ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಶಾಲಾ ವಿಜ್ಞಾನ ಮೇಳ ಬೇಕೂರು ಸರಕಾರಿ ಶಾಲೆಯಲ್ಲಿ ಜರಗುತ್ತಿರುವ ನಡುವೆ ವೇದಿಕೆಯ ಮುಂಭಾಗ ಹಾಕಲಾಗಿದ್ದ ಸೀಟು ಆಕಸ್ಮಿಕವಾಗಿ ಕುಸಿದು ಅಡಿಯಲ್ಲಿದ್ದ ಮಕ್ಕಳ ಮೇಲೆ ಬಿದ್ದಿರುವುದರಿಂದ ನೂರಾರು ವಿದ್ಯಾರ್ಥಿಗಳಿಗೆ ಗಾಯವಾಗಿರುವುದಾಗಿ ಪ್ರಾಥಮಿಕ ಮಾಹಿತಿ ಲಭಿಸಿದೆ.
ಶುಕ್ರವಾರ ಮಧ್ಯಾಹ್ನ ವೇಳೆ ಈ ಘಟನೆ ನಡೆದಿದ್ದು ಮುಖ್ಯ ವೇದಿಕೆಯಾದ್ದರಿಂದ ಹಲವಾರು ಮಂದಿ ಇದರೊಳಗೆ ಇದ್ದು ಸೀಟಿನಡಿಯಲ್ಲಿ ಸಿಲುಕಿದ್ದರು.ಹಲವರಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿದ್ದು,ಅಗ್ನಿಶಾಮಕ ಸೇನೆ ಹಾಗೂ ಪೋಲಿಸರು ಸ್ಣಳಕ್ಕೆ ತಲುಪಿದ್ದಾರೆ.ಮಕ್ಕಳ ಸಹಿತ ಎಸ್ಕೊರ್ಟಿಂಗ್ ಟೀಚರ್ಸ್ ಹಾಗೂ ತೀರ್ಪುಗಾರರಿಗೆ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.




0 Comments