್ಸ್ ನೆಟ್ವರ್ಕ್ ಟೀಂ ದುಬೈ (SCENT) ಮತ್ತು ಫಾರ್ಚೂನ್ ಪ್ಲಾಜಾ ಹೋಟೆಲ್ ದುಬೈ (ಪ್ರವೀಣ್ ಕುಮಾರ್ ಶೆಟ್ಟಿ ಎಂಟರ್ಪ್ರೈಸಸ್)ಇವರ ಸಹಯೋಗದಲ್ಲಿ ನಗರದ ಅಲ್ ಗೀಸೆಸ್ ನಲ್ಲಿರುವ ಫಾರ್ಚೂನ್ ಪ್ಲಾಜಾ ಹೋಟೆಲ್ ನಲ್ಲಿ ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 3 ಘಂಟೆಯವರೆಗೆ ನಮ್ಮ ಹೆಮ್ಮೆಯ ತುಳು ನಾಡಿನ ಆಚಾರ ವಿಚಾರ ಸಂಸ್ಕೃತಿ ಹಾಗೂ ಕಲೆಯನ್ನು ಪಸರಿಸುವ ವಿನೂತನ ಕಾರ್ಯಕ್ರಮ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತ್ತು.
ಸರ್ವಧರ್ಮದ ಗುರುಗಳಿಂದ ಕಾರ್ಯಕ್ರಮಕ್ಕೆ ಚಾಲನೆ
ದುಬೈ ಚರ್ಚ್ ನ ಫಾದರ್ ವಿಕ್ಟರ್ ಫರ್ನಾಂಡೀಸ್, ಇಸ್ಲಾಂ ಗುರು ಮಸ್ತಾಕ್ ಅಹ್ಮದ್, ಸ್ವಾಮೀಜಿವರ್ಯರಾದ Pujya Shri Bahusrut Swamiji,Pujya Guru Shri Nayan Swami, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಮತ್ತು ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನ ಪ್ರವೀಣ್ ಕುಮಾರ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸರ್ವ ಧರ್ಮದ ಗುರುಗಳು ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭಾಶಯದ ಮಾತುಗಳನ್ನು ನುಡಿದರು. ಬಿ.ಕೆ ಗಣೇಶ್ ರೈ ಮತ್ತು ಸರ್ವೋತ್ತಮ ಶೆಟ್ಟಿಯವರು ಆಟಿಯ ಬಗ್ಗೆ ಆಟಿ ತಿಂಗಳಲ್ಲಿ ಆಚರಣೆ ಬಗ್ಗೆ ಹಾಗೂ ತಿಂಗಳ ಮಾಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ತುಳುನಾಡ ಕಣ್ಮಣಿ ಪ್ರಶಸ್ತಿ ಪ್ರಧಾನ
ಯುಎಇ ನಲ್ಲಿ ಇತ್ತೀಚೆಗೆ "ಮಿಸ್ಟರ್ ಯುಎಇ ಇಂಟರ್ ನ್ಯಾಶನಲ್ ಅಂಡ್ ಹ್ಯಾಂಡ್ಸಮ್ 2022" ಪ್ರಶಸ್ತಿ ಮೂಡಿಗೇರಿಸಿ ಕೊಂಡ ತುಳುವ ಗೌತಮ್ ಬಂಗೇರಾವರನ್ನು ಕಾರ್ಯಕ್ರಮದ ಆಯೋಜಕರು "ತುಳುನಾಡ ಕಣ್ಮನಿ" ಪ್ರಶಸ್ತಿ ನೀಡಿ ಅಭಿನಂದಿಸಲಾಯಿತ್ತು.
ಎಪ್ಪತ್ತು ಬಗೆಯ ತುಳುನಾಡ ಖಾದ್ಯಗಳ ಪ್ರದರ್ಶನ
ಕಾರ್ಯಕ್ರಮದಲ್ಲಿ ಆಷಾಡ ಮಾಸದಲ್ಲಿ ದೊರೆಯುವ ವಿಶೇಷ ತಿಂಡಿ ತಿನಿಸುಗಳನ್ನು ಯುಎಇಯಲ್ಲಿರು ತುಳು-ಕನ್ನಡ ಸಂಘ ಸಂಸ್ಥೆಗಳ ಸದಸ್ಯರು ಸಾಂಪ್ರದಾಯಿಕ ರೀತಿಯಲ್ಲಿ ಮನೆಯಲ್ಲಿ ತಯಾರಿಸಿದ ಎಪ್ಪತ್ತಕ್ಕೂ ಅಧಿಕ ಬಗೆಯ ಖಾದ್ಯಗಳನ್ನು ಪ್ರದರ್ಶನಕ್ಕೆ ಇಡಲಾಯಿತು. ಹಲವಾರು ಮಂದಿ ಈ ತಿಂಡಿಗಳ ಸವಿಯನ್ನು ಸವಿದರು.
ಮನರಂಜನಾ ಕಾರ್ಯಕ್ರಮಗಳ ಅಂಗವಾಗಿ ತುಳು ನಾಡಿನ ಜನಪದ ಗೀತೆ,ಹುಲಿವೇಷ,ಯಕ್ಷಗಾನ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಸಂಧ್ಯಾ ಕ್ರೀಯೇಷನ್ಸ್ ಇವೆಂಟ್ಸ್ ನೆಟ್ವರ್ಕ್ ಟೀಂ ದುಬೈ (SCENT) ನ ಸದಸ್ಯರಾದ ಶೋಧನ್ ಪ್ರಸಾದ್, ಅಶೋಕ್ ಬೈಲೂರು, ನಿತ್ಯಾನಂದ ಬಸ್ಕೂರು,ಸುದರ್ಶನ್ ಮೂಡಬಿದಿರೆ,ದೀಪಕ್ ಪಾಲಡ್ಕ,ಪ್ರಮೋದ್ ಕುಮಾರ್,ಸಂತೋಷ್ ಶೆಟ್ಟಿ ಪೊಳಲಿ, ರಕ್ಷಕ್ ಮಂಗಳೂರು,ಬೋಳಾರ್ ಸಮೀರ್, ಅಲ್ವಿನ್ ಪಿಂಟೋ, ಫ್ಲಾನಿ ಡಿ.ಸೋಜಾ,ಕಿರಣ್ ಬಸ್ಕೂರು,ಮೀರಾ ಸಾಲ್ಯಾನ್,ಸಂಧ್ಯಾ ಪ್ರಸಾದ್, ಒಲ್ವೀನ್ ಫಿಂಟೋ,ರಾಜಶ್ರೀ ಅಮೀನ್,RJ ಎರೋಲ್,ಯಶ್ ಪಾಲ್,ಮಿಥ ಸಾಲ್ಯಾನ್, ಸೂರಜ್ ಮಂಗಳೂರು, ಹ್ಯಾರಿ ಫರ್ನಾಂಡೀಸ್, ಪ್ರೇಮ್ ಫರ್ನಾಂಡೀಸ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಶೋಧನ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
✒️ವಿಜಯಕುಮಾರ್ ಶೆಟ್ಟಿ
ಗಾಣದಮೂಲೆ ಮಜಿಬೈಲ್ (ದುಬೈ)





0 Comments