ಅಂಗಡಿಮೊಗರು: ಇತಿಹಾಸ ಪ್ರಸಿದ್ಧ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಬಗ್ಗೆ ಚಾರಿತ್ರಿಕವಾಗಿ ನಿರ್ಮಿಸಿದ "ಕಾನದ ಬೊಲ್ಪು ಶ್ರೀಮಹಾಲಿಂಗೇಶ್ವರ" ಎಂಬ ಭಕ್ತಿ ಅಲ್ಬಂ ಸಾಂಗ್ ಧನು ಪೂಜೆಯ ಕೊನೆಯ ದಿನವಾದ ಜ.14 ಮಕರ ಸಂಕ್ರಮಣಕ್ಕೆ ಕ್ಷೇತ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ತುಳುನಾಡ ತುಡರ್ ಕ್ರಿಯೇಷನ್ ನಿರ್ಮಾಣದಲ್ಲಿ ಎ.ಡಿ.ಕೊರಗಪ್ಪ ಹಾಗೂ ಕಾರ್ತಿಕ್ ಲಾಲ್ ಭಾಗ್ ಸಾಹಿತ್ಯ ರಚಿಸಿ ಡಿ.ಪ್ರವೀಣ್ ಕುಮಾರ್ ನಿರ್ದೇಶನದಲ್ಲಿ ಸೋಮನಾಥ್ ಮಂಗಲ್ಪಾಡಿ, ಕುಮಾರಿ ಅಂಜಲಿ ಡಿ.ಹಾಗೂ ಸದಾನಂದ ಮಂಜತ್ತಡ್ಕ ಹಾಡಿರುವ ತುಳು ಹಾಗೂ ಕನ್ನಡ ಭಕ್ತಿಗೀತೆಯನ್ನು ಕ್ಷೇತ್ರ ಪರಿಸರದ ಸುಂದರ ಹೋರಾಂಗಣದಲ್ಲಿ ನೃತ್ಯ ವೈವಿಧ್ಯತೆಯೊಂದಿಗೆ ಚಿತ್ರೀಕರಿಸಲಾಗಿದೆ. ಈಗಾಗಲೇ ಈ ಅಲ್ಬಂ ಸಾಂಗ್ ನ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದ್ದು ಅತ್ಯಧಿಕ ಜನ ವೀಕ್ಷಣೆಯ ಮೆಚ್ಚುಗೆ ಪಡೆದುಕೊಂಡಿದೆ.
ಮೇಲಿನ ಲಿಂಕ್ ಒತ್ತುವ ಮೂಲಕ ಅಲ್ಬಂ ನ ಟೀಸರ್ ವೀಕ್ಷಿಸಿ...ಲೈಕ್ ಮಾಡಿ.... ,ಪ್ರೋತ್ಸಾಹಿಸಿ.


0 Comments