ಧಾರ್ಮಿಕ -ಸಾಮಾಜಿಕ ರಂಗದ ಜನಪರ ಜನ ನಾಯಕ ಈ ಕಾನೂನು ಪಾಲಕ- ನ್ಯಾಯವಾದಿ ನವೀನ್ ರಾಜ್ ಕೆ.ಜೆ. 45ನೇ ಜನುಮ ದಿನ ಸಂಭ್ರಮ

 ಮಂಜೇಶ್ವರ (ಜನುಮ ದಿನ_ವಿಶೇಷ): ವೃತ್ತಿ ಹಾಗೂ ಪ್ರವೃತ್ತಿಯನ್ನು ಜನಪರ ಕಾರ್ಯಗಳಿಗೆ ಮೀಸಲಿರಿಸಿದ ಅಪರೂಪದ ಜನ ನಾಯಕ. 

ಮಂಜೇಶ್ವರ ಎಂಬ ಗಡಿನಾಡಿನಲ್ಲಿ ಇದೀಗ ಸಾಮಾಜಿಕ-ಧಾರ್ಮಿಕ ರಂಗದಲ್ಲಿ ಅಚ್ಚೊತ್ತಿದ ಹೆಸರು   ಯುವ ಮುಂದಾಳು ನವೀನ್ ರಾಜ್ ಕೆ.ಜೆ. ಅವರದ್ದಾಗಿದೆ. ಇಂದು 45ನೇ ವರುಷದ ಜನುಮ ದಿನವನ್ನು ಆಚರಿಸುತ್ತಿರುವ ಈ ಯುವ ನ್ಯಾಯವಾದಿಯ ಬದುಕಿನ‌ ಸವಿಶೇಷತೆಯ ಸಾಧನೆಗಳನ್ನು "ವಿಶೇಷ ಚಾನೆಲ್" ಸಚಿತ್ರವಾಗಿ ವಾಚಕರ ಮುಂದಿಡುತ್ತಿದೆ. 
.     ಕೇರಳ -ಕರ್ನಾಟಕದ ಗಡಿನಾಡು
ಬಂಗ್ರಮಂಜೇಶ್ವರದ ಮೂಲತಃ ಕೊಪ್ಪಳ ಜಯರಾಂ-ಜಯಲಕ್ಷ್ಮಿ ದಂಪತಿಗಳ ಪುತ್ರರಾಗಿ 
17-09-1975ರಂದು ಜನಿಸಿದ ನವೀನ್ ರಾಜ್ ಕೆ.ಜೆ. ಬಂಗ್ರಮಂಜೇಶ್ವರ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಗಳಿಸಿಕೊಂಡರು‌. ಉಳ್ಳಾಲದ ಸಯ್ಯದ್ ಮದನಿ ಕಾಲೇಜ್ ನಲ್ಲಿ ಪಿಯುಸಿ ಶಿಕ್ಷಣದ ಬಳಿಕ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಹಾಗೂ ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಪೂರೈಸಿದ್ದರು. 
ಶೈಕ್ಷಣಿಕ ಸಂದರ್ಭದಿಂದಲೇ ಸಂಘಟನಾತ್ಮಕ ಮನೋಭಾವ,  ಧಾರ್ಮಿಕ ಹಾಗೂ ಸಾಮಾಜಿಕ ರಂಗದ ಒಲವು ಬೆಳೆಸಿಕೊಂಡ ಇವರು ಕಾನೂನು ವಿದ್ಯಾರ್ಥಿಯಾಗಿರುವಾಗಲೇ ಮಂಜೇಶ್ವರದ ಭಾರತ್ ಕಾಲೇಜಿನಲ್ಲಿ ತಾತ್ಕಲಿಕ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.  ಬಳಿಕ ಕಾಸರಗೋಡಿನಲ್ಲಿ ನ್ಯಾಯವಾದಿಯಾಗಿ ವೃತ್ತಿ ಜೀವನಕ್ಕೆ ಪಾದಾರ್ಪಣೆಗೈದರು.
ತನ್ನ ಕಾನೂನು ಸೇವಾವಧಿಯಲ್ಲಿ ಜನ ಸಾಮಾನ್ಯರ ಬಗೆಗಿನ ನ್ಯಾಯಯುತ ಧ್ವನಿಯಾಗಿದ್ದಾರೆ. ಜನಪರ ಕಾಳಜಿಯುಳ್ಳ ಇವರು ಕೇರಳದ ಎರ್ನಾಕುಳಂ ಸಮೀಪದ ಅಲುವ ಎಂಬಲ್ಲಿರುವ SOS ಎಂಬ ಮಕ್ಕಳ ಗ್ರಾಮಕ್ಕೆ ಕೈ ಮಿಗಿಲಾದ ಸೇವಾ ಸಹಾಯ ನೀಡುವ ಮೂಲಕ ಕೊಡುಗೈ ದಾನದ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ.  
ಸಾಮಾಜಿಕವಾದ ರಾಜಕೀಯದ ಭಾರತೀಯ ಜನತಾ ಪಕ್ಷದಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡು ಯುವ ಜನತೆಯ ಕಣ್ಮಣಿಯಾಗಿ ಮೂಡಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಕಾಲೇಜ್ ಕಾರ್ಯದರ್ಶಿ, ಯುವಮೋರ್ಚಾ ಮಂಜೇಶ್ವರ ಮಂಡಲ ಕೋಶಾಧಿಕಾರಿ ಹಾಗೂ ಮಂಜೇಶ್ವರ ಪಂ. ಸಮಿತಿ ಕಾರ್ಯದರ್ಶಿ, ಬಿಜೆಪಿಯ ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷರಾಗಿ ಸತತ ಮೂರು ಭಾರಿ ಆಯ್ಕೆಯಾಗಿದ್ದರು. ಮಂಜೇಶ್ವರ ಮಂಡಲ ಪ್ರ.ಕಾರ್ಯದರ್ಶಿ, ಜಿಲ್ಲಾ ಸಮಿತಿ ಸದಸ್ಯತ್ವ, ಒಬಿಸಿ ಮೋರ್ಚಾ ರಾಜ್ಯ ಸಮಿತಿ ಸದಸ್ಯ,ಕಾಸರಗೋಡು ವಕೀಲರ ಸಂಘವಾದ ಬಾರ್ ಅಸೋಶಿಯೇಶನ್ ಜತೆ ಕಾರ್ಯದರ್ಶಿಯಾಗಿ ಪ್ರಸ್ತುತ ಕಾರ್ಯಕಾರಿ ಸಮಿತಿ ಸದಸ್ಯ ಮೊದಲಾದ  ಜವಾಬ್ದಾರಿಯುತ ಸ್ಥಾನ ಮಾನಗಳಿಗೆ ಅರ್ಹರಾದರು.
ಪ್ರಸಿದ್ಧ ಮಂಜೇಶ್ವರ ಗಣೇಶೋತ್ಸವ,ತುಳುನಾಡ ಬಾಲೆ ಬಂಗಾರ್ ಹಾಗೂ ಹಲವಾರು ಕ್ಷೇತ್ರ,ಮಂದಿರ ಜೀರ್ಣೋದ್ಧಾರ ಮೊದಲಾದ ಸಾಮಾಜಿಕ,ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿನ ಸಕ್ರಿಯತೆ ಗಮನಾರ್ಹವಾಗಿದೆ. 

ಮಂಜೇಶ್ವರದ ಹೆಚ್ಚಿನ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ, ಸದಸ್ಯರಾಗಿ,ಪೋಷಕರಾಗಿ ಗುರುತಿಸಿಕೊಂಡಿರುವ ನವೀನ್ ರಾಜ್ ಅವರ ನೇತೃತ್ವದಲ್ಲಿ ಬಡ ಜನತೆಗೆ,ದುರ್ಬಲರಿಗೆ,ಅಸೌಖ್ಯ ಪೀಡಿತರಿಗೆ ಆಸರೆಯಾಗುವ ಹಲವಾರು ಕಾರ್ಯ ಚಟುವಟಿಕೆಗಳು ನಡೆದಿರುವುದು ಇವರ ಸಾಮಾಜಿಕ ಕಾಳಜಿಗೊಂದು ಸ್ಪಷ್ಟ ನಿದರ್ಶನವಾಗಿದೆ. 

      ಗಡಿನಾಡ ಹೋರಾಟದ ನವ ಸೇನಾನಿ.....
ಹಿಂದಿ,ಇಂಗ್ಲಿಷ್,
ಕನ್ನಡ,ಮಲೆಯಾಳ,ತುಳು ಹೀಗೆ ಬಹು ಭಾಷಾ ಬಲ್ಲವರಾಗಿ ಜನ ಸಾಮಾನ್ಯರ ಸಾಮಾಜಿಕ ನೋವು ನಲಿವಿಗೆ ಸ್ಪಂದಿಸುವ ಅಪರೂಪದ ಗುಣವನ್ನು ಬೆಳೆಸಿಕೊಂಡಿರುವ ನವೀನ್ ರಾಜ್ ಅವರು ಕಳೆದ ಲಾಕ್ ಡೌನ್ ಕಾಲದಲ್ಲಿ ತಲಪಾಡಿಯ ಅಂತರರಾಜ್ಯ ಸಂಪರ್ಕದ ಗಡಿ ಮುಚ್ಚಿದ್ದು ಉದ್ಯೋಗಿಗಳಿಗೆ ಸಮಸ್ಯೆಯಾಗುತ್ತಿರುವುದನ್ನು ಪ್ರತಿಭಟಿಸಿ ಮೊತ್ತ ಮೊದಲು ರಂಗಕ್ಕಿಳಿದಿದ್ದರು. ಬಳಿಕ ನಿರಂತರ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಸರಗೋಡಿನ ಉಸ್ತುವಾರಿ ಕಂದಾಯ ಸಚಿವ ಇ.ಚಂದ್ರಶೇಖರ್ ಅವರನ್ನು ನಿತ್ಯ ನಿರಂತರ ಸಂಪರ್ಕಿಸಿ ಉದ್ಯೋಗಿಗಳಿಗೆ ಪಾಸ್ ಮೂಲಕ ಸಂಚಾರ ಏರ್ಪಡಿಸುವಂತಾಗಿಸುವಲ್ಲಿ ಪ್ರಮುಖ ನೇತೃತ್ವವಹಿಸಿರುವುದನ್ನು ಜನತೆ ಪ್ರಶಂಸಿದ್ದರು. ಅಂತರರಾಜ್ಯ ಗಡಿ ನಿರ್ಬಂಧ ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಒತ್ತಡ ಹೇರಿ ಮಂಜೇಶ್ವರದಲ್ಲಿ ಪೋಸ್ಟ್ ಕಾರ್ಡ್ ಚಳುವಳಿ ಏರ್ಪಡಿಸಿ ಗಮನ ಸೆಳೆದಿದ್ದರು.
ಪ್ರಸ್ತುತ ಭಾರತೀಯ ಅಲ್ಪಸಂಖ್ಯಾತ ಮೋರ್ಚಾದ ಕೇರಳ ರಾಜ್ಯ ಕೋಶಾಧಿಕಾರಿಯಾಗಿ ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕಿನಲ್ಲಿ ಸಾಮಾಜಿಕ ಸ್ಪಂದನೆಯ ಕಾರ್ಯ ಚಟುವಟಿಕೆಗಳನ್ನು ಕೈಗೆತ್ತಿಕೊಂಡು ಯಶಸ್ವಿಗೊಳಿಸುತ್ತಿದ್ದಾರೆ. 
ಬದುಕಿನಲ್ಲಿ ಅಸಾಮಾನ್ಯ ಸಾಧನೆಗಳ ಮೂಲಕ ಎಷ್ಟೇ ಎತ್ತರಕ್ಕೇರಿದರೂ ಜನ ಸಾಮಾನ್ಯನಂತೆ ತೆರೆಯ ಮರೆಯ ಈ ಅಪರೂಪದ ಜನ ನಾಯಕ ಹಿರಿಯರಲ್ಲಿ ತೋರ್ಪಡಿಸುವ ಗೌರವ,ಕಿರಿಯ- ರೊಂದಿಗಿನ ಪ್ರೀತಿ, ಕಲೆ,ಸಾಹಿತ್ಯ,ಸಾಮಾಜಿಕ ರಂಗದ ಪ್ರೋತ್ಸಾಹಕ ರೀತಿ ಮಾತ್ರ ಅನನ್ಯವಾಗಿದೆ. ಎಲ್ಲಾ ಸ್ತರದ ವ್ಯಕ್ತಿಗಳೊಂದಿಗೂ ಸ್ನೇಹ -ಸೌಹರ್ದತೆಯ ನಿಕಟ ಸಂಪರ್ಕ ಇರಿಸಿಕೊಂಡ
ನವೀನ್ ರಾಜ್ ಅವರು ಧರ್ಮಪತ್ನಿ ಅನುಪಮ ಹಾಗೂ ಪುತ್ರ ತೇಜಸ್ (ಮಂಗಳೂರು ಕೆನರಾ ಶಾಲಾ 7ನೇ ತರಗತಿ ವಿದ್ಯಾರ್ಥಿ),ಪುತ್ರಿ ದಿಯ (ಮಂಜೇಶ್ವರ ಇನ್ ಫೆಂಟ್ ಜೀಸಸ್ ಶಾಲಾ 3ನೇ ತರಗತಿ) 
ಅವರೊಂದಿಗೆ ಹೊಸಂಗಡಿ ಸಮೀಪದ ಅಂಗಡಿಪದವಿನಲ್ಲಿ  ಸಂತೃಪ್ತ ಸಂಸಾರ ಸಾಗಿಸುತ್ತಿದ್ದಾರೆ. 
45ನೇ ವರುಷದ ಈ ಜನುಮ ದಿನದ ಆಚರಣೆಯ ಬಳಿಕ ಮುಂದಿನ ಸಂವತ್ಸರದ ಬದುಕು ಇನ್ನಷ್ಟು ಕೀರ್ತಿ-ಸಾಧನೆ-ಯಶಸ್ಸು ಪಡೆಯುವಂತಾಗಲೆಂದು ಈ ಸಂದರ್ಭದಲ್ಲಿ ನಾವೆಲ್ಲರೂ  ಶುಭ ಕೋರುವ.
ನವೀನ್ ರಾಜ್ ಕೆ.ಜೆ.ಸಂಪರ್ಕ ಸಂಖ್ಯೆ : +91 98953 23641

Post a Comment

0 Comments