ದುಬೈ ( ವಿದೇಶ_ವಿಶೇಷ): ಕೊಲ್ಲಿ ರಾಷ್ಟ್ರ ಎಂಬುದು ಅರ್ಥಿಕ ಸಂಪತ್ತಿನ ತವರೂರು ಎಂಬ ಕಲ್ಪನೆ ಹೆಚ್ಚಿನವರಲ್ಲಿದೆ. ಆದರೆ ಕೋರೋನ ಎಂಬ ಮಹಾಮಾರಿ ವಿಶ್ವ ವ್ಯಾಪ್ತಿ ಹರಡಿದಾಗ ಒಮ್ಮಿಂದೊಮ್ಮೆಗೆ ತಾಳ ತಪ್ಪುವ ಪರಿಸ್ಥಿತಿ ಕೊಲ್ಲಿ ರಾಷ್ಟ್ರವನ್ನು ಕಾಡದೆ ಬಿಡಲಿಲ್ಲ. ಇಂತಹ ಸಂದರ್ಭದಲ್ಲಿ ವಿದೇಶದಲ್ಲಿ ಉದ್ಯೋಗ ನಿರತವಾಗಿದ್ದವರಿಗೆ ಆಪತ್ಬಾಂಧವರಂತೆ ಸಕಾಲಿಕ ಸಹಾಯಕ್ಕೆ ಬಂದವರಲ್ಲಿ ಪ್ರಮುಖರೇ ಕನ್ನಡಿಗರಾದ ಹಿದಾಯತ್ ಅಡ್ಡೂರು.
ಇಂತಹ ಒರ್ವ ಅದರ್ಶ ಸಾಧಕನನ್ನು ವಿಶೇಷ ಚಾನೆಲ್ "ವಿದೇಶ-ವಿಶೇಷ" ದ ಮೂಲಕ ವ್ಯಕ್ತಿಗತ ಪರಿಚಯವನ್ನಾಗಿಸಿ ನಿಮ್ಮ ಮುಂದೆ ತೆರೆದಿಡುತ್ತಿದೆ.
ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗ ವಂಚಿತ ತುಳು -ಕನ್ನಡಿಗರಿಗೆ ದಾರಿ ದೀಪವಾದ ಕನ್ನಡಿಗಾಸ್ ಹೆಲ್ಪ್ ಲೈನ್ ಸಂಸ್ಥೆ ಯುಎಇ ಯಾ ಸ್ಥಾಪಕ ಹಾಗೂ ಸಮಾಜ ಸೇವಕ ಹಿದಯಾತ್ ಅಡ್ಡೂರುರವರ ಸಕಾಲಿಕ ಸ್ಪಂದನೆ ಶ್ಲಾಘನೀಯ.
ದಕ್ಷಿಣ ಕನ್ನಡ ಜಿಲ್ಲೆಯವರಾದ ಹಿದಾಯತ್ ಅವರು ಮಂಗಳೂರು ಸಮೀಪದ ಪೊಳಲಿಯ ಅಡ್ಡೂರು ಗ್ರಾಮದ ಪ್ರತಿಷ್ಠಿತ ಮುಸ್ಲಿಂ ಮನೆತನದ ಯಜಮಾನರಾದ ಎಂ.ಎಸ್.ಕುಟುಂಬದ ದಿ. M.S ಹಾಜಾರ್ ಮತ್ತು ಸಲೀಮಾ ದಂಪತಿಗಳ ಪುತ್ರರಾಗಿ ಹಿದಾಯತ್ ಅಡ್ಡೂರು ಜನಿಸಿದ್ದರು.
ಅಡ್ಡೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, A K U ಹೈಸ್ಕೂಲ್ ಕೈಕಂಬದಲ್ಲಿ ಪ್ರೌಢಶಾಲಾ ಶಿಕ್ಷಣ ಬಳಿಕ ಮಂಗಳೂರು ಬದ್ರಿಯ ಕಾಲೇಜ್ ನಲ್ಲಿ ಪಿಯುಸಿ ಶಿಕ್ಷಣ ಗಳಿಸಿಕೊಂಡಿದ್ದರು.
ಜನ್ಮನ ಜನಪರ ನಾಯಕತ್ವದ ಗುಣ....
ಹುಟ್ಟಿನಿಂದಲೇ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಬಂದಿರುವ ಹಿದಾಯತ್ ಅವರು ಶಾಲಾ ಜೀವನದಲ್ಲಿ SSLC ಯಲ್ಲಿ ಇರುವಾಗಲೇ ಶಾಲಾ ನಾಯಕನಾಗಿ ಬಾಲ್ಯ ಕಾಲ ಸಾಧನೆಗೆ ನಾಂದಿ ಹಾಡಿದವರು. ಕಾಲೇಜ್ ಶಿಕ್ಷಣದ ಕಾಲೇಜ್ ಯೂನಿಯನ್ ನ ಜತೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಬಳಿಕ All college unionನ ಕಾರ್ಯದರ್ಶಿಯಾಗಿ ಕಾಲೇಜ್ examಗೆ ಹೆಚ್ಚುವರಿ ಶುಲ್ಕ,ಭತ್ಯೆ ಹಾಗೂ ಬಸ್ ದರ ಏರಿಕೆ ಹೀಗೆ ವಿವಿಧ ರೀತಿಯ ಹೋರಾಟಗಳಿಗೆ ನೇತೃತ್ವವಹಿಸಿಕೊಂಡು ಅಪ್ಪಟ ನಾಯಕತ್ವದ ಗುಣ ಮೈಗೂಡಿಸಿಕೊಂಡಿದ್ದರು.ಈ
ಸಂದರ್ಭದಲ್ಲಿ ಊರಿನಲ್ಲಿ ಅಡ್ಡೂರು ಸನ್ ಸೈನ್ ಪ್ರೆಂಡ್ಸ್ ಎಂಬ ಸಂಘಟನೆಯ ಸ್ಥಾಪಕರಾಗಿ ಇದೀಗಲೂ ಮುಖ್ಯ ಸಂಯೋಜಕರಾಗಿ ಹಲವಾರು ಕಾರ್ಯ ನಿರತರಾಗಿದ್ದಾರೆ. ಇದಲ್ಲದೆ ಆಗಿನ "ಮಲೆನಾಡು ಉಳಿಸಿ" ಅಭಿಯಾನದಲ್ಲಿ ಭಾಗವಹಿಸುವ ಮೂಲಕ ತನ್ನ ಹೋರಾಟದ ಛಲದಲ್ಲಿ ಜನಪ್ರಿಯತೆಗೆ ಪಾತ್ರರಾದರು. ಮಂಗಳೂರು ತಾಲೂಕು ಚುನಾವಣೆಗೆ ಸ್ಪರ್ಧಿಸಿದ್ದರು,ಮಂಗಳೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿ ಬಳಿಕ ತರಬೇತಿಗಾಗಿ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಕಾನೂನು ತರಬೇತಿಯೊಂದಿಗೆ ಸಣ್ಣ ಉದ್ಯಮವನ್ನು ಆರಂಭಿಸಿದ್ದರು
ಈ ಸಮಯದಲ್ಲಿ All junior College ಜತೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಆ ಸಂದರ್ಭದಿಂದಲೇ ಮಾಜಿ ಸಚಿವರಾದ ರಮಾನಾಥ ರೈ ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಇವರ ಕಾರ್ಯ ಚಟುವಟಿಕೆಗಳನ್ನು ಗಮನಿಸಿ ರಮಾನಾಥ ರೈ ಅವರು ಇವರನ್ನು NSUI (National student union of India)ದ ರಾಜ್ಯ ಕಾರ್ಯ ಸಂಘಟನೆಯ ಕಾರ್ಯದರ್ಶಿಯಾಗಿ ನಿಯಮಿಸಿದ್ದರು.
ಬೆಂಗಳೂರಿನಲ್ಲಿ Basic India ಎಂಬ ಸಂಸ್ಥೆಯನ್ನು ಸ್ಥಾಪಿಸಿದ ಇವರು ಅದರ ಮೂಲಕ ಊರಿನವರಿಗೆ ಮಾಹಿತಿ ಶಿಬಿರ,ಶ್ರಮದಾನ ಹಾಗೂ ಚಿಕಿತ್ಸೆ ಇನ್ನಿತರ ಅಗತ್ಯಕ್ಕೆ ಧನ ಸಹಾಯ ನೀಡುವ ಮೂಲಕ ಸಂಘಟನಾತ್ಮಕ ಶಕ್ತಿಯಾಗಿ ಹೊರ ಹೊಮ್ಮಿದರು.
2006 ರಲ್ಲಿ ಯುಎಇ ಆಗಮಿಸಿದ ಅಡ್ಡೂರುರವರು ತಮ್ಮ ಸಹೋದರನಾದ ಸಮಾಜ ಸೇವಕ ಹಬೀಬ್ ಅಡ್ಡೂರು ಅವರ ಉದ್ಯೋಗದಲ್ಲಿ ಸಾಥ್ ನೀಡಿ ಕೊಲ್ಲಿ ರಾಷ್ಟ್ರದಲ್ಲಿ ಕಾಯಕ ನಿರತರಾದರು.
ಬಳಿಕ ತನ್ನದೇ ಸ್ವಂತ Interior & sign board Manufacturing Company ಸ್ಥಾಪಿಸಿ ಅಮೂಲಕ ಸ್ವದೇಶಿಗರಿಗೆ ಉದ್ಯೋಗವಕಾಶ ಕಲ್ಪಿಸಿದರು.
ಉದ್ಯಮಿ ಕಾಸಿಂ ಆಹಮ್ಮದ್ H.K. ಅವರು ಯುಎಇಯಲ್ಲಿ ಸ್ಥಾಪಿಸಿದ ಹಿದಯ(Hidaya) ಫೌಂಡೇಶನ್ ನ ನಾಯಕತ್ವ ವಹಿಸಿದ ಅಡ್ಡೂರು ಅವರು ಇದರ ಮೂಲಕ ಊರಲ್ಲಿ ಬಡ ಜನತೆಗಾಗಿ 40 ಕ್ಕೂ ಅಧಿಕ ಮನೆ ನಿರ್ಮಾಣ,200 ಕ್ಕೂ ಅಧಿಕ ಮಂದಿಗೆ ಅಧ್ಯಾಪಕ ತರಬೇತಿ, ಆರೋಗ್ಯ ಶಿಬಿರ ಹಾಗೂ ಆಹಾರ ವ್ಯವಸ್ಥೆ ಮೂಲಕ ಸಮಾಜ ಸೇವೆ ನಡೆಸ ತೊಡಗಿದರು. BCCI ಯುಎಇ ಇದರ ಉಪಾಧ್ಯಕ್ಷರಾಗಿ ಕೊಲ್ಲಿ ರಾಷ್ಟ್ರದಲ್ಲೂ ಯುವ ಉದ್ಯಮಿಗಳಿಗೆ ತರಬೇತಿ ನೀಡುವ ಮೂಲಕ ಉದ್ಯೋಗಾರ್ಥಿಗಳ ಆಶಾ ಕಿರಣವಾಗಿ ಹೊರ ಹೊಮ್ಮಿದ್ದಾರೆ.
ಕನ್ನಡಿಗಸ್ ಹೆಲ್ಪ್ ಲೈನ್ ಸ್ಥಾಪನೆ
ಕರೋನ ಲಾಕ್ ಡೌನ್ ಸಮಯದಲ್ಲಿ ಉದ್ಯೋಗ ವಂಚಿತರಾಗಿ ಆಹಾರಕ್ಕಾಗಿ ಕಷ್ಟ ಪಡೆಯುತಿರುವ ತುಳು ಕನ್ನಡಿಗರ ಸಂಕಷ್ಟಕ್ಕೆ ಮಮ್ಮಲ ಮರುಗಿದ ಹಿದಾಯತ್ ಅಡ್ಡೂರು ಅವರು ಆರಂಭಕ್ಕೆ ತಾವೇ ಸ್ವತಃ ಮುಂದೆ ನಿಂತು ಅಸಹಾಯಕರಾಗಿರುವ ಕನ್ನಡಿಗರಿಗೆ ಆಹಾರ ಕಿಟ್ ತಲುಪಿಸುವ ಸಹಾಯ ಮಾಡಲು ಮುಂದಾದರು. ಮುಂದೆ ಸಮಸ್ಯೆಗಳ ಕರೆಗಳು ಅಧಿಕವಾದಾಗ ತನ್ನೊಬ್ಬನಿಂದ ಸಕಾಲಿಕ ಸ್ಪಂದನೆ ಸಾಲುತ್ತಿಲ್ಲ ಎಂದೆಣಿಸಿದಾಗ ಆತ್ಮೀಯ ಮಿತ್ರರಾದ ನವೀದ್ ಮಾಗುಂಡಿ,ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಸೇರಿಸಿಕೊಂಡು ಸಹಾಯ ಹಸ್ತ ಚಾಚ ತೊಡಗಿದರು. ಇವರ ಈ ಮಹತ್ಕಾರ್ಯವನ್ನು ಕಂಡ ಹರೀಶ್ ಸೇರಿಗಾರ್,ರೊನಾಲ್ಡೊ ಮಾರ್ಟಿಸ್,ಚಂದ್ರಶೇಖರ್ ಐ.
ಸುನೀಲ್ ಎ.ಆರ್,ಇಮ್ರಾನ್ ಖಾನ್ ಏರ್ಮಾಲ್, ದಯಾ ಕಿರೋಡಿಯನ್,ಅಶ್ರಫ್ ಕೆ.ಎಮ್,ಶಶಿಧರ್ ಎನ್,ಯೂಸುಫ್ ಬ್ರಹ್ಮಾವರ,ನೋಯಲ್ ಅಲ್ಮೇಡ,ಆಸ್ಪಕ್ ಸಾದ,ಅಲ್ತಫ್ ಹುಸೈನ್,ಸಯ್ಯದ್ ಅಫ್ಜಲ್,ಯಶ್ ಕರ್ಕೆರ,ಸೀರಾಜ್ ಪರ್ಲಡ್ಕ,ಜಾನ್ಸನ್ ಮಾರ್ಟಿಸ್,ಅನ್ಸರ್ ಬಾರ್ಕೂರ್ ರವರು ಸಹಾಯಕ್ಕೆ ಕೈಜೋಡಿಸುವ ಮನಸ್ಸು ಮಾಡಿದರು. ಇವರ ನೇತೃತ್ವದಲ್ಲಿ 20 ಮಂದಿಯ ಸಮಾನ ಮನಸ್ಕಾರ ತಂಡ "ಕನ್ನಡಿಗಾಸ್ ಹೆಲ್ಪ್ ಲೈನ್" ಸ್ಥಾಪಿಸಿದರು. ಇದರ ಮೂಲಕ ವಿದೇಶದಲ್ಲಿ ಉದ್ಯೋಗ ಇಲ್ಲದೆ ಮನೆಯೊಳಗೆ ಉಳಿದಿದ್ದ ಸ್ವದೇಶಿಗಳಿಗೆ ಆಹಾರ ಕಿಟ್, ಸ್ವದೇಶಕ್ಕೆ ಮರಳಲು ವಿಮಾನ ಟೀಕೆಟ್, ಗರ್ಭಿಣಿ ಹಾಗೂ ಪ್ರಾಯಸ್ಥರಾದವರಿಗೆ,ಸಂಕಷ್ಟದಲ್ಲಿರುವವರು ಊರಿಗೆ ಮರಳಲು,ವಿದೇಶದಲ್ಲಿ ಮರಣವನ್ನಪ್ಪಿದ ಮೃತದೇಹ ನಾಡಿಗೆ ತಲುಪಿಸುವ ಸಹಾಯ ನಿರತರಾಗಿದ್ದಾರೆ. 63 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಕೋರೋನ ಕಾಲದ ಆರಂಭದಲ್ಲಿ ದೂರದ ಒಮನ್ ನಲ್ಲಿ ಜೈಲು ಪಾಲಾದಾಗ ಕುಟುಂಬದವರಿಗೆ ಅವರನ್ನು ಸಂಪರ್ಕಿಸಲು ಅಸಾಧ್ಯವಾದಗ ಅಡ್ಡೂರು ಅವರು ತಮ್ಮಮಿತ್ರರ ಸಹಕಾರದೊಂದಿಗೆ ನಡೆಸಿದ ಪ್ರಯತ್ನ ಕೇವಲ ವಾರಗಳೊಳಗೆ ಬಂಧಮುಕ್ತರನ್ನಾಗಿಸಿ ನಾಡಿಗೆ ಮರಳಿಸಿರಿವುದು ಭಾರತೀಯ ಮತ ಸೌಹರ್ದತೆಗೊಂದು ಸಾಕ್ಷಿಯಾಗಿತ್ತು.
ವಿದೇಶದಲ್ಲಿ ಇದೀಗ Fort Kochi Restaurant ಆರಂಭಿಸಿ ಪತ್ನಿ ಶಹನಾಝ್ ಮಕ್ಕಳಾದ ಆಲೀಝಾ,ಆಯಿಷಾ ಅವರೊಂದಿಗೆ ಸಂತೃಪ್ತ ಸಂಸಾರ ಕಂಡುಕೊಂಡಿರುವ ಹಿದಾಯತ್ ಅಡ್ಡೂರು ಅವರಿಗೆ ಸ್ವದೇಶಿಗರ ಬಗೆಗಿನ ಅಭಿಮಾನ, ಬಡವರ ಬದುಕಿನ ಕಾಳಜಿ, ಜನಪರ ಸಮಾಜ ಸೇವೆ ಜೀವಮಾನದ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಆದರ್ಶನೀಯ.
"ಪರೋಪಕರಾರ್ಥಂ ಇಥಂ ಶರೀರಂ" ಎನ್ನುವ
ಅಡ್ಡೂರು ಅವರ ಸಂತೃಪ್ತ ಬದುಕು ಇನ್ನಷ್ಟು ಸಂಪನ್ನತೆಯೆಡೆಗೆ ಸಾಗಲಿ ಎಂಬುದೇ ಎಲ್ಲರ ಶುಭ ಹಾರೈಕೆ.
✍️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ-ಮಂಜೇಶ್ವರ (ವಿಶೇಷ ಚಾನೆಲ್ -ಯುಎಇ ಪ್ರತಿನಿಧಿ)











0 Comments