ಯುವ ಬರಹಗಾರ್ತಿ ಶ್ವೇತಾ ಕಜೆ ವಿಷ ಪ್ರಾಶನಗೈದು ಆತ್ಮಹತ್ಯೆ - ಸಾಹಿತ್ಯ ವಲಯದಲ್ಲಿ ದುಃಖ ಛಾಯೆ

 



 ಬದಿಯಡ್ಕ : ತುಳು ಕನ್ನಡ ಭಾಷೆಗಳಲ್ಲಿ ಸಕ್ರಿಯಯವಾಗಿ ಬರೆಯುತ್ತಾ ಸಾಹಿತ್ಯ ವಲಯದಲ್ಲಿ ಭರವಸೆ ಮೂಡಿಸಿದ್ದ ಕಾಸರಗೋಡು ಜಿಲ್ಲೆಯ ಕುಂಬ್ಡಾಜೆ ಗ್ರಾ.ಪಂ.ನ ಕಜೆ ನಿವಾಸಿ ಶ್ವೇತಾ (23) ಆತ್ಮಹತ್ಯೆಗೈದಿರುವುದಾಗಿ ತಿಳಿದು ಬಂದಿದೆ. ಮಾರಕ ವಿಷ ಈಕೆಯ ಹೊಟ್ಟೆಯೊಳಗೆ ಸೇರಿರುವುದರಿಂದ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 8 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. 



ಕಳೆದ ಮೂರು ದಿನಗಳ ಹಿಂದೆ ಮನೆ ಪರಿಸರದಲ್ಲಿ  ವಿಷ ಪ್ರಾಶನಗೈದು ಅಸ್ವಸ್ಥ ಸ್ಥಿತಿಯಲ್ಲಿದ್ದ ಇವಳನ್ನು ತಕ್ಷಣ ಮುಳ್ಳೇರಿಯಾ‌ ಆಸ್ಪತ್ರೆಗೂ ಅಲ್ಲಿಂದ ಪೆರಿಯಾರಂ ಮೆಡಿಕಲ್ ಕಾಲೇಜು ಬಳಿಕ ಕೋಝಿಕ್ಕೋಡು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ನಾರಾಯಣ ಲಲಿತಾ ದಂಪತಿಗಳ ಪುತ್ರಿಯಾದ ಶ್ವೇತಾ ಕಜೆ ಬಡ ಕುಟುಂಬದಲ್ಲಿ ಜನಿಸಿದರೂ ಚಿಕ್ಕಂದಿನಿಂದಲೇ ಸಾಹಿತ್ಯದತ್ತ ಒಲವು ಬೆಳೆಸಿ ಕವನ, ಕಥೆ,ನೀಳ್ಗತೆ,ಕಾದಂಬರಿ,ಗಝಲ್ ಗಳನ್ನು ರಚಿಸುವಲ್ಲಿ ಜನಪ್ರೀತಿ ಗಳಿಸಿದ್ದಳು, ತಾನು ಬರೆದ ಸಾಹಿತ್ಯವನ್ನು ಫೆಸ್ಬುಕ್, ಇನ್ಸ್ಟಾ ಗ್ರಾಂ‌, ವಾಟ್ಸಫ್,ಪ್ರತಿಲಿಪಿ ಮೊದಲಾದ ಆಧುನಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿದ್ದು ಇವಳ ಬರಹಗಳು ಜನ ಮೆಚ್ಚುಗೆಗೆ ಪಾತ್ರವಾಗಿತ್ತು. 


ಹಲವಾರು ಸಾಹಿತ್ಯ ಸ್ಪರ್ಧೆಗಳಲ್ಲೂ ಭಾಗವಹಿಸಿ ಬಹುಮಾನಗಳನ್ನು ತನ್ನದಾಗಿಸಿಕೊಳ್ಳುತ್ತಿರುವ ಈ ಯುವ ಪ್ರತಿಭೆ ಅಲ್ಲಲ್ಲಿ ನಡೆಯುವ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತುಳು- ಕನ್ನಡ ಸಾಹಿತ್ಯ ರಚನೆಯಲ್ಲಿ ಗುರುತಿಸಿಕೊಂಡಿದ್ದಳು. ಹಲವಾರು ವಾಟ್ಸಫ್ ಬಳಗದ ಸಾಹಿತ್ಯ ಗುಂಪುಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡು ತಾನು ಬರಹಗಳನ್ನು ಹಂಚುತ್ತಿದ್ದು ಕೆಲವೊಂದು ಗುಂಪುಗಳಲ್ಲಿ ಅಂಕಣ ಬರಹಗಳನ್ನು ಬರೆಯುತ್ತಾ ಭರವಸೆ ಹುಟ್ಟಿಸಿದ ಸೃಜನಶೀಲ ಕವಯತ್ರಿಯಾಗಿದ್ದಾಳೆಂದು  ಸಾಹಿತ್ಯಸಾಕ್ತರು ಹೇಳುತ್ತಿದ್ದಾಳೆ. 


ತುಳು ಕನ್ನಡ ಮಾತ್ರವಲ್ಲದೆ ಮಲೆಯಾಳಂ ಭಾಷೆಯ ಬಗ್ಗೆಯೂ ಜ್ಞಾನ ಬೆಳೆಸಿಕೊಂಡಿದ್ದ ಈಕೆ ಹಲವಾರು ಮಲೆಯಾಳ ಕವನಗಳನ್ನು ರಚಿಸಿದ್ದಾಳೆ. ಅನುವಾದಗೊಳಿಸಿದ್ದಾಳೆ.


ಈಕೆ ಬರೆದ " ಸತ್ಯೊದ ಮೈಮೆ" ಎಂಬ ತುಳು ಕಾದಂಬರಿ 2020ರಲ್ಲಿ ಪ್ರಕಟಗೊಂಡಿದೆ. ಅ ಅ ಬಳಿಕ ತುಳು ಗಝಲ್ ಹಾಗೂ ಸಣ್ಣ ಕತೆಗಳನ್ನು ರಚಿಸುತ್ತಿದ್ದ

ಈಕೆ ಮೊನ್ನೆ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ

ಕವಿಗೋಷ್ಠಿಯಲ್ಲಿ ಭಾಗವಹಿಸಿ  ಸಾಹಿತ್ಯಾಸಕ್ತರೊಡನೆ ಬೆರೆತಿರುವುದು ಜೀವನದ ಕೊನೆಯ ಕಾರ್ಯಕ್ರಮವಾಗಿದೆ. ಬದಿಯಡ್ಕದಲ್ಲಿ ಯಂತ್ರೋಪಕರಣದ ಬಿಡಿಭಾಗ ವಿತರಣಾ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಈಕೆ ಅಸೌಖ್ಯ ಕಾರಣ ನಾಲ್ಕು ದಿನ ರಜೆಯ ಮೇಲೆ ತೆರಳಿದ್ದಾಳೆಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಅಲಭ್ಯವಾಗಿದ್ದು ಪೋಸ್ಟುಮಾರ್ಟಂ ಬಳಿಕ ಮೃತದೇಹವನ್ನು ಮನೆ ಸಮೀಪ ಸಂಸ್ಕಾರ ನಡೆಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. 
 


ಕಳೆದ ಹಲವು ಸಮಯಗಳಿಂದ ಸದಾ ಮೌನಿಯಾಗಿದ್ದ ಈಕೆಯ ಸಾವು ಸಂಶಯಾಸ್ಪದವಾಗಿದ್ದು ತನಿಖೆ ನಡೆಸುವಂತೆ ಒತ್ತಾಯ ಮೂಡಿ ಬಂದಿದೆ.

ಯುವ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದ ಈಕೆಯ ಅಕಾಲಿಕ ಸಾವು ಸಾಹಿತ್ಯವಲಯಕ್ಕೆ ತುಂಬಲಾರದ ನಷ್ಟವಾಗಿದ್ದು ತುಳುವೆರೆ ಆಯನೋಕೂಟ ಬದಿಯಡ್ಕ, ಜೈ ತುಳುನಾಡ್ ಕಾಸ್ರೋಡು, ಜಿ.ಕೆ.ಚಾರಿಟೇಬಲ್ ಟ್ರಸ್ಟ್,ನಾವು ನಮ್ಮವರು,  ಬರವುದ ಬೊಲ್ಪು, ಬರವುದ ಭಂಡಾರ, ಮೌನ ಕೋಗಿಲೆ ಮೊದಲಾದ ಸಾಹಿತ್ಯ ಬಳಗಗಳು ಸಂತಾಪ ವ್ಯಕ್ತಪಡಿಸಿದೆ.

Post a Comment

0 Comments