ಮಲ್ಲದಲ್ಲಿ ದಲಿತ ಯುವಕನಿಗೆ ಹಲ್ಲೆ |ಅಂಬೇಡ್ಕರ್ ವಿಚಾರ ವೇದಿಕೆ ಖಂಡನೆ


ಕಾಸರಗೋಡು : ಇತ್ತೀಚೆಗೆ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ದಲಿತ ಯುವಕನ ಮೇಲೆ ನಡೆದ ಹಲ್ಲೆಯನ್ನು ಅಂಬೇಡ್ಕರ್ ವಿಚಾರ ವೇದಿಕೆ ತೀವ್ರವಾಗಿ ಖಂಡಿಸಿದೆ. ಮಾನಸಿಕ ಅಸ್ವಸ್ಥನೆನ್ನಲಾದ ಮೊಗೇರ ಸಮುದಾಯದ ಅನಿಲ್ ಕುಮಾರ್ ಎಂಬ ಯುವಕ ಮಲ್ಲ ಕ್ಷೇತ್ರದೊಳಗೆ ಪ್ರವೇಶಿಸಿದನೆಂಬ ಕಾರಣಕ್ಕೆ ಅಲ್ಲಿನ ಸಿಬ್ಬಂದಿಗಳು ಸಹಿತ ಸ್ಥಳೀಯರು ಯುವಕನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆಗೊಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯಾವುದೇ ರೀತಿಯ ಹಿಂಸಾಚಾರ ನಡೆಸದ ಈ ವ್ಯಕ್ತಿ ದೇವಸ್ಥಾನ ಪ್ರವೇಶಿಸಿದನೆಂಬ ಕಾರಣಕ್ಕೆ ಹಲ್ಲೆಗೊಳಿಸಲಾಗಿದೆ.ಆತನನ್ನು ಕಾನೂನು ಪಾಲಕರ ವಶಕ್ಕೆ ಒಪ್ಪಿಸುವುದು ಬಿಟ್ಟು ಮಾರಣಾಂತಿಕ ಹಲ್ಲೆ ನಡೆಸಲು ಯಾರಿಗೂ ಅಧಿಕಾರವಿಲ್ಲ. ಪೋಲೀಸರು ಘಟನೆಗೆ ಸಂಬಂಧಿಸಿ ಕೂಡಲೇ ಕೇಸು ದಾಖಲಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಅಂಬೇಡ್ಕರ್ ವಿಚಾರ ವೇದಿಕೆ ಆಗ್ರಹಿಸಿದೆ.

ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆಯವರ ಅಧ್ಯಕ್ಷತೆಯಲ್ಲಿ ನೀರ್ಚಾಲಿನಲ್ಲಿ ನಡೆದ ತುರ್ತು ಸಭೆಯಲ್ಲಿ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ , ಪದಾಧಿಕಾರಿಗಳಾದ ಸುಂದರ ಬಾರಡ್ಕ , ವಿಜಯ ಕುಮಾರ್ ಬಾರಡ್ಕ , ಸಲಹೆಗಾರರಾದ ಕೃಷ್ಣ.ಡಿ.ದರ್ಬೆತ್ತಡ್ಕ , ಗಂಗಾಧರ ಗೋಳಿಯಡ್ಕ , ರಾಧಾಕೃಷ್ಣ .ಕೆ.ಉಳಿಯತ್ತಡ್ಕ , ಉದಯ ಕುಮಾರ್ ಮುಂಡೋಡು , ಪದ್ಮನಾಭ ಚೇನೆಕೋಡು , ಶಂಕರ ಸ್ವಾಮಿಕೃಪಾ , ವಸಂತ ಬಾರಡ್ಕ ಉಪಸ್ಥಿತರಿದ್ದರು.

Post a Comment

0 Comments