ದುಬಾಯಿಯ ಈ ಉದ್ಯಮಿ ಸಮಾಜ ಸೇವೆಯ ಕೊಡುಗೈ ದಾನಿ- ಸತೀಶ್ ಪೂಜಾರಿ ಬೆಳಪು

 


           ವಿದೇಶ_ವಿಶೇಷ.  (ಅಂಕಣ-4)
ವಿದೇಶದಲ್ಲಿ ಉದ್ಯಮ ಶೀಲತೆಯನ್ನು ಮೈಗೂಡಿಸಿ ಕೊಂಡಿದ್ದರೂ ಸ್ವದೇಶಿಗಳ ಮೇಲೆ ಕರುಣೆಯ ಕೃಪಾ ದೃಷ್ಟಿ ಬೀರುವ  ಬಿಲ್ಲವ ಜನಾಂಗದ ಮೇರು ವ್ಯಕ್ತಿತ್ವದ ಸಾಧಕರಾಗಿದ್ದಾರೆ ಸತೀಶ್ ಪೂಜಾರಿ ಬೆಳಪು. ಶಿಕ್ಷಣ,ಸಮಾಜ ಸೇವೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ರಂಗಕ್ಕೆ ತನ್ನ ಕೈ ಮಿಗಿಲಾದ ಕೊಡುಗೆ ನೀಡುತ್ತಾ ಬಂದಿರುವ ಪ್ರಸ್ತುತ ಕೋರೋನ ಕಾಲಘಟ್ಟದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ವೆಚ್ಚದ ಕೊಡುಗೈ ದಾನ ನೀಡಿದ  ಸಮಾಜ ಸೇವಕರಾಗಿದ್ದಾರೆ. ಇಂತಹ ಅನನ್ಯ ಸಾಧಕರನ್ನು ವಿಶೇಷ ಚಾನೆಲ್ ಇಂದಿನ‌ "ವಿದೇಶ ವಿಶೇಷ" ವಿಭಾಗದಲ್ಲಿ ಸಚಿತ್ರವಾಗಿ ಪರಿಚಯಿಸುತ್ತಿದೆ
ಉಡುಪಿಯ ಬೆಳಪು ಸೂರು ಪೂಜಾರಿ- ಪದ್ಮ ಪೂಜಾರಿ ದಂಪತಿಗಳ ಪುತ್ರರಾಗಿ 1962ರಲ್ಲಿ ಜನಿಸಿದ ಸತೀಶ್ ಪೂಜಾರಿ ಅವರು 1986ರಲ್ಲಿ ದುಬಾಯಿಗೆ ಆಗಮಿಸಿ ಪಯೋನಿರ್ ಇನ್ಸೂರೆನ್ಸ್ ಸಂಸ್ಥೆಯ ಟೆಕ್ನಿಕಲ್ ಮೇನೆಜರ್ ಆಗಿ ಉದ್ಯೋಗ ನಿರ್ವಹಿಸ ತೊಡಗಿಕೊಂಡಿದ್ದು ಇದೀಗ ಜನರಲ್ ಮೇನೆಜರ್ ಆಗಿ ಭಡ್ತಿ ಹೊಂದಿ ಸಂಸ್ಥೆಯ ಉನ್ನತಿಗೆ ಕಾರಣೀಭೂತ ರಾಗಿದ್ದಾರೆ. ಕರ್ತವ್ಯ ಬದ್ಧತೆಯಿಂದ ಕೊಲ್ಲಿ ರಾಷ್ಟ್ರದ ಮರಳುಭೂಮಿಯಲ್ಲಿ ಆಳವಾದ ಅನುಭವ ಪಾಠಗಳನ್ನು ಕಲಿತುಕೊಂಡ ಸತೀಶ್ ಪೂಜಾರಿ ಅವರು ಕ್ರಮೇಣ ತಮ್ಮದೇ ಸ್ವಂತವಾದ ಹೋಟೆಲ್ ಉದ್ಯಮವನ್ನು‌ ಸ್ಥಾಪಿಸಿದರು. ಅ ಮೂಲಕ ಊರಿನ ಹಲವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದರು. 

ಮುಲ್ಕಿ ವಿಜಯ ಕಾಲೇಜಿನಲ್ಲಿ ಬಿ.ಎ.ಪದವಿ ಶಿಕ್ಷಣ ಪಡೆದಿರುವ ಸತೀಶ್ ಪೂಜಾರಿ ಮುಂಬಯಿಯ ಮಿಥಿಬಾಯಿ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಹಾಗೂ ಇನ್ಸೂರೆನ್ಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯದ ಡಿಪ್ಲೊಮಾ ಪದವಿ ಗಳಿಸಿಕೊಂಡಿದ್ದಾರೆ. 
ಸಹೃದಯತೆಯ ಸಾಕಾರ ಮೂರ್ತಿಯಾಗಿರುವ ಸತೀಶ್ ಪೂಜಾರಿ ಅವರು ಬಾಲ್ಯ ಕಾಲದಿಂದಲೇ ಕಲೆ -ಸಾಂಸ್ಕೃತಿಕ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಇದರ ಪರಿಣಾಮ ನಾಟಕ-ಯಕ್ಷಗಾನದಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿ ಕೊಂಡರು. ರಕ್ತದಾನ,ಶಿಕ್ಷಣ ಸಹಾಯ,ಚಿಕಿತ್ಸಾ ಸಹಾಯ,ಬಡ ಹೆಣ್ಮಕ್ಕಳ ವಿವಾಹ ಸಹಾಯ ಮೊದಲಾದ ಸಮಾಜ ಸೇವೆಯಲ್ಲೂ ಇವರ ಕೊಡುಗೆ ಗಮನಾರ್ಹವಾಗಿದೆ.

ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾದ ಸತೀಶಣ್ಣ....
ಗಲ್ಫ್ ನಾಡಿನಲ್ಲಿ ಕಲೆ,ಸಾಹಿತ್ಯ,ಕ್ರೀಡೆಗಳ ಪ್ರೋತ್ಸಾಹಕ ರಾಗಿ, ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಸತೀಶ್ ಪೂಜಾರಿ ಅವರು ಕರ್ನಾಟಕ ಸಂಘ ಶಾರ್ಜ ಇದರ ಅಧ್ಯಕ್ಷ, ಬಿಲ್ಲವಾಸ್ ಫ್ಯಾಮಿಲಿ ದುಬಾಯಿ ಇದರ ಅಧ್ಯಕ್ಷ, ಇನ್ಸೂರೆನ್ಸ್ ಇಂಡಿಯಾದ ಗೌರವ ಸದಸ್ಯ,ಕೆನರಾ ಎಂಟರ್ ಪ್ರೈಸಸ್ ದುಬಾಯಿ ಇದರ ಸದಸ್ಯ,ನಮ್ಮ ತುಳುವೆರ್ ದುಬಾಯಿ ಯ ಸ್ಥಾಪಕ ಸದಸ್ಯ, ಯುಎಇ ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ ಸದಸ್ಯ, ಧ್ವನಿ ಪ್ರತಿಷ್ಠಾನದ ಸದಸ್ಯತ್ವ ಹೀಗೆ ಸಂಘಟನಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. 
ಸ್ವತಃ ರಕ್ತದಾನಿಯಾಗಿರುವ ಸತೀಶ್ ಪೂಜಾರಿ ಅವರು ಹಲವಾರು ರಕ್ತದಾನ ಶಿಬಿರ,ಯುಎಇ ಥ್ರೋಬಾಲ್ ಪಂದ್ಯಾಟ,ವಿಶ್ವ ತುಳು ಸಮ್ಮೇಳನ ದುಬಾಯಿ ಮೊದಲಾದ ಕಾರ್ಯಕ್ರಮದ ಆಯೋಜನೆ ನಡೆಸಿದ್ದಾರೆ. 

       ಸಾಧನೆಗೆ ಸಂದ ಗೌರವಗಳು.....
ಇವರ ಜೀವಮಾನದ ಸಾಧನೆಯನ್ನು ಗುರುತಿಸಿ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ,
ಶಾರ್ಜ ಕರ್ನಾಟಕ ಸಂಘದ ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಹಾಗೂ ಧ್ವನಿ ಪ್ರತಿಷ್ಠಾನ ಯುಎಇ,ಬಿಲ್ಲವಾಸ್ ದುಬೈ ಎಂಡ್ ನಾರ್ಥನ್ ಎಮಿರೇಟ್ಸ್,ಬಿಲ್ಲವರ ಬಳಗ ಅಬುಧಾಬಿ, ಕನ್ಯಾಡಿ ರಾಮಕ್ಷೇತ್ರ,ಬಿಲ್ಲವರ ಸಂಘ ಮುಂಬಯಿ, ಉಡುಪಿ 
ಮೊದಲಾದೆಡೆಯ ಸನ್ಮಾನಗಳು ಸಂದಿದೆ.

ಇವರ ಧರ್ಮಪತ್ನಿ ಶ್ರೀಮತಿ ಸುವರ್ಣ ಸತೀಶ್ ಪೂಜಾರಿ ಅವರು ಚಲನಚಿತ್ರ ಅಭಿನಯ ಹಾಗೂ ರಂಗಾಸಕ್ತಿಯುತರಾಗಿದ್ದು ಪತಿಯ ಸಾಮಾಜಿಕ, ಸಾಂಸ್ಕೃತಿಕ ರಂಗದ ಸೇವೆಗೂ ಸಾಥ್ ನೀಡುತ್ತಿದ್ದಾರೆ. ಈ ಆದರ್ಶ ದಂಪತಿಗಳಿಗೆ ಶೃತಿ,ಶ್ರವಣ್ ಕುಮಾರ್ ಎಂಬ ಮಕ್ಕಳಿದ್ದು ಸುಖಿ ಸಂಸಾರದೊಡನೆ ಸಂತೃಪ್ತರಾಗಿದ್ದಾರೆ. 

"ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರಿಯಸಿ" ಎಂಬಂತೆ ವಿದೇಶದಲ್ಲಿದ್ದರೂ ಜನಿಸಿದ ನಾಡನ್ನು ಹಾಗೂ ತಾಯ್ನಾಡಿನ ಜನರನ್ನು ಸ್ವರ್ಗ ಸಮಾನವಾಗಿ ಪ್ರೀತಿಸುವ ಸತೀಶ್ ಪೂಜಾರಿ ಅವರು ನಿಜವಾಗಿಯೂ ತುಳುನಾಡಿನ ಹೆಮ್ಮೆಯ ಸಮಾಜ ಸೇವಕ. ಇವರ ಅಗಣಿತ ಸಾಧನೆಯ ಪಥದಲ್ಲಿ ಇನ್ನಷ್ಟು ಸನ್ಮಾನ‌, ಸತ್ ಕೀರ್ತಿಗಳು ಸಲ್ಲಲಿ ಎಂಬುದೇ "ವಿಶೇಷ " ಹಾರೈಕೆ.
              ಚಿತ್ರ ಕೃಪೆ: ಬಿ.ಕೆ.ಗಣೇಶ್ ರೈ

Post a Comment

0 Comments