ಅಬುಧಾಬಿಯ ಪ್ರತಿಷ್ಠಿತ " ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್ (ಐ.ಎಸ್ .ಸಿ.) " ಇದರ ಅಧ್ಯಕ್ಷರಾಗಿ , ಕನ್ನಡಿಗರಾದ ಪುತ್ತೂರಿನ ಸನಿಹದ ಮಿತ್ರ೦ಪಾಡಿ ಜಯರಾಮ ರೈ ಯವರು ಆಯ್ಕೆಯಾಗಿದ್ದಾರೆ.
ಜಯರಾಮ ರೈಯವರು ಸಮಾಜ ಸೇವೆಯನ್ನು ಸದ್ದಿಲ್ಲದೇ ಬಹಳ ವರ್ಷಗಳಿಂದ ಮಾಡಿದವರು. ಪುತ್ತೂರು ತಾಲೂಕಿನ ಗ್ರಾಮ ಸಾಹಿತ್ಯ ಸಂಭ್ರಮದ ಮಹಾಪೋಷಕರಾಗಿರುವ ಇವರು ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಜನರಿಗೆ ಸಹಾಯ ಹಸ್ತ ಚಾಚಿದವರು. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಸುಮಾರು ಇಪ್ಪತ್ತೆರಡು ವರ್ಷಗಳಿಂದ ಐ. ಏಸ್.ಸಿ. ಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಟೋಸ್ಟ್ ಮಾಸ್ಟರ್ ನಲ್ಲೂ ಉತ್ತಮ ಯೋಗದಾನ ಮಾಡಿದ್ದಾರೆ.
ಸ್ವಂತ ಕಟ್ಟಡ ಹೊಂದಿದ ಐ.ಎಸ್ .ಸಿ. ಯಲ್ಲಿ ಸುಸಜ್ಜಿತ ಸಭಾಂಗಣ ಇದೆ. ಸ್ವಿಮ್ಮಿಂಗ್ ಪೂಲ್ , ಬ್ಯಾಡ್ಮಿಂಟನ್ ಕೋರ್ಟ್ ಇತ್ಯಾದಿ ಸುಸಜ್ಜಿತ ವ್ಯವಸ್ಥೆ ಇದೆ . ನವಂಬರ್ ತಿಂಗಳಲ್ಲಿ , ನಮ್ಮ ರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ಆಗುವುದು ಇಲ್ಲೇ.
ದೇಶದ ಬೇರೆ ಬೇರೆ ಭಾಗಗಳಿಂದ ಸಾವಿರದ ಇನ್ನೂರಕ್ಕಿಂತ ಹೆಚ್ಚು ನೋಂದಾಯಿತ ಸದಸ್ಯ ರನ್ನು ಹೊಂದಿದ ಐ. ಎಸ್ .ಸಿ .ಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ನಿಜಕ್ಕೂ ಅಭಿಮಾನಕರ ವಿಚಾರ. ಸಮಾಜ ಸೇವೆಯ ಜತೆಗೆ ಅನಿವಾಸಿ ಭಾರತೀಯರಿಗೆ ಬಹಳಷ್ಟು ಒಳ್ಳೊಳ್ಳೆ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದು ವಿಶೇಷ ಚಾನೆಲ್ ಮಹಾಪೋಷಕರಲ್ಲಿ ಒರ್ವರಾದ ಮಿತ್ರಂಪಾಡಿ ಜಯರಾಮ ರೈ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಆವರಿಗೆ ಈ ಸಂದರ್ಭದಲ್ಲಿ ಓದುಗರ ಮತ್ತು ಚಾನೆಲ್ ಪರವಾಗಿ ಅಭಿನಂದನೆಗಳು.


0 Comments