ಯುಎಇಯಲ್ಲಿ ವಿಜೃಂಭಿಸಿದ ಬ್ರಾಹ್ಮಣ ಸಮಾಜದ ನವರಾತ್ರಿ ಕಾರ್ಯಕ್ರಮಗಳು

 


ದುಬೈ : ನವರಾತ್ರಿಯ ಮೊದಲದಿನ ಯುಎಇ ಬ್ರಾಹ್ಮಣ ಸಮಾಜವು , ಪ್ರಸ್ತುತ ಸಂವತ್ಸರ ಪೂರ್ತಿ ಹಮ್ಮಿಕೊಂಡ ವಿಂಶತಿ ಉತ್ಸವ ದ 10ನೇ ಕಾರ್ಯಕ್ರಮವಾದ ರಂಗೋಲಿ ರಂಗು ,11ನೇ ಕಾರ್ಯಕ್ರಮ ಗುರು ಗೌರವ ಮತ್ತು 12 ನೇ ಕಾರ್ಯಕ್ರಮ ದುರ್ಗ ನಮಸ್ಕಾರ ಪೂಜೆಯನ್ನು ಶ್ರದ್ದಾ ಭಕ್ತಿಯಿಂದ ನೆರವೇರಿಸಿದರು .  


 ಕರ್ನಾಟಕದ ವಿವಿಧ ಸಮುದಾಯಗಳ ಮತ್ತು ಸಂಘಟನೆಗಳ 16 ತಂಡಗಳು ಭಾಗವಹಿಸಿದ ರಂಗೋಲಿ ರಂಗು ಕಾರ್ಯಕ್ರಮವನ್ನು ಶ್ರೀಮತಿ ವಾಣಿ ಭಟ್ ಅವರು ಉದ್ಘಾಟಿಸಿದರು, ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಮಾಜದ ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯರಾದ ಲತಾ ಸುಧಾಕರ್, ರೇಖಾ ಭಟ್ ,ಕಲ್ಪನಾ ಅಶೋಕ್ ಮತ್ತು ಕಾರ್ಯಕ್ರಮದ ಸಂಯೋಜಕರು ಉಪಸ್ಥಿತರಿದ್ದರು. ಜಯಲಕ್ಷ್ಮಿ ಉಪಾದ್ಯಾಯ ಅವರು ಕಾರ್ಯಕ್ರಮ ನಿರೂಪಿಸಿದರು.ರೇಖಾ ಶಿವರಾಂ ಭಟ್ ಅವರು ತೀರ್ಪುಗಾರರನ್ನು ಸಭೆಗೆ ಪರಿಚಯಿಸಿ ಅವರನ್ನು ಗೌರವಿಸಿದರು . ಕ್ಲಿಷ್ಟಕರ ಪೈಪೋಟಿಯ ರಂಗೋಲಿ ಸ್ಪರ್ಧೆಯಲ್ಲಿ ಗೋಲ್ಡನ್ ಸ್ಟಾರ್ ಇನ್ಸ್ಟಿಟ್ಯೂಟ್ ನ ಸುರೇಶ ಶೆಟ್ಟಿ , ಸ್ವತಂತ್ರ ಚಿತ್ರ ಕಲಾವಿದೆ ಮಮತಾ ಕೋಟ್ಯಾನ್ ಹಾಗು ಕಲಾವಿದೆ ಮತ್ತು ಶಿಕ್ಷಕಿ ಶ್ರೀಲೇಖಾ ಮೆನನ್ ಅವರು ತೀರ್ಪುಗಾರರಾಗಿ ಕಾರ್ಯಕ್ರಮ ನಿರ್ವಹಿಸಿದರು. ಸಮಾಜದ ಪರವಾಗಿ ಪ್ರಮೀಳಾ ಮಧುಕರ್,ರಶ್ಮಿ ಹೆಬ್ಬಾರ್, ರಂಜನಿ ಕೃಷ್ಣಪ್ರಸಾದ್ ,ಪದ್ಮಿನಿ ಐತಾಳ್ ಅವರು ರಂಗೋಲಿ ರಂಗು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.90 ನಿಮಿಷಗಳಲ್ಲಿ ಬಿಡಿಸಿದ್ದ ರಂಗೋಲಿಯ ಫಲಿತಾಂಶವನ್ನು ನಿರ್ಣಯಿಸಲು ತೀರ್ಪುಗಾರರು ಸರಿ ಸುಮಾರು ಅಷ್ಟೇ ಸಮಯ ತಗಲಿಸಿದ್ದು ಸ್ಪರ್ಧೆಯ ಗುಣಮಟ್ಟ ಮತ್ತು ಪೈಪೋಟಿಯ ಸ್ತರವನ್ನು ಎತ್ತಿ ತೋರಿಸುತಿತ್ತು . ಕೊನೆಯಲ್ಲಿ IPF ಕರ್ನಾಟಕ ತಂಡ ಮೊದಲಾಣೆ ಸ್ಥಾನ , ಸೃಷ್ಟಿ ತಂಡ ಎರಡನೇ ಸ್ಥಾನ , ಯಕ್ಷಗಾನ ಅಭ್ಯಾಸ ಕೇಂದ್ರ ಮೂರನೇ ಸ್ಥಾನವನ್ನು ಪಡೆದುಕೊಂಡು ಎಲ್ಲ ತಂಡಗಳು ಪ್ರಶಸ್ತಿಪತ್ರವನ್ನು ಪಡೆದರು.



ಯುಎಇ ಬ್ರಾಹ್ಮಣ ಸಮಾಜದಲ್ಲಿ ಕಳೆದ 20 ವರ್ಷಗಳಲ್ಲಿ ಸಮಾಜದ ದೇವತಾ ಕಾರ್ಯಗಳನ್ನು ಹಲವಾರು ಪುರೋಹಿತರು ಗುರು ಸ್ಥಾನದಲ್ಲಿ ನಿಂತು ನಡೆಸಿಕೊಟ್ಟಿರುತ್ತಾರೆ. ಅಂತಹ ಪುರೋಹಿತರನ್ನು ಗೌರವಿಸುವ ಗುರು ಗೌರವ ಕಾರ್ಯಕ್ರಮವನ್ನು ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು . 




ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀಯುತ ಸತ್ಯಬೋಧ , ಪುತ್ತಿಗೆ ವಾಸುದೇವ ಭಟ್, ಭೀಮ ಜ್ಯುವೆಲ್ಲರ್ಸ್ ನ ನಾಗರಾಜ ರಾವ್ ಭಾಗವಹಿಸಿದ್ದರು . ಪುರೋಹಿತರುಗಳಾದ ಲಕ್ಷ್ಮೀಕಾಂತ ಭಟ್,ವೆಂಕಟೇಶ ಶಾಸ್ತ್ರೀ ,ಭವಾನಿ ಶಂಕರ ಶರ್ಮಾ, ರಾಮಕೃಷ್ಣ , ಸುಬ್ರಮಣ್ಯ ಮತ್ತು ಲಕ್ಷ್ಮೀಶ ಅವರನ್ನು ಫಲ ತಾಂಬೂಲ , ಭೀಮ ಜ್ಯುವೆಲ್ಲರ್ಸ್  ನ ಚಿನ್ನದ ನಾಣ್ಯ ನೀಡಿ ಶಾಲು ಹೊದೆಸಿ ಅತಿಥಿಗಳೊಂದಿಗೆ ಸಮಾಜದ ಹಿರಿಯ ಸಂಚಾಲಕರುಗಳಾದ ಸುಧಾಕರ ಪೇಜಾವರ, ಶಿವರಾಮ್ ಭಟ್,ಅನಂತ್ ತಂತ್ರಿ, ರಾಘವೇಂದ್ರ ಉಪಾದ್ಯಾಯ,ಅಶೋಕ್ ಕುಮಾರ್ ಮತ್ತು ಪ್ರಕಾಶ್ ಉಪಾಧ್ಯಾಯರು ಗೌರವಿಸಿದರು,ವೇದಿಕೆಯಲ್ಲಿ ಸುಧೀಂದ್ರ ಐತಾಳ್ ,ಕೃಷ್ಣಪ್ರಸಾದ್ ರಾವ್ ಮತ್ತು ಮಧುಕರ್ ರಾವ್ ಹಾಜರಿದ್ದರು ಗೌರವ ಸ್ವೀಕರಿಸಿದ ಗುರುಗಳು ನಮ್ಮ ಪದ್ಧತಿ, ಆಚಾರ ವಿಚಾರಗಳನ್ನು ಎತ್ತಿ ಹಿಡಿಯಲು ಕರೆ ನೀಡಿದರು.ಈ ಕಾರ್ಯಕ್ರಮವನ್ನು ವಿಶ್ವೇಶ್ವರ ಅಡಿಗ ಅವರು ನಿರೂಪಿಸಿದರು.

      ನಂತರ ನೆರವೇರಿದ ದುರ್ಗಾ ನಮಸ್ಕಾರ ಪೂಜೆಯಲ್ಲಿ ಸಮಾಜದ ಪರವಾಗಿ ಸಹನಾ ಮತ್ತು ಅಮರದೀಪ್ ಕಲ್ಲೂರಾಯ ದಂಪತಿಗಳು ಸಂಕಲ್ಪ ಕೈಗೊಂಡರು. ಲಕ್ಷ್ಮೀಕಾಂತ ಭಟ್ ಮತ್ತು ಪುರೋಹಿತ ವರ್ಗದವರ ನೇತೃತ್ವದಲ್ಲಿ ಸಂಪನ್ನಗೊಂಡ ಪೂಜೆಯಲ್ಲಿ ಭಜನೆ, ಲಲಿತಾಸಹಸ್ರನಾಮ ಅಷ್ಟಾವಧಾನ ಸೇವೆಗಳಿದ್ದವು . ಪುರೋಹಿತ ವೆಂಕಟೇಶ ಶಾಸ್ತ್ರಿಯವರ ನೇತೃತ್ವದಲ್ಲಿ ಕೈಗೊಂಡ ಅಷ್ಟಾವದಾನದಲ್ಲಿ ಚತರ‍್ವೇದ ಪಾರಾಯಣವನ್ನು ಸುಬ್ರಮಣ್ಯ, ಲಕ್ಷ್ಮೀಶ ಮತ್ತು ವಿಶ್ವೇಶ್ವರ ಅಡಿಗ ಮತ್ತುಭವಾನಿ ಶಂಕರ್ ಶರ್ಮಾ ಮತ್ತು ಶಿಷ್ಯವೃಂದದವರು ನೆರವೇರಿಸಿದರು.ಸಂಗೀತ ಸೇವೆಯನ್ನು ನಿಖಿಲಾ ಕುಕ್ಕೆ , ನೃತ್ಯ ಸೇವೆಯನ್ನು ವಿಧುಷಿ ಅಂಜಲಿ ನಾಗಭೂಷಣ್,ವಿಧುಷಿ ಅಕ್ಷತಾ ಪವನ್ ಮತ್ತು ಯಕ್ಷಗಾನ ಸೇವೆಯನ್ನು ಕೃಷ್ಣಪ್ರಸಾದ್ ರಾವ್ ನೆರವೇರಿಸಿದರು . ಕೊನೆಯಲ್ಲಿ ಮಹಾಮಂಗಳಾರತಿ ಮತ್ತು ಮಹಾ ಪ್ರಸಾದದೊಂದಿಗೆ ದೈವೀಕ ಕಾರ್ಯಕ್ರಮಗಳು ಸಂಪನ್ನಗೊಂಡವು.

ವರದಿ: ಆರತಿ ಅಡಿಗ



Post a Comment

0 Comments