About us

ಪ್ರಿಯರೇ,
ನವ ವಿದ್ಯುನ್ಮಾನ ಮಾಧ್ಯಮ ಲೋಕದಲ್ಲಿ ತನ್ನದೇ ಆದ ವಿಶೇಷ ಹೆಜ್ಜೆಯೊಂದಿಗೆ ಪಾದಾರ್ಪಣೆಗೈದಿರುವ "ವಿಶೇಷ ಚಾನೆಲ್ " ಎಂಬ ಜಾಲತಾಣವು ವೈವಿಧ್ಯಮಯ ಸುದ್ದಿ ಮಾಹಿತಿ,ವೈಶಿಷ್ಟಮಯ ಅಂಕಣಗಳಿಗೆ ಪ್ರಾಮುಖ್ಯತೆ ನೀಡಿ ಕಾರ್ಯಚರಿಸುತ್ತಿದೆ.
ಆರಂಭವಾದ ಅಂದಿನಿಂದ ಇಂದಿನ ವರೆಗೆ ಫೆಸ್ಬುಕ್, ವಾಟ್ಸಫ್, ಟ್ವಿಟರ್ ,ಯೂಟ್ಯೂಬ್,ಇನ್ ಸ್ಟಾ ಗ್ರಾಂ ಹೀಗೆ ವಿವಿಧ ನವ ವಿದ್ಯುನ್ಮಾನ  ಮೂಲಗಳಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ  ಓದುಗರನ್ನು ಗಳಿಸಿಕೊಂಡಿದೆ. ಪ್ರತಿದಿನ ಸರಾಸರಿ ಮೂರು ಸಾವಿರ ಓದುಗರು ಈ ಜಾಲತಾಣವನ್ನು ಸಂದರ್ಶಿಸಿಸುತ್ತಿದ್ದು ದಿನೇ ದಿನೇ ಓದುಗರ ಸಂಖ್ಯೆಯಲ್ಲಿ ಪ್ರಗತಿ ಕಾಣುತ್ತಿದೆ. 

ಕಾಸರಗೋಡು,ದ.ಕ.,ಉಡುಪಿ,ಮಡಿಕೇರಿ ಜಿಲ್ಲೆ ಹೀಗೆ ಸಮಗ್ರ ತುಳುನಾಡಿನ ಸ್ಥಳೀಯ ವಿಶೇಷತೆಗೆ ಪ್ರಾಧಾನ್ಯತೆ ಕಲ್ಪಿಸಿಕೊಡುತ್ತಿರುವ ಈ ಮಾಧ್ಯಮ ಸಶಕ್ತ ನಿರ್ವಹಣ ಸಮಿತಿ ಹಾಗೂ ಸೂಕ್ತ ಸಲಹೆಗಾರರ ಆಧೀನತೆಯಲ್ಲಿ ಕಾರ್ಯಚರಿಸುತ್ತಿದೆ.
"ನಮ್ಮ ಬೆರಳಂಚಿನಲ್ಲಿ ನಮ್ಮೂರ ವಿಶೇಷತೆ" ಎಂಬ ಆಶಯದಂತೆ  ಈ ಕೆಳಗಿನ ಸುದ್ದಿ-ಮಾಹಿತಿ-ವಿಶೇಷಣಗಳನ್ನು ಬಿಂಬಿಸುತ್ತಿದೆ.

೧. *ಸುದ್ದಿ ವಿಶೇಷ* (ಕಾಸರಗೋಡು,ದ.ಕ.,ಉಡುಪಿ,ಮಡಿಕೇರಿ ಜಿಲ್ಲೆಯ ಸ್ಥಳೀಯ ಸುದ್ದಿಗಳು,ಜತೆಗೆ ರಾಜ್ಯ, ದೇಶೀಯ ವಿಶೇಷ ಸುದ್ದಿಗಳು)

೨. *ವ್ಯಕ್ತಿ ವಿಶೇಷ* ( ಯಾವುದೇ ವ್ಯಕ್ತಿ ತನ್ನ ಜೀವಮಾನದಲ್ಲಿ ಸಾಧಿಸಿದ ವಿಶೇಷ ಸಾಧನೆಗಳ ಸಮಗ್ರ ಚಿತ್ರಣ)

೩. *ಪ್ರತಿಭಾ ವಿಶೇಷ* (ಬಾಲ,ಯುವ ಪ್ರತಿಭಾ ಪರಿಚಯ ವಿಶೇಷ)

೪. *ಕಾಯಕ ವಿಶೇಷ* ( ವ್ಯಕ್ತಿಯೊಬ್ಬ ತನ್ನ ಆದರ್ಶ ಕಾಯಕದಲ್ಲಿ ಸಾಧಿಸಿದ ಯಶಸ್ಸಿನ ಚಿತ್ರಣ)

೫. *ಕ್ಷೇತ್ರ ವಿಶೇಷ* (ಧಾರ್ಮಿಕ,ಶೈಕ್ಷಣಿಕ, ಸಾಮಾಜಿಕ ರಂಗದ ವಿಶೇಷತೆಗಳ ಪರಿಚಯ)

೬. *ಮಹಿಳಾ ವಿಶೇಷ* (  ಯಶಸ್ವಿ ಸಾಧಕಿಯರ ಸಾಧನಾಗಾಥೆ)

೭. *ಉದ್ಯಮ ವಿಶೇಷ* ( ವ್ಯಾಪಾರ-ವ್ಯವಹಾರದಲ್ಲಿ ಯಶಸ್ಸು ಗಳಿಸಿದ ಉದ್ಯಮ ಪರಿಚಯ)

*ಸಂಘ ಸವಿಶೇಷ*  ನಿಮ್ಮೂರ ಸಂಘ ಸಂಸ್ಥೆಗಳು ಸಾಧಿಸಿದ ಹೆಗ್ಗುರುತುಗಳ ಪರಿಚಯ

👆ಇವಿಷ್ಟು ವಿಶೇಷತೆಗಳು ನಿಮ್ಮೂರಲ್ಲಿ ಅಥವಾ ನಿಮ್ಮಲ್ಲಿ ಇದ್ರೆ ನಮ್ಮ vishesachanel ಜಾಲತಾಣಕ್ಕೆ ಮಾಹಿತಿ ನೀಡಿ. ನಿಮ್ಮ ಸಾಧನೆಗಳ ಪರಿಚಯವನ್ನು ಕ್ಷಣಾರ್ಧದಲ್ಲಿ ಜಗತ್ತಿಗೆ ಪರಿಚಯಿಸುವಲ್ಲಿ ನಾವು ಸದಾ ಕಾರ್ಯ ಪ್ರವೃತ್ತರಾಗಿದ್ದೇವೆ.

ಎಲ್ಲಾ ಮಾಧ್ಯಮಗಳಂತೆ ಈ ಜಾಲತಾಣಕ್ಕೂ ನಿಮ್ಮ ಹಾಗೂ ಸಂಘ ಸಂಸ್ಥೆಗಳ ಜಾಹೀರಾತಿನ ಪ್ರೋತ್ಸಾಹ ಅಗತ್ಯವಾಗಿದೆ. 
ನಮ್ಮ ಸುತ್ತ ಮುತ್ತಲ ಪರಿಸರದ ಆಗು ಹೋಗುಗಳ‌ ಬಗ್ಗೆ ಪ್ರಜ್ಞಾವಂತಿಕೆಯ ತುಡಿತ ಉಳ್ಳಂತಹ ಸಹೃದಯರು ನೀವಾಗಿರುವುದರಿಂದ 
ವಿಶೇಷ ಚಾನೆಲ್ ಡಾಟ್ ಕಾಮ್ ನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಾಯ ಸಹಕಾರ ನೀಡಿ ಸಹಕರಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.

ಸಂಪಾದಕೀಯ ಹಾಗೂ ಆಡಳಿತ ಸಮಿತಿ - ವಿಶೇಷ ಚಾನೆಲ್ ಡಿಜಿಟಲ್ ಮೀಡಿಯಾ

Contact for:-
Special News
Advertise 
YouTube live
Facebook live
L E D wall
Photography
Videography

Contact No: +919895769288,+919995015288 +918281305541

Post a Comment

0 Comments