ದುಬೈ: ಖ್ಯಾತ ನಿರ್ದೇಶಕ ನಿರ್ಮಾಪಕರಾದ ಮಹೇಂದ್ರ ಕುಮಾರ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದ ತುಳು ಚಾರಿತ್ರಿಕ ಚಲನಚಿತ್ರ ಕಾರ್ಣಿಕದ ಕಲ್ಲುರ್ಟಿ ಯುಎಇ ಯಲ್ಲಿ ಅಕ್ಟೋಬರ್ 6 ರಂದು ಪ್ರೀಮಿಯರ್ ಪ್ರದರ್ಶನಗೊಳ್ಳಲಿದೆ. ಚಿತ್ರದ ಪ್ರೀಮಿಯರ್ ಪ್ರದರ್ಶನ ಉದ್ಘಾಟನಾ ಹಾಗೂ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ದುಬೈಯ ಮಾರ್ಕ್ ಫೊಲೊ ಹೊಟೇಲ್ ನಲ್ಲಿ ಇತ್ತೀಚೆಗೆ ಜರುಗಿತ್ತು.
ಉದ್ಘಾಟನಾ ಮತ್ತು ಟಿಕೆಟ್ ಬಿಡುಗಡೆ
ಎನ್.ಆರ್.ಐ ಯುಎಇ ಯ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಫ್ರಾಂಕ್ ಫೆರ್ನಾಂಡೀಸ್,ರಾಮಚಂದ್ರ ಹೆಗ್ಡೆ,ಸೌಹರ್ದ ಲಹರಿ ದುಬೈಯ ಅಧ್ಯಕ್ಷರಾದ ಅಶೋಕ್ ಬೈಲೂರು,
ಸಯ್ಯಾದ್ ಅಜ್ಮಾಲ್,ಸತೀಶ್ ಉಳ್ಳಾಲ್,ಮೋಹನ್ ಅತ್ತಾವರ,ಶಶಿಧರ್ ನಾಗರಂಜಪ್ಪ,ಸುಗಂದರಾಜ್ ಬೇಕಲ್,ಪ್ರೆಮ್ ಜೀತ್,ನಾಗರಾಜ್ ,ಚಿತ್ರ ನಿರ್ಮಾಪಕರಾದ ಮಹೇಂದ್ರ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಗಳನ್ನು ಬಿಡುಗಡೆಗೊಳಿಸಿದರು. ಕಾರ್ಣಿಕದ ಕಲ್ಲುರ್ಟಿ ಚಿತ್ರ ಬಿಡುಗಡೆಗೆ ತಮ್ಮೆಲ್ಲರ ಪೋತ್ಸಾಹ ನೋಡುವುದೆಂದು ಗಣ್ಯರು ಹೇಳಿ ಚಿತ್ರಕ್ಕೆ ಶುಭವನ್ನು ಕೋರಿದರು. ಬಂದಂತಹ ಗಣ್ಯತಿ ಗಣ್ಯರನ್ನು ಮಹೇಂದ್ರ ಕುಮಾರ್ ಸ್ವಾಗತಿಸಿ ಗೌರವಿಸಿದರು.ಮಹೇಂದ್ರ ಕುಮಾರವರನ್ನು ನಿತ್ಯಾನಂದ ಬಸ್ಕೂರವರು ಗೌರವಿಸಿದ್ದರು.
ಸೌಹರ್ದ ಲಹರಿ ತಂಡದ ಕಲಾವಿದರಿಂದ ಸಂಗೀತ ರಸಮಂಜರಿ ಹಾಗೂ ಮಕ್ಕಳಿಂದ ಡ್ಯಾನ್ಸ್ ಕಾರ್ಯಕ್ರಮವು ಜರುಗಿತ್ತು. ಶೋಧನ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
ಅಕ್ಟೋಬರ್ 16 ರಂದು ಪ್ರೀಮಿಯರ್ ಪ್ರದರ್ಶನ
ಸಂದ್ಯಾ ಕ್ರಿಯೇಷನ್ ಓವರ್ಸೀಸ್ ಮೂವೀಸ್ ಮತ್ತು ಸಂದ್ಯಾ ಕ್ರಿಯೇಷನ್ ಈವೇಂಟ್ ನೆಟ್ವರ್ಕ್ ಟೀಮ್ (SCENT) ತಂಡವು ಈ ಸಿನಿಮಾದ ಯುಎಇ ನಲ್ಲಿ ಪ್ರದರ್ಶನದ ನೇತೃತ್ವದ ವಹಿಸಿದ್ದು ಅಕ್ಟೋಬರ್16 ರಂದು ದುಬೈನಲ್ಲಿ ಎರಡು ಪ್ರದರ್ಶನ ಮತ್ತು ಅಬುಧಾಬಿನಲ್ಲಿ ಒಂದು ಪ್ರೀಮಿಯರ್ ಪ್ರದರ್ಶನಗೊಳ್ಳಲಿದೆ ಹಾಗೂ ಹೆಚ್ಚಿನ ವಿವರಕ್ಕಾಗಿ ಈ ಕೆಳಗಿನ ನಂಬರುಗಳಿಗೆ ಸಂಪರ್ಕಿಸಬೇಕೆಂದು ತಂಡದ ರೂವರಿ ಶೋಧನ್ ಪ್ರಸಾದ್ ತಿಳಿಸಿದ್ದರು.

0 Comments