ಸಂಕಷ್ಟದಲ್ಲಿ ಅಪತ್ಬಾಂಧನಾಗುವ ಹೆಮ್ಮೆಯ ದುಬೈ ಕನ್ನಡಿಗ "ರಫೀಕಲಿ ಕೊಡಗು"

    

ವಿದೇಶ_ವಿಶೇಷ   ಅಂಕಣ- 15

ಯುಎಇ: ಅರಬ್ ರಾಷ್ಟ್ರದಲ್ಲಿ ತನ್ನ ಹೆಸರಿನ ಜತೆಗೆ ತನ್ನೂರ ಹೆಸರನ್ನು ಸೇರಿಸಿ ಕನ್ನಡಿಗರ ಸಂಕಷ್ಟ ನಿವಾರಣೆಗೆ ಆಹೋರಾತ್ರಿ ಕಾರ್ಯ ನಿರತರಾಗುವ ವಿಶೇಷ ಸಮಾಜ ಸೇವಕರೋರ್ವರನ್ನು ವಿದೇಶ_ವಿಶೇಷದ ಈ ಅಂಕಣದಲ್ಲಿ ಪರಿಚಯಿಸುತ್ತಿದ್ದೇವೆ. 


ಕೊಡಗಿನ ಕಾವೇರಮ್ಮನ ಮಡಿಲಿನಿಂದ ಮರಳುಗಾಡಿನ ಒಡಲಿಗೆ ಬಂದು ಕಾಯಕ ನಿರತರಾಗುವ ಜತೆಗೆ ಸಮಾಜ ಸೇವೆಗೆ ಸ್ಪಂದಿಸುವ "ರಫೀಕಲಿ ಕೊಡಗು" ಯುಎಇ ಕನ್ನಡಿಗರಿಗೆ ಚಿರಪರಿಚಿತ ವ್ಯಕ್ತಿ, ಸಾಮಾನ್ಯ ಬಡ ರೈತ ಕುಟುಂಬದಲ್ಲಿ ಜನಿಸಿದ ಇವರು ಮೂಲತಃ ಕೊಡಗಿನ ಕುಂಡಂಡ ಮನೆತನ ಕುಂಜಿಲ ಕಕ್ಕಬೆ ಗ್ರಾಮಕ್ಕೆ ಸೇರಿದವರಾಗಿದ್ದು ತಮ್ಮ ಪದವಿ ಶಿಕ್ಷಣವನ್ನು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಿಂದ ಪಡೆದಿರುತ್ತಾರೆ, ಇವರ ತಂದೆ ಹೆಸರು ಆಲಿ ಮತ್ತು ತಾಯಿ ಫಾತಿಮ, 7ಜನ ಮಕಳಲ್ಲಿ ಇವರು ಕೊನೆಯ ಪುತ್ರನಾಗಿದ್ದಾನೆ, 


ಕಳೆದ 13 ವರ್ಷಗಳಿಂದ ದುಬೈಯಲ್ಲಿ ಗ್ರೀಸ್ ಮೂಲದ ಕಂಪನಿಯಲ್ಲಿ ಅಕೌಂಟೆಂಟ್ ವೃತ್ತಿಯಲ್ಲಿ ತೊಡಗಿದ್ದು ಕರ್ನಾಟಕ ಟೂರ್ಸ್ ಅಂಡ್ ಟ್ರಾವೆಲ್ಸ್ ಎಂಬ ಸಂಸ್ಥೆಯನ್ನು ಸಹ ನಡೆಸುತ್ತಿದ್ದು ಬಿಡುವಿನ ವೇಳೆಯಲ್ಲಿ ಕನ್ನಡಪರ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ,  ದೈನಂದಿನ ಜೀವನವನ್ನು ಕಟ್ಟಿಕೊಳ್ಳಲು ತಾಯ್ನಾಡನ್ನು ಬಿಟ್ಟು ಅರಬರ ಮಣ್ಣಿಗೆ ತೆರಳಿದವರಿಗೆ ಎಂತಹ ಅಪತ್ ಕಾಲದಲ್ಲೂ ರಾತ್ರಿ ಹಗಲೆನ್ನದೆ ಸಂಕಷ್ಟದಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವ ಮನಸ್ಸಿರುವ ನೆಚ್ಚಿನ ರಫೀಕಲಿ ಕೊಡಗು ಹೆಮ್ಮೆಯ ದುಬೈ ಕನ್ನಡಿಗ.

ಕೋವಿಡ್ ರೋಗಿಗಳಿಗೆ ಆಹಾರ ಔಷಧಿ ವಿತರಣೆ ಕಾರ್ಯದಲ್ಲಿ ಇವರ ಪಾತ್ರ ಗಮನಾರ್ಹವಾಗಿದೆ.


ಕೊರೋನಾ ಮಹಾಮಾರಿ ಪ್ರಾರಂಭವಾಗಿ ಲಕ್ಷಾಂತರ ಜನರು ವಾಸಿಸುವ ದುಬೈಯ ಹೃದಯ ಭಾಗವಾದ ದೇರಾ ದುಬೈ ಕೋರೋನ ವೈರಸ್ ಹಾಟ್ ಸ್ಪಾಟ್ ಸ್ಥಳವಾಗಿ ಮಾರ್ಪಟ್ಟಾಗ ದುಬೈ ಸರ್ಕಾರ ದೇರಾ ಸ್ಥಳವನ್ನು ಸಂಪೂರ್ಣವಾಗಿ ಎರಡು ತಿಂಗಳುಗಳ ಕಾಲ ಲಕ್ಡೌನ್ ಮೇಲೆ ಸೀಲ್ಡೌನ್ ಮಾಡಿದರು ( ಈ ಪ್ರದೇಶದಿಂದ ಯಾರು ಸಹ ಹೊರ ಹೋಗುವಾಗಿಲ್ಲ ಮತ್ತು ಇಲ್ಲಿಗೆ ಯಾರು ಸಹ ಒಳ ಬರುವಾಗಿಲ್ಲ ಎಂಬ ನಿಷೇದಾಜ್ಞೆ) , ಈ ಸೀಲ್ಡೌನ್ ಸಮಯದಲ್ಲಿ ದುಬೈ ಪೊಲೀಸರು ಮತ್ತು ದುಬೈ ಅರೋಗ್ಯ ಸಂಸ್ಥೆಯೊಂದಿಗೆ ಸೇರಿ ವತನಿ ಅಲ್ ಎಮಾರತ್ ಫೌಂಡೇಶನ್ ಅಧೀನದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ಕರ್ನಾಟಕದದಿಂದ ದುಬೈ ಹೆಮ್ಮೆಯ ಕನ್ನಡಿಗರು ಸಂಘಕ್ಕೆ ಮಾತ್ರ ಅವಕಾಶ ಸಿಕ್ಕಿತ್ತು, ಈ ತಂಡವನ್ನು ರಫೀಕಲಿ ಅವರು ಮುನ್ನೆಡಸಿದ್ದರು.ಸೀಲ್ಡೌನ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಜನರಿಗೆ ಆಹಾರ ಪೂರೈಕೆ, ಅಗತ್ಯ ಔಷದಿ ಪೂರೈಕೆ ಮತ್ತು ಸಾವಿರಾರು ಕೋವಿಡ್ ರೋಗಿಗಳನ್ನು ( ನೂರಾರು ಕನ್ನಡಿಗ ರೋಗಿಗಳನ್ನು ಸಹ )  ಐಸೋಲೇಷನ್ ವಾರ್ಡುಗಳಿಗೆ ಮತ್ತು ಆಸ್ಪತ್ರೆಗೆ ವರ್ಗಾವಣೆ ಮಾಡುವ ಕೆಲಸವನ್ನು ದುಬೈ ಪೊಲೀಸರು ಮತ್ತು ದುಬೈ ಅರೋಗ್ಯ ಸಂಸ್ಥೆಯ ಜೊತೆ ಸೇರಿ ಬಹಳ ಅಚ್ಚುಕಟ್ಟಾಗಿ ಇವರು ನಿರ್ವಹಿಸಿ ಇಲ್ಲಿನ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾದರು .ಹೆಮ್ಮೆಯ ದುಬೈ ಕನ್ನಡ ಸಂಘದ ಸಮಿತಿ ಸದಸ್ಯರಾದ ಶ್ರೀ ರಫೀಕಲಿ ಕೊಡಗು ಅವರು ದುಬೈಯಲ್ಲಿ ಸಂಕಷ್ಟದಲ್ಲಿರುವ  ಕನ್ನಡಿಗರನ್ನು ಮತ್ತು ಎಮೆರ್ಜನ್ಸಿ ಇರುವ ಕನ್ನಡಿಗರನ್ನು ಗುರುತಿಸಿ ಚಾರ್ಟೆಡ್ ವಿಮಾನ  ಮತ್ತು ವಂದೇ ಭಾರತ್ ವಿಮಾನದಲ್ಲಿ ಸ್ಥಳಾವಕಾಶ ಮಾಡಿ ಕೊಡುವಲ್ಲಿ ಕಾರ್ಯ ನಿರ್ವಹಿಸಿದರು ಮತ್ತು ಹೆಮ್ಮೆಯ ಕನ್ನಡಿಗರು ತಂಡದ ಇತರ ಸಮಿತಿ ಸದಸ್ಯರ ಜೊತೆ ಸೇರಿ ದಾನಿಗಳ ಸಹಾಯದಿಂದ ಕೆಲಸ ಕಳೆದುಕೊಂಡ ಮತ್ತು ವಿಸಿಟಿಂಗ್ ವೀಸಾದಲ್ಲಿ ಬಂದು ಸಿಕ್ಕಿ ಹಾಕಿಕೊಂಡ  ಟಿಕೆಟ್ ಪಡೆಯಲು ಹಣವಿಲ್ಲದ ಕನ್ನಡಿಗರಿಗೆ ವಿಮಾನ ಟಿಕೆಟ್ ಸಹಾಯ ಮಾಡಿ ಊರಿಗೆ ಕಳುಹಿಸಿದರು.


ಕೋವಿಡ್-19 ಮಾರಕ ಖಾಯಿಲೆಯಿಂದ ಇಡೀ ದೇಶವೇ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಲಾಕ್ ಡೌನ್ ಸಡಿಲಗೊಂಡಾಗ ಯುಎಇಯಲ್ಲಿ  ಸಂಕಷ್ಟಕ್ಕೆ ಸಿಲುಕಿರುವ ಗರ್ಭಿಣಿಯರು, ಮೆಡಿಕಲ್ ಎಮರ್ಜಿನ್ಸಿ, ಮಕ್ಕಳು ಮತ್ತು ಹಿರಿಯರುಸೇರಿ ಹಲವು ಕನ್ನಡಿಗರು ಮತ್ತು ಕನ್ನಡಿಗರೇತರನ್ನು ದುಬೈ ಕನ್ನಡ ಸಂಘ ಮತ್ತು ಎಸ್ ಕೆ ಎಸ್ ಎಸ್ ಎಫ್ ಇದರ ಜೊತೆ ಸೇರಿ ಸುರಕ್ಷಿತವಾಗಿ ಭಾರತಕ್ಕೆ ತಲುಪಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದರು.
                 ದ್ಯೋಗ ಕೊಡಿಸುವಲ್ಲಿ ಇವರ ಪಾತ್ರ.......


ತಮ್ಮ ಕುಟುಂಬವನ್ನು ಸಾಗಿಸಲು ಮತ್ತು ತಾನು ಒಂದೊಳ್ಳೆ ಜೀವನ ಕಟ್ಟಿಕೊಳ್ಳಬೇಕೆಂದು  ಸಾವಿರ ಕನಸು ಹೊತ್ತುಕೊಂಡು ಏಳು ಸಮುದ್ರ ದಾಟಿ ಅರಬರ ನಾಡು ಯುಎಇ ಯಲ್ಲಿ ತಲುಪುವ ಕನ್ನಡಿಗರಿಗೆ ಲಭ್ಯವಿರುವ ಉದ್ಯೋಗದ ಮಾಹಿತಿ ಕೊಡುದು, ವಾಕ್ ಇನ್ ಇಂಟರ್ವ್ಯೂ ಬಗ್ಗೆ ಮಾಹಿತಿ ನೀಡುವುದು, ಕನ್ನಡಿಗರು ಮತ್ತು ಪರಿಚಯದ ಕನ್ನಡೇತರರ ಕಂಪೆನಿಗಳಲ್ಲಿ ಕೆಲಸಕ್ಕೆ ಜನ ಬೇಕಾದರೆ ಸಾಮಾಜಿಕ ಜಾಲತಾಣಗಲ್ಲಿ ವಿಡಿಯೋ ಮತ್ತು ಪೋಸ್ಟ್ ಮಾಡಿ ಕೆಲಸ ಹುಡುಕುವ ಕನ್ನಡಿಗರಿಗೆ ಮತ್ತು ಕನ್ನಡೇತರರಿಗೆ ತಿಳಿಸುವ ಮಹತ್ಕಾರ್ಯ ಇವರದ್ದಾಗಿದೆ. ಅರಬ್ ರಾಷ್ಟಕ್ಕೆ ಆಗಮಿಸಿ ದಲ್ಲಾಳಿಗಳಿಂದ ಮೋಸ ಹೋದ ಜನರಿಗೆ ಮತ್ತು ಊರಿನಿಂದ ಕೆಲಸ ಹುಡುಕಿ ವಿದೇಶಗಳಿಗೆ ಹೋಗಲು ಇಚ್ಛಿಸುವವರಿಗೆ ಸರಿಯಾದ ಮಾಹಿತಿ ನೀಡಿ ಸಹಾಯ ಮಾಡುವಲ್ಲಿ ಇವರ ಸಹೃದಯತೆ ಪ್ರಶಂಸನೀಯ.

ದುಬೈ ಹೆಮ್ಮೆಯ ಕನ್ನಡಿಗರು ತಂಡದ ಜೊತೆ ಸೇರಿ ವರ್ಷಕ್ಕೊಮ್ಮೆ ಜಾಬ್ ಫೇರ್ ಮತ್ತು ಜಾಬ್ ಗೈಡೆನ್ಸ್ ಆಯೋಜಿಸಿ ಹಲವು ಕನ್ನಡಿಗರಿಗೆ ಕೆಲಸ ಕೊಡಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಕೆಲಸದಲ್ಲಿರುವವವರು ಉದ್ಯೋಗ ಭಾಗವಾಗಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರ್ಮಿಕ ಕಾನೂನು ಸಲಹೆ ಮತ್ತು ಎಂಬೆಸ್ಸಿ ಹಾಗೂ ಕನ್ನಡ ವಕೀಲರ ಸಹಾಯದೊಂದಿಗೆ ಕಾರ್ಮಿಕರಿಗೆ ಮತ್ತು ವ್ಯಾಪಾರಸ್ಥ ಕನ್ನಡಿಗರಿಗೆ ದುಬೈ ನ್ಯಾಯಾಲಯ ಮುಖಾಂತರ ಸಹಾಯ ಮಾಡಿದ್ದರು.

      ಕಷ್ಟಕ್ಕೆ ಸಿಲುಕಿದವರಿಗೆ ಆಹಾರ, ಔಷದಿ ಮತ್ತು ವಸತಿ ಕಲ್ಪಿಸುವಲ್ಲಿ ಇವರ ಪಾತ್ರ.....


ರಫೀಕಲಿ ಅವರು  ಹೆಮ್ಮೆಯ ಕನ್ನಡಿಗರು ಸಂಘದ ಸಮಿತಿ ಸದಸ್ಯರೊಂದಿಗೆ ಸೇರಿ ಕೋವಿಡ್ ಲಾಕ್ಡೌನ್ ಕಾರಣ ಕೆಲಸ ಕಳೆದುಕೊಂಡ ನೂರಾರು ಕನ್ನಡಿಗರಿಗೆ, ವಿಸಿಟ್ ವೀಸಾದಲ್ಲಿ ಕೆಲಸ ಹುಡುಕಲು ಬಂದ ನೂರಾರು ಕನ್ನಡಿಗರಿಗೆ ಮತ್ತು ಸಂಕಷ್ಟದಲ್ಲಿದ್ದ ಕನ್ನಡ ಕುಟುಂಬಗಳಿಗೆ ದಾನಿಗಳ ಸಹಾಯದಿಂದ ಆಹಾರ ಪದಾರ್ಥ ಮತ್ತು ವಾಸಸ್ಥಳದ ವ್ಯವಸ್ಥೆ ಮಾಡಿಕೊಟ್ಟರು , ಅದು ಅಲ್ಲದೆ ಹೆಮ್ಮೆಯ ಯುಎಇ ಕನ್ನಡ ಡಾಕ್ಟರ್ಸ್ ಜೊತೆ ಸೇರಿ ಫೀಸ್ ಭರಿಸಲು ಸಾಧ್ಯವಿಲ್ಲದ ಹಲವು ಕನ್ನಡಿಗ ರೋಗಿಗಳಿಗೆ ಉಚಿತ ಮೆಡಿಕಲ್ ಚಿಕಿತ್ಸೆ ನೀಡುವಲ್ಲಿ ಮತ್ತು ಉಚಿತ ಔಷದಿ ಪೂರೈಸುವಲ್ಲಿ ಸಹ  ಕಾರ್ಯನಿರ್ವಹಿಸಿದರು.

ಕೇರಳದ ಕೆ ಎಮ್ ಸಿ ಸಿ ಸಂಘಟನೆ ಕಾರ್ಯಕರ್ತರೊಂದಿಗೆ ಸಹ ಸೇರಿ ಕೊರೋನ ಸಂಕಷ್ಟದ್ದಲ್ಲಿದ್ದ ಹಲವರಿಗೆ ಆಹಾರ ಔಷದಿ ತಲುಪಿಸುವಲ್ಲಿ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸಸಿದ್ದರು.


         ಅನ್ಯಾಯದ ವಿರುದ್ಧ ಧ್ವನಿ.....

ಕನ್ನಡ ಮಣ್ಣಿಗೆ ಅನ್ಯಾಯವಾಗುವಾಗ ದೂರದ ವಿದೇಶದಿಂದಲೇ ತಾಯಯ್ನಾಡಿಗಾಗಿ ದ್ವನಿ ಎತ್ತಿದ್ದರು, ಕಾವೇರಿ ಬಿಕ್ಕಟ್ಟು ಮತ್ತು ಮಹದಾಯಿ ಯಂತ ಕರ್ನಾಟಕಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಈ ಯುಎಇ ದೇಶದ ಕಾನೂನಿನ ಚೌಕಟ್ಟಿನ ಒಳಗೆ ತಮ್ಮದೇ ರೀತಿಯಲ್ಲಿ ಧ್ವನಿ ಎತ್ತಿದ್ದಾರೆ ಭಾರತ ದೇಶದಲ್ಲಿ ನಡೆಯುವ ಅಹಿತಕರ ಘಟನೆಗಳ ವಿರುದ್ಧ ಮತ್ತು ಭಾರತ ದೇಶಕ್ಕೆ ಇತರೆ ದೇಶಗಳಿಂದ ತೊಂದರೆ ಅನ್ಯಾಯವಾದಾಗ  ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತುತ್ತಾರೆ.


ಕೊರೋನ ಮಹಾಬಿಕ್ಕಟಿನ ಸಮಯದಲ್ಲಿ ಜನರಿಗೆ ಸಹಾಯ ತಲುಪಿಸಲು  ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಸಮುದಾಯದ ದಾನಿಗಳು ಜಾತಿ ಧರ್ಮ ಬೇಧವಿಲ್ಲದೆ ಸಹಾಯ ಹಸ್ತ ನೀಡಿದ್ದನ್ನು ಇವರು ಬಹಳ ಸಂತೋಷ ಮತ್ತು ಹೆಮ್ಮೆಯಿಂದ ನಮ್ಮೊಂದಿಗೆ ಹಂಚಿಕೊಂಡರು ಮತ್ತು ಎಲ್ಲಾ ದಾನಿಗಳಿಗೆ ಈ ಸಂದರ್ಭದಲ್ಲಿ ವಿಶೇಷ ಚಾನೆಲ್ ಮುಖಾಂತರ ಧನ್ಯವಾದಗಳನ್ನು ತಿಳಿಸಿದ್ದಾರೆ.  ಕೋವಿಡ್ ಕಾಲದಲ್ಲಿ ಎಲ್ಲರ ಸಂಕಷ್ಟಕ್ಕೆ ಸಹಾಯ ಮಾಡಲು ಆಗದಿದ್ದರೂ ಅಳಿಲು ಸೇವೆ ಮಾಡಿ ಜನರ ಸಂಕಷ್ಟದಲ್ಲಿ ಸ್ವಲ್ಪವಾದರೂ ಪಾಲುದಾರರಾಗಿ ಅವರ ಸಂತೋಷಕ್ಕೆ ಕಾರಣವಾದ ಸಂತೃಪ್ತಿ ರಫೀಕ್ ಅವರದ್ದಾಗಿದೆ.

ಕೊಡಗಿನ ವಿದ್ಯಾರ್ಥಿಗಳಿಗೆ ಮತ್ತು ಊರಿನ ಬಡವರಿಗೆ ಕೊಡುಗೈ ಕಾಣಿಕೆ.....

ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘ ಎಂಬ ಸಂಸ್ಥೆಯ ಪ್ರಧಾನ ಕಾರ್ಯದಶಿಯಾಗಿದ್ದು ಕೊಡಗಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಲ್ಲಾ ವರ್ಷ ವಿದ್ಯಾರ್ಥಿ ವೇತನ ನೀಡುದರಲ್ಲಿ ಇವರ ಪಾತ್ರ ಮಹತ್ತರವಾದುದು.ಕೊಡಗಿನ ವಿದ್ಯಾರ್ಥಿಗಳಿಗೆ ಅವರ ಮುಂದಿನ ವಿದ್ಯಾಭ್ಯಾಸ ಯಾವ ರೀತಿ ಮುಂದುವರೆಸಬೇಕೆಂದು ಮಾರ್ಗದರ್ಶನ ಮತ್ತು ಮೋಟಿವೇಷನ್ ತರಗತಿಗಳನ್ನು ಉನ್ನತ ಶಿಕ್ಷಕರ ಮೂಲಕ ಏರ್ಪಡಿಸುತ್ತಾರೆ ಹಾಗೆ ಊರಿನಲ್ಲಿರುವ ಬಡವರಿಗೆ ಆರ್ಥಿಕ ಸಹಾಯ ಮತ್ತು ಪ್ರಳಯ ಕೊರೋನಾದಂತ ಪ್ರಾಕೃತಿಕ ಬಿಕ್ಕಟ್ಟಿನಲ್ಲಿ ಸಿಲುಕಿದವರಿಗೆ ಸಹಾಯ ಮಾಡುತ್ತಾರೆ ಮತ್ತು ವಿವಾಹ ನೇರೆವೆರಿಸಲು ಕಷ್ಟ ಪಡುವ ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯ ಮಾಡುತ್ತಾರೆ .  


ರಫೀಕಲಿ ಅವರು ಸಾಮಾನ್ಯ ಬಡ ರೈತ ಕುಟುಂಬಕ್ಕೆ ಸೇರಿದವರಾಗಿದ್ದರಿಂದ ಚಿಕ್ಕಂದಿನಿಂದಲೇ ಕಷ್ಟಗಳನ್ನು ಎದುರಿಸಿಯೂ ಕಣ್ಣಾರೆ ನೋಡಿಯೂ ಬೆಳೆದವರು, ಮೂರು ಹೊತ್ತಿನ ಊಟಕ್ಕೆ ಸಹ ಕಷ್ಟಪಡುತ್ತಿದ್ದ ಇವರ ಕುಟುಂಬ ಆ ಸಮಯದಲ್ಲೂ ಇವರಿಗೆ ಒಳ್ಳೆಯ ವಿದ್ಯಾಭ್ಯಾಸ ಕರುಣಿಸಿದ ತಂದೆ ಮತ್ತು ಅಣ್ಣಂದಿಯರನ್ನು ಸದಾ ನೆನೆಯುತ್ತಾರೆ. ಊಟಕ್ಕೆ ಇಲ್ಲದೆ ಹೊಟ್ಟೆ ಹಸಿದವರ ಮತ್ತು ವಿದ್ಯಾಭ್ಯಾಸ ಪಡೆಯಲು ಕಷ್ಟಪಡುವ ಬಡವರ ಕಷ್ಟ ಸ್ವಅನುಭವ ಇರುದರಿಂದ ತಮ್ಮ ಕೈಲಾದ ಸಹಾಯ ಮಾಡಿ ಬಡವರ ಕಣ್ಣೀರು ಹೊರೆಸುವ ಒಂದು ಸಣ್ಣ ಸೇವೆಯಾಗಿ ಸಮಾಜ ಸೇವೆ ಮಾಡುತ್ತಾರೆ ಎಂದು ಹೇಳುತ್ತಾರೆ.  ಹೀಗೆ ಸದಾ ಸೇವಾ ನಿರತರಾಗಿರುವ ರಫಿಕಲಿ ಕೊಡಗು ಅವರ ಜೀವಮಾನದ ಸಾಧನೆಗೆ "ವಿಶೇಷ" ಅಭಿನಂದನೆಗಳು.

Post a Comment

0 Comments