ಯುಎಈ ಯ ತುಳು ಕನ್ನಡ ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿ ಸರ್ವೊತ್ತಮ ಶೆಟ್ಟಿ ನಿರ್ಮಿಸಿದ "ಪರೀಕ ಚೆನ್ನಿಬೆಟ್ಟು ವರ್ತೆ ಕಲ್ಕುಡ" ಭಕ್ತಿಗೀತೆ ಜನ ಮೆಚ್ಚುಗೆಗೆ ಪಾತ್ರವಾಯ್ತು

 

                 ಸಂಗೀತ_ಸವಿಶೇಷ

ಭಕ್ತಿಯ ಮೂಲಕ ಶಕ್ತಿಯನ್ನು ಓಲೈಸುವ ಪ್ರಕ್ರಿಯೆಗಳು ಜಗತ್ತಿನಾದ್ಯಂತ ನಡೆಯುತ್ತಿದೆ.ಅಂತೆಯೇ ಭಕ್ತಿಗೀತೆಯ ಮೂಲಕ ಕ್ಷೇತ್ರದ ಕಾರಣೀಕತೆಯ ಚರಿತ್ರೆಯನ್ನು ಸಾರುವಂತಹ ಅತ್ಯದ್ಭುತವಾದ ಪ್ರಕ್ರಿಯೆಗೆ ವಿಶ್ವದ ವಿವಿದೆಡೆಗಳಿಂದ ಶ್ಲಾಘನೆ ಮೂಡಿ ಬರುತ್ತಿದೆ. ಹೌದು ವಿಶ್ವ ತುಳು ಕನ್ನಡಿಗರ ಪ್ರೀತಿಗೆ ಪಾತ್ರರಾದ ಯುಎಈ ಯ ತುಳು ಕನ್ನಡ ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಅವರು ನಿರ್ಮಿಸಿದ "ಪರೀಕ ಚೆನ್ನಿಬೆಟ್ಟು ವರ್ತೆ ಕಲ್ಕುಡ" ಭಕ್ತಿಗೀತೆ ಜನ ಮೆಚ್ಚುಗೆಗೆ ಪಾತ್ರವಾಗುತ್ತಾ ವೈರಲ್ ಆಗುತ್ತಿದೆ.


 ೫೦೦ ವರ್ಷಗಳ ಹಿಂದಿನ ಪರಿಕಾ ಕುಟುಂಬಿಕರ ದೇವಸ್ಥಾನದ ಬಗ್ಗೆ ತಾಯಿ ಶ್ರೀಮತಿ ಸರಸ್ವತಿ ಸೂರಪ್ಪ ಹೆಗ್ಡೆ ಇವರ  ಆಶೀರ್ವಾದದಂತೆ ಸರ್ವೋತ್ತಮ ಶೆಟ್ಟಿ ಅಬುಧಾಬಿ ಅವರು ನಿರ್ಮಿಸಿದ "ಪರೀಕ ಚೆನ್ನಿಬೆಟ್ಟು ವರ್ತೆ ಕಲ್ಕುಡ" ಎಂಬ ಸುಂದರ ಭಕ್ತಿಗೀತೆ ಜನ ಮೆಚ್ಚುಗೆ ಗಳಿಸುತ್ತಿದೆ. 


ಗುಣಪಾಲ್ ಮತ್ತು ಚೇತನಾ ಗುಣಪಾಲ್ ಹಾಡಿದ ಈ ಭಕ್ತಿಗೀತೆಯ ಸಾಹಿತ್ಯವನ್ನು ಸದಾನಂದ ಬಿ ಮುಂಡಾಜೆ ರಚಿಸಿದ್ದಾರೆ.ಸಹನ್ ಉಜಿರೆ ಸಂಕಲನಗೈದಿದ್ದಾರೆ.ವಸಂತ್ ಶೆಟ್ಟಿ ಚೆನ್ನಿಬೆಟ್ಟು ಸಹಕಾರ ನೀಡಿದ್ದಾರೆ.

ಸುಂದರ ಚಿತ್ರಣ ಇರುವ ಈ ಭಕ್ತಿಗೀತಾ ಅಲ್ಬಂ ಸಾಂಗ್ ನ್ನು ಈ ಕೆಳಗಿನ ಲಿಂಕ್ ಒತ್ತಿ ವೀಕ್ಷಿಸಬಹುದಾಗಿದೆ.

https://youtu.be/RKLLmazvliY

ಈ ಲಿಂಕ್ ಬಳಸಿ ಒಪನ್ ಮಾಡಿ ವಿಡಿಯೋ ಗೀತೆ ಇಷ್ಟವಾದರೆ ಲೈಕ್ & ಕಮೆಂಟ್ ಮಾಡಿ.

Post a Comment

1 Comments

  1. Super 👍🏻👍🏻 Keep supporting such local talent .. All thanks to Survotham Shetty as well for promoting these talents 👍🏻

    ReplyDelete