ಬದಿಯಡ್ಕ: "ಸರಕಾರ ಅಂಗೀಕರಿಸಿದ ಕೋರ್ಸ್‌ಗಳನ್ನೇ ವಿದ್ಯಾರ್ಥಿಗಳು ಆಯ್ಕೆಮಾಡಿಕೊಳ್ಳುವುದು ಅವರ ಭವಿಷ್ಯಕ್ಕೆ ಉತ್ತಮವಾಗಲಿದೆ. ಈ ನಿಟ್ಟಿನಲ್ಲಿ ಸರಕಾರಿ ಅಂಗೀಕೃತ ಕಂಪ್ಯೂಟರ್ ತರಬೇತಿ ಕೇಂದ್ರವಾಗಿ ಕೇರಳ ರಾಜ್ಯ ರೂಟ್ರೋನಿಕ್ಸ್ ಕೋರ್ಸ್‌ಗಳು ಕುಂಬಳೆ ಉಪಜಿಲ್ಲಾ ಮಟ್ಟದಲ್ಲಿ ಪ್ರಪ್ರಥಮವಾಗಿ ಬದಿಯಡ್ಕದಲ್ಲಿ ಕಾರ್‍ಯಾರಂಭಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಲೋಕಸೇವಾ ಆಯೋಗ ಅಂಗೀಕರಿಸಿದ 13ಕೋರ್ಸ್ ಹಾಗೂ ಸರಕಾರ ಅಂಗೀಕರಿಸಿದ 18 ಉದ್ಯೋಗ ತರಬೇತಿಯನ್ನು ಹೊಂದಿದ ಇದಕ್ಕೆ ಗ್ರಾಮ ಪಂಚಾಯಿತಿನ ಸಹಕಾರದೊಂದಿಗೆ ಉದ್ಯೋಗಾರ್ಥಿಗಳು ಸದುಪಯೋಗಪಸಿಕೊಳ್ಳಬೇಕು" ಎಂದು ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಹೇಳಿದರು.
ಬದಿಯಡ್ಕ ಮೇಲಿನ ಪೇಟೆಯ ಪರಂ ಕಂಪ್ಯೂಟರ್ ಸೆಂಟರಲ್ಲಿ ಆರಂಭಗೊಂಡ ಕೇರಳ ಸ್ಟೇಟ್ ರುಟ್ರೋನಿಕ್ಸ್ ಎಂಬ ಕಂಪ್ಯೂಟರ್ ಶಿಕ್ಷಣದ ನೂತನ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ.ಅಧ್ಯಕ್ಷತೆ ವಹಿಸಿದ್ದರು.
ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಎಂ, ಪ್ರಗತಿ ಸ್ಪೇಶಲ್ ಸ್ಕೂಲ್ ನಿರ್ದೇಶಕ ಉದಯ
ಎಂ, ಡಿ.ಶಂಕರ್, ಐ.ಲಕ್ಷ್ಮಣ ಪೆರಿಯಡ್ಕ ಪಾಲ್ಗೊಂಡು
ಶುಭ ಹಾರೈಸಿದರು. ಸಾಹಿತಿ ದಯಾನಂದ ರೈ ಕಳ್ವಾಜೆ ಉಪಸ್ಣಿತರಿದ್ದರು.
ಈ ಸಂದರ್ಭದಲ್ಲಿ ಪರಂ ಕಂಪ್ಯೂಟರ್ ಸೆಂಟರಿನಲ್ಲಿ ಕೋರ್ಸು ಪೂರೈಸಿ ವಿವಿದೆಡೆ ಉದ್ಯೋಗ ಗಳಿಸಿದವರನ್ನು ಅಭಿನಂದಿಸಲಾಯಿತು.
ರುಟ್ರೋನಿಕ್ಸ್ ನಿರ್ದೇಶಕ ಕಿಶೋರ್ ಕೆ. ಸ್ವಾಗತಿಸಿ, ಶಿಕ್ಷಕಿ ಮಮತಾ ವಂದಿಸಿದರು. ಪ್ರದೀಪ್ ಎಂ. ನಿರೂಪಿಸಿದರು.










0 Comments