ಪೆರ್ಲ : ಹೊಂಬೆಳಕು ಟ್ಯೂಷನ್ ಸೆಂಟರ್ ನ ವತಿಯಿಂದ ಶಿಕ್ಷಕ ದಿನಾಚರಣೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರ ಪ್ರಾಥಮಿಕ ಶಿಕ್ಷಣ ಕಾಲದ ಆದರ್ಶ ಅಧ್ಯಾಪಕರನ್ನು ಅಹ್ವಾನಿಸಿ ಗುರು ವಂದನೆ ಸಲ್ಲಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲರಾದ ಡಾ.ಕಿಶೋರ್ ಕುಮಾರ್ ರೈ ಶೇಣಿ ಅವರ ಗುರುಗಳಾದ ಬಿ.ಈಶ್ವರ ಭಟ್ ಹಾಗೂ ಸಂಸ್ಥೆಯ ನಿರ್ದೇಶಕರಾದ ಬಾಲಕೃಷ್ಣ ಅವರ ಗುರುಗಳಾದ ಜಿ.ಕೃಷ್ಣ ಭಟ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ದೀಪ ಬೆಳಗಿ ಉದ್ಘಾಟಿಸಿ ಡಾ.ಸರ್ವೆಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು.
ಪ್ರಜ್ಞಾ ಪ್ರಾರ್ಥನೆಗೈದರು. ಸೂರ್ಯ ನಾರಾಯಣ ಭಟ್ ಸೈಪಂಗಲ್ಲು ಸ್ವಾಗತಿಸಿ ಶಿಕ್ಷಕಿ ಅನುಶ್ರೀ ವಂದಿಸಿದರು.
Add




0 Comments