ಮಂಜೇಶ್ವರ: ತುಳುನಾಡಿನ ಯುವ ಜನತೆ ಒಗ್ಗೂಡಿ ನಿರ್ಮಿಸಿದ ತಾಯಿ ಮಂತ್ರ ದೇವತೆಯ ಬಗ್ಗೆ ಸಾಹಿತ್ಯ ರಚಿಸಿ ಸಂಗೀತ ಸಂಯೋಜಿಸಿ ಕಲಾತ್ಮಕ ಸಚಿತ್ರಣದೊಂದಿಗೆ ಸಂಗೀತ ಲೋಕಕ್ಕೆ ಸಮರ್ಪಿಸಿದ "ಅಭಯದ ಆಸರೆ" ಎಂಬ ಭಕ್ತಿಗೀತೆಯ ಆಲ್ಬಂ ವಿಡಿಯೋ ಗೀತೆ ತುಳುನಾಡಿನ ಭಕ್ತ ಜನ ಸಮೂಹದಲ್ಲಿ ಭಕ್ತಿ ಪಾರಮ್ಯತೆ ಮೆರೆಯುತ್ತಾ ಜನಪ್ರಿಯವಾಗುತ್ತಿದೆ.
B'SIGN CRESTION ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾದ ಅಂದಿನಿಂದ ಹೊಸ ಸಂಚಲನ ಮೂಡಿಸುತ್ತಿರುವ ಉದಯೋನ್ಮುಖ ತಂಡದ ಮೂಲಕ ಹೊರ ಬಂದ ಈ ಆಲ್ಬಂ ಭಕ್ತಿಗೀತೆ ವಿಡಿಯೋ ಸಾಂಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಯುವ ಸಾಹಿತಿ ಬಾಲಕೃಷ್ಣ ಕೆ ಪಟ್ಟತ್ತಮೊಗರು ಇವರ ಕುಂಚದಿಂದ ಹೊರಹೊಮ್ಮಿದ ಸಾಹಿತ್ಯವನ್ನು ತುಳುನಾಡಿನ ಕೋಗಿಲೆ ಬಿರುದಾಂಕಿತ ಚೈತ್ರ ಗಾಣಿಗ ಕಲ್ಲಡ್ಕ ಅವರು ತಮ್ಮ ಸುಮಧುರ ಕಂಠದಿಂದ ಹಾಡಿರುವುದು ಸಂಗೀತ ಪ್ರೇಮಿಗಳ ಮೆಚ್ಚುಗೆಯ ಪ್ರಶಂಸೆಗೆ ಪಾತ್ರವಾಯಿತು. ರಕ್ಷಿತ್ ಶೆಟ್ಟಿ ಕಾಡೂರು ನಿರ್ದೇಶನದಲ್ಲಿ ದೀಲಿಪ್ ಗಾಣಿಗ ಮತ್ತು ಮಹೇಶ್ ಭಂಡಾರಿ ಮಸ್ಕತ್ ನಿರ್ಮಾಣಗೈದಿದ್ದಾರೆ.
https://youtu.be/-blNQ1K2oXc ಈ ಲಿಂಕ್ ಉಪಯೋಗಿಸಿ ನೀವು ವೀಡಿಯೋ ವೀಕ್ಷಿಸಿ.



0 Comments