ಮಾಣಿಲ :  ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ಜ.4 ಹಾಗೂ 5ಕ್ಕೆ ಅಖಂಡ ಭಜನಾ ಸಂಭ್ರಮ ಜರಗಲಿದೆ.

ಕಳೆದ ಎರಡು ವರ್ಷಗಳ ಹಿಂದೆ ನಡೆದ  ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ   ಸುಮಾರು ಮೂರು ವರ್ಷಗಳ ಕಾಲ ಪ್ರತಿ ಆದಿತ್ಯವಾರ "ಸಂಕಲ್ಪ ಅನುಸಾರ ಭಜನಾ ಸಂಕೀರ್ತನೆ"  ಹಮ್ಮಿಕೊಂಡಿದ್ದು ಸುಮಾರು 150 ತಂಡದವರು ಭಜನಾ  ಸೇವೆಯನ್ನುಗೈದಿದ್ದಾರೆ , ಇದೀಗ ಸಂಕಲ್ಪ ಅನುಸಾರ ಭಜನಾ ಸಂಕೀರ್ತನೆಯ ಸಮಾಪ್ತಿ ಕಾರ್ಯವನ್ನು ಈ ಎಲ್ಲಾ ಭಜಕರನ್ನು ಒಗ್ಗೂಡಿಸಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಸಂಕಲ್ಪದಂತೆ ಇವರ ಮಾರ್ಗದರ್ಶನದಲ್ಲಿ 24 ಗಂಟೆಗಳ ಕಾಲ ಅಖಂಡ ಭಜನಾ ಸಂಭ್ರಮ ಜ.4 ಹಾಗೂ 5ಕ್ಕೆ ಕ್ಷೇತ್ರದಲ್ಲಿ ಜರಗಲಿದೆ. ಇದರ ಆಮಂತ್ರಣಾ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.  



ಜ.4ಕ್ಕೆ ಸಂಜೆ 3 ಗಂಟೆಗೆ ಮಹಿಳಾ ಸಮಿತಿ ವತಿಯಿಂದ ಶ್ರೀಸತ್ಯನಾರಾಯಣ ಪೂಜೆ ಬಳಿಕ ಸಂಕಲ್ಪ ಅನುಸಾರ ಅಖಂಡ ಭಜನೆಗೆ ರಜನಿ‌ಕಿಶನ್ ನಾಯ್ಕಾಪು ಚಾಲನೆ ನೀಡುವರು. ಬಳಿಕ ವಿವಿಧ ತಂಡಗಳಿಂದ ಭಜನಾ ಸೇವೆ ಜರಗಲಿದೆ. ಜ.5ಕ್ಕೆ ಸಂಜೆ 6.30 ಗಂಟೆಗೆ ಜರಗುವ ಸಮಾರೋಪ ಸಮಾರಂಭದಲ್ಲಿ ಕ್ಷೇತ್ರ ಮೊಕ್ತೇಸರ ಎಂ.ಕೆ.ಕುಕ್ಕಾಜೆ ಅಧ್ಯಕ್ಷತೆವಹಿಸುವರು. ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಉಪಸ್ಥಿತರಿರುವರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ  ಧಾರ್ಮಿಕ ಉಪನ್ಯಾಸಗೈಯುವರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಮುಖ್ಯ ಅತಿಧಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಭಜನಾ ಸಾಧಕರಿಗೆ ಸನ್ಮಾನ ಜರಗಲಿದೆ.