ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರಕ್ಕೆ "ಯಕ್ಷದ್ರುವ ಪಟ್ಲ ಕಲಾ ಗೌರವ" ಪ್ರಶಸ್ತಿ ಪ್ರದಾನ

 


ದುಬೈ : ಯಕ್ಷದ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ (ರಿ)ಮಂಗಳೂರು ಇದರ ವತಿಯಿಂದ ಕಲಾ ಸಂಘಟನೆಗಾಗಿ ನೀಡುವ 2024 ನೇ ಸಾಲಿನ ಪ್ರತಿಷ್ಠಿತ "ಯಕ್ಷದ್ರುವ ಪಟ್ಲ ಕಲಾ ಗೌರವ" ಪ್ರಶಸ್ತಿಯನ್ನು ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ತನ್ನದಾಗಿಸಿತ್ತು.

ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಯಕ್ಷದ್ರುವ ಪಟ್ಲ ಸಂಭ್ರಮ-2024 ಕಾರ್ಯಕ್ರಮದಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜರವರಿಗೆ ಪ್ರಶಸ್ತಿಯೊಂದಿಗೆ ಇಪ್ಪತ್ತು ಸಾವಿರ ರೂಪಾಯಿ ಮೊತ್ತವನ್ನು  ನೀಡಿ ಗೌರವಿಸಲಾಯಿತು.


 ಪ್ರಶಸ್ತಿ ಮೊತ್ತವನ್ನು ಪಟ್ಲ‌ ಫೌಂಡೇಷನ್ ನ ಸಾಮಾಜಿಕ ಸೇವೆಗೆ ವಿನಿಯೋಗಿಸಲು ಸಹಕಾರಿಯಾಗುವಂತೆ ನೀಡಿದ ಪ್ರಶಸ್ತಿಯನ್ನು ಸ್ವೀಕರಿಸಿದರು. ಬಡ ಕಲಾವಿದರ ಏಳಿಗೆಗೆ ಅಹರ್ನಿಶಿ ದುಡಿಯುವ ಪಟ್ಲ ಪೌಂಡೇಶನ್ ಜತೆಗೆ ಪ್ರಶಸ್ತಿ ಮೊತ್ತವನ್ನು ನೀಡಿ ಅಳಿಲ ಸೇವೆಗೈದಿರುವುದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರ ಮಾದರಿಯಾಗಿದೆ.


ಕಳೆದ ಒಂಬತ್ತು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ಕಾರ್ಯಗಳನ್ನು ಹಮ್ಮಿಕೊಂಡು ಬಂದಿರುವಂತಹ ಯಕ್ಷಗಾನ ಅಭ್ಯಾಸ ಕೇಂದ್ರದ ಸಾಧನೆಗೆ ಸಿಕ್ಕಂತಾಹ ಈ ಪ್ರಶಸ್ತಿಯ ಸಂತಸವನ್ನು ವಿಶೇಷ ಚಾನೆಲ್ ನೊಂದಿಗೆ ಹಂಚಿಕೊಂಡ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ ಪಟ್ಲ ಪೌಂಡೇಶನ್ ನ ಕಾರ್ಯ ಯೋಜನೆಗಳನ್ನು ಶ್ಲಾಘಿಸಿದರು.

Post a Comment

0 Comments