7ನೇ ವರ್ಷಾಚರಣೆಯ ಸಂಭ್ರಮದಲ್ಲಿ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡಕ್ಕೆ ನೂತನ ಸಾರಥ್ಯ


ಅಬುಧಾಬಿ : ದುಬೈ ಕೇಂದ್ರೀಕರಿಸಿ ಸಂಯುಕ್ತ ಅರಬ್ ಸಂಸ್ಥಾನದ ಅಬುಧಾಬಿ,ಅಜ್ಮಾನ್, ಶಾರ್ಜಾ, ಫುಜೆರಾ,ರಾಸ್ ಅಲ್ ಕೈಮಾ,ಉಮ್ಮುಲ್ ಕ್ವೀನ್ ಪ್ರದೇಶಗಳಲ್ಲಿ ಇರುವ ಕನ್ನಡಿಗರು ಒಗ್ಗೂಡಿ ಕನ್ನಡಪರ ಸಮಾಜಪರ ಕಾರ್ಯಗಳನ್ನು ಮಾಡುತ್ತಿರುವ ಹೆಮ್ಮೆಯ ಯುಎಇ ಕನ್ನಡಿಗರು ಸಂಘಟನೆಯ 2022ನೇ ಸಾಲಿನ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಮತ್ತು ಹೊಸ ಉಪ ಸಮಿತಿ ಸದಸ್ಯರ ಸೇರ್ಪಡೆ ಸಮಾರಂಭ ನಡೆಯಿತು.

ಇದೇ ಸಂಧರ್ಭದಲ್ಲಿ ಸಮಿತಿ ಸದಸ್ಯರ ಕುಟುಂಬದ ಜೊತೆ ಹೆಮ್ಮೆಯ ಕನ್ನಡಿಗರು ತಂಡದ 7ನೇ ವಾರ್ಷಿಕೋತ್ಸವ ಪುಟಾಣಿ ಮಕ್ಕಳು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ತಂಡದ ಗೌರವಾಧ್ಯಕ್ಷರಾದ ಶ್ರೀಯುತ ಮೊಹಮ್ಮದ್ ಮುಸ್ತಫಾ ಅವರ ಅದ್ಯಕ್ಷತೆಯಲ್ಲಿ  ನಡೆದ ಸಮಿತಿ ವಾರ್ಷಿಕ ಸಭೆಯಲ್ಲಿ ಹೆಮ್ಮೆಯ ಕನ್ನಡಿಗರು ಸಂಘದ ಅಧ್ಯಕ್ಷರಾಗಿ ಸುದೀಪ್ ದಾವಣಗೆರೆ ಅವರು ನೇಮಕವಾದರು ಮತ್ತು ಮುಖ್ಯ ಕಾರ್ಯದರ್ಶಿಯಾಗಿ ಶಂಕರ್ ಬೆಳಗಾವಿ ಅವರು ನೇಮಕಗೊಂಡರು, ಮಾಜಿ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು ಅವರು  ಟೀಮ್ ಎಚ್ ಯು ಕೆಯ ಶಾಲ್ ಹಸ್ತಾಂತರ ಮಾಡುವ ಮೂಲಕ ಹೊಸ ಅಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. 

ಹೆಮ್ಮೆಯ ಕನ್ನಡಿಗರು ತಂಡದ ಸಲಹಾ ಸಮಿತಿಯ ಅಧ್ಯಕ್ಷರಾಗಿ ಶ್ರೀಯುತ ರಾಘವೇಂದ್ರ ಅವರು ನೇಮಕಗೊಂಡರು, ತಂಡದ ಮುಖ್ಯ ಸಂಚಾಲಕರಾಗಿ ರಫೀಕಲಿ ಕೊಡಗು ಅವರು ಮರು ನೇಮಕಗೊಂಡರು.

ತಂಡದ ಮಹಿಳಾ ಘಟಕಕ್ಕೆ ಶ್ರೀಮತಿ ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ,ಹಾದಿಯ ಮಂಡ್ಯ ಮತ್ತು ಅನಿತಾ ಬೆಂಗಳೂರು ಅವರು ನೇಮಕಗೊಂಡರೆ ಕನ್ನಡ ವೈದ್ಯರುಗಳ ತಂಡದ ಸಂಚಾಲಕಿಯಾಗಿ ಡಾ.ಸವಿತಾ ಮೈಸೂರು ಅವರು ನೇಮಕಗೊಂಡರು, ಕನ್ನಡ ಸಾಹಿತ್ಯ ಸಂಘದ ಸಂಚಾಲಕರಾಗಿ ವಿಷ್ಣುಮೂರ್ತಿ ಮೈಸೂರು ಅವರು ನೇಮಕಗೊಂಡರು ಮತ್ತು ತಂಡದ ಮುಖ್ಯ ಸಮಿತಿ ಸದಸ್ಯರುಗಳಾಗಿ ಮೊಯಿನುದ್ದೀನ್ ಹುಬ್ಬಳ್ಳಿ, ಮಧು ದಾವಣಗೆರೆ, ವರದರಾಜ್ ಕೋಲಾರ ಮತ್ತು ನವೀನ್ ಬೆಂಗಳೂರು ಅವರು ನೇಮಕಗೊಂಡರು. 


ತಂಡದ ಉಪಸಮಿತಿಗೆ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಕನ್ನಡ ಶಾಲ್ ಹೊದಿಸಿ ಸ್ವಾಗತ ಮಾಡಲಾಯಿತು , ಉಪ ಸಮಿತಿ ಸದಸ್ಯರುಗಳಾಗಿ ಅಕ್ರಮ್ ಕೊಡಗು, ಅಂತೋಣಿ ಮಂಗಳೂರು, ಆಶಾ ಕುಂದಾಪುರ, ಅಶ್ರಫ್ ವಿಟ್ಲ, ಅಸ್ಲಮ್ ಕೊಡಗು, ಕ್ಲೀವನ್ ಉಡುಪಿ,ಅಬ್ದುಲ್ ಹಾದಿ ಕುಂದಾಪುರ, ಲಾರೆನ್ಸ್ ಮಂಗಳೂರು, ಮುಜೀಬ್ ಮಾಸ್ಟರ್ ಕೊಡಗು, ಮೊಣ್ಣಪ್ಪ ಮಾಸ್ಟರ್ ಕೊಡಗು, ನವಾಜ್ ಕುಂದಾಪುರ, ನಜೀರ ಮಂಡ್ಯ, ನಿಜಾರ್ ಕಾಸರಗೋಡು, ರಾಮ ಕಾಮತ್ ಬೆಳಗಾವಿ, ಸತ್ತಾರ್ ಕೊಡಗು, ಸೌರಭ್ ಕಾರಿಯಪ್ಪ ಕೊಡಗು, ಶಿಹಾಬ್ ಸುಳ್ಯ, ಸೋಮಶೇಖರ್ ರೆಡ್ಡಿ ಬೆಂಗಳೂರು, ಸುಧೀರ್ ಮಂಗಳೂರು, ಇರ್ಷಾದ್ ಶಿವಮೊಗ್ಗ, ತವುಸೀಫ್ ಹುಬ್ಬಳ್ಳಿ, ವೀರಪ್ಪ ಮಂಡ್ಯ ಮುಂತಾದವರು ನೇಮಕಗೊಂಡರು. 

ನಡೆದು ಬಂದ ದಾರಿ....ಹೆಮ್ಮೆಯ ಕನ್ನಡಿಗರು ತಂಡವು ಕಳೆದ ಹಲವು ವರ್ಷಗಳಿಂದ ದಸರಾ, ರಾಜ್ಯೋತ್ಸವ, ಮಕ್ಕಳ ಪ್ರತಿಭಾ ಸ್ಪರ್ಧೆ ಮುಂತಾದ ಹಲವು  ಕನ್ನಡ ಕಾರ್ಯಕ್ರಮಗಳ ಜೊತೆ ತಂಡದ ಸಹಾಯ ಹಸ್ತ ವಿಭಾಗದ ವತಿಯಿಂದ ಯುಎಇಯಲ್ಲಿ ಮತ್ತು ತಾಯಿನಾಡಲ್ಲಿ ಸಂಕಷ್ಟದಲ್ಲಿರುವ ಹಲವರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ, ಹಾಗೆ ಕರುನಾಡಿನಿಂದ ಕೆಲಸ ಹುಡುಕಿಕೊಂಡು ಬಂದ ಕನ್ನಡಿಗರಿಗೆ ತಂಡದ ಜಾಬ್ ಹೆಲ್ಫಿನ್ಗ್ ವಿಂಗ್ ಮುಖಾಂತರ ಹಲವರಿಗೆ ಕೆಲಸ ಕೊಡಿಸಿದ್ದಾರೆ, ಹಾಗೆ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ವ್ಯವಹಾರ ಮಾಡುವ ಕನ್ನಡಿಗರನ್ನು ಒಗ್ಗೂಡಿಸಿ ಯುಎಇ ಕನ್ನಡಿಗಾಸ್ ಬಿಸ್ನೆಸ್ ಫೈರುಮ್ ಎಂಬ ಕಲ್ಪನೆಯನ್ನು ಸ್ಥಾಪಿಸಿ ಕನ್ನಡಿಗರ ನಡುವೆ ವ್ಯವಹಾರ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ, ಹಾಗೆ ಕನ್ನಡ ವೈದ್ಯರುಗಳಿಗೆ ಡಾಕ್ಟರ್ಸ್ ಡೇ ಆಚರಿಸುತ್ತಾರೆ.

ಜಾಹೀರಾತು






Post a Comment

0 Comments