ದುಬೈ : ಕಳೆದ ಇಪ್ಪತ್ತು ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಯುಎಇಯ ಸರ್ವ ಸಮಾಜದವರ ಮನೆ ಮನೆಗಳಲ್ಲಿ ಹಾಗೂ ಸಮುದಾಯದ ಸಂಘಟನೆಗಳ ಪೂಜಾ ಕಾರ್ಯಕ್ರಮಗಳಲ್ಲಿ ಭಜನಾ ಸೇವೆಯನ್ನು ಗೈಯುತ್ತಾ ಬಂದಿರುವ ಶ್ರೀ ರಾಜರಾಜೇಶ್ವರಿ ಭಜನ ವೃಂದ ದುಬೈ ಯುಎಇ ಈ ಸಂಸ್ಥೆಯ ಇಪ್ಪತ್ತನೇಯ ವರ್ಷದ "ವಿಂಶತಿ ಭಜನಾಟ್ಯ ಸಂಭ್ರಮ-2025" ಕಾರ್ಯಕ್ರಮವು ಫೆಬ್ರವರಿ 22 ರಂದು ದುಬೈಯ ಅಲ್ ನಾಸರ್ ಲೀಸರ್ ಲ್ಯಾಂಡ್ ಸಭಾಂಗಣದಲ್ಲಿ ನಡೆಯಲಿದೆ. ಈ ಭಜನಾ ವೃಂದದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ನಗರದ ಎಸ್.ಎನ್.ಜಿ ಸಭಾಂಗಣದಲ್ಲಿ ನಡೆಯಿತು.
ಕು.ಸನ್ನಿದಿ ವಿಶ್ವನಾಥ ಶೆಟ್ಟಿಯವರು ಪ್ರಾರ್ಥನೆ ಹಾಡುವುದರ ಮೂಲಕ ಕಾರ್ಯಕ್ರಮ ಆರಂಭಗೊಂಡಿತು.ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾ ಸರ್ವೋತ್ತಮ ಶೆಟ್ಟಿ,ಯುಎಈ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ,ಜಬುಲಾಲಿ ಹಿಂದು ಮಂದಿರದ ಸಿ.ಎ.ಓ ಮೋಹನ್ ಜಿ,ಪ್ರೈಮ್ 4 ಗ್ರೂಪ್ ಆಫ್ ಸಂಸ್ಥೆಯ ಚೇತನ್ ಸೋನಾವಾಲ, ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಯುಎಈ ಯ ವಿಜಯ ಗುಜ್ಜಾರ್,ಯಕ್ಷಗಾನ ಅಭ್ಯಾಸ ಕೇಂದ್ರದ ದಿನೇಶ್ ಶೆಟ್ಟಿ ಕೊಟ್ಟಿಂಜ,ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ, ಬ್ರಾಹ್ಮಣ ಸಮಾಜದ ಸುಧಾಕರ ರಾವ್ ಪೇಜಾವರ, ದುಬೈ ಸೋರ್ಸ್ ನ ಆಡಳಿತ ನಿರ್ದೇಶಕರಾದ ಹರೀಶ್ ಬಂಗೆರ, ಒಕ್ಕಲಿಗ ಸಂಘ ಯುಎಇಯ ಕಿರಣ್ ಗೌಡ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಇಪ್ಪತ್ತನೇ ವರ್ಷದ ಭಜನಾ ವೃಂದದ ಕಾರ್ಯಕ್ರಮವಾದ *"ವಿಂಶತಿ ಭಜನಾಟ್ಯ ಸಂಭ್ರಮ-2025"* ಹೆಸರನ್ನು ಬಿಡುಗಡೆ ಮಾಡಿ ಇಪ್ಪತ್ತನೇ ವರ್ಷದ ಕಾರ್ಯಕ್ರಮವು ಯಶಸ್ವಿಯಾಗಿ ಜರಗಲಿ ಎಂದು ಶುಭ ಹಾರೈಸಿದರು.
"ವಿಂಶತಿ ಭಜನಾಟ್ಯ-2025" ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗನ್ತೂತ್ತ್ ಬಿಲ್ಡಿಂಗ್ ಮೆಟೆರಿಯಲ್ಸ್ ನ ಆಡಳಿತ ನಿರ್ದೇಶಕರಾದ ಸುಜಾತ್ ಶೆಟ್ಟಿ,ಬಿಲ್ಲವಾಸ್ ದುಬೈಯ ಅಧ್ಯಕ್ಷರಾದ ದೀಪಕ್ ಎಸ್.ಪಿ., ಸೋಷಿಯಲ್ ಮಸಾಲ ರೆಸ್ಟೋರೆಂಟ್ ನ ಶರತ್ ಶೆಟ್ಟಿ, ಅಲ್ ಫರ್ದಾನ್ ಎಕ್ಷೈಂಜ್ ನ ತಾರಾನಾಥ ರೈ,ಸುವರ್ಣ ಪ್ರತಿಷ್ಠಾನದ ಪ್ರಭಾಕರ ಸುವರ್ಣ,ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ಪದ್ಮಶಾಲಿ ಸಮಾಜ ಯುಎಇಯ ಅಧ್ಯಕ್ಷರಾದ ರಘುರಾಮ ಶೆಟ್ಟಿಗಾರ್, ಯುಎಇಯ ರಜಕ ಸಂಘದ ಅಧ್ಯಕ್ಷರಾದ ದಿನೇಶ್ ಸಾಲಿಯಾನ್,ಅಲೀಖ ಇನ್ಸ್ಯೂರೇನ್ಸ ಸತೀಶ್ ಶೆಟ್ಟಿ,ಸಂಘಟಕರಾದ ವಾಸು ಶೆಟ್ಟಿ, 365 ಸಂಸ್ಥೆಯ ಆಡಳಿತ ನಿರ್ದೇಶಕರಾದ ರಮಾನಂದ ಶೆಟ್ಟಿರವರು ಬಿಡುಗಡೆಗೊಳಿಸಿದರು.
ವೃಂದದ ಭಜನಾ ಕಾರ್ಯಕ್ರಮವನ್ನು ಇಪ್ಪತ್ತು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಯುಎಇಯ ಎಲ್ಲಾ ಸಮಾಜ ಮುಖ್ಯಸ್ಥರಿಗೆ,ಸಂಘಟನೆಯ ಪದಾಧಿಕಾರಿಗಳಿಗೆ ವೃಂದದ ವತಿಯಿಂದ ಗೌರವಿಸಲಾಯಿತು. ರಾಜೇಶ್ ಕುತ್ತಾರ್ ಮತ್ತು ಶ್ರೀಮತಿ ದಿವ್ಯ ಕುಂಬಳೆ ಕಾರ್ಯಕ್ರಮವನ್ನು ನಿರೂಪಿಸಿ,ಸತೀಶ್ ಉಳ್ಳಲ್ ದನ್ಯವಾದವಿತ್ತರು.
ಕಾರ್ಯಕ್ರಮದ ವಿವರ
ಫೆಬ್ರವರಿ 22 2025 ನೇ ಶನಿವಾರ ನಗರದ ಅಲ್ ನಾಸರ್ ಲೀಸರ್ ಲ್ಯಾಂಡ್ ಸಭಾಂಗಣದಲ್ಲಿ ಮಧ್ಯಾಹ್ನ 2.30 ರಿಂದ ಕಾರ್ಯಕ್ರಮಗಳು ಜರಗಲಿದೆ.
ಯುಎಇ ಮಟ್ಟದ ಆಯ್ದ ಪ್ರಬುದ್ದ ಭಜನಾ ತಂಡಗಳಿಂದ "ಕುಣಿತ ವಿಂಶತಿ" ಕುಣಿತ ಭಜನಾ ಸ್ಪರ್ಧೆ, ಊರಿನ ಸುಪ್ರಸಿದ್ಧ ಗಾಯಕಿ ಕು.ಸೂರ್ಯಗಾಯತ್ರಿಯವರಿಂದ "ಗಾನ ವಿಂಶತಿ", ಯುಎಇಯ ನೃತ್ಯ ವಿಧುಷಿ ಶ್ರೀಮತಿ ರೂಪ ಕಿರಣ್ ಹಾಗೂ ಬಳಗದವರಿಂದ "ನೃತ್ಯ ವಿಂಶತಿ" ಕಾರ್ಯಕ್ರಮಗಳು ಜರಗಲಿರುವುದು.





0 Comments