ಸಂಜೀವ ಶೆಟ್ಟಿ ಮಾಡ ರಚಿಸಿ ನಿರ್ಮಿಸಿದ "ಏಳ್ ಮಲೆತ್ತಶ್ರೀ ಶಬರಿ ಮಲೆಟ್ ಬೊಳ್ಳಿ ಮೂಡುಂಡ್ ಕಾಂತ ಮಲೆಟ್" ಎಂಬ ಭಕ್ತಿ ಸಂಗೀತ ಲೋಕಾರ್ಪಣೆ

 


ಮಂಜೇಶ್ವರ:  ತುಳುನಾಡ ಹಿರಿಯ ಸಾಹಿತಿ ಸಂಜೀವ ಶೆಟ್ಟಿ ಮಾಡ ರಚಿಸಿ  ನಿರ್ಮಿಸಿದ "ಏಳ್ ಮಲೆತ್ತಶ್ರೀ ಶಬರಿ ಮಲೆಟ್ ಬೊಳ್ಳಿ ಮೂಡುಂಡ್ ಕಾಂತ ಮಲೆಟ್" ಎಂಬ ಭಕ್ತಿ ಸಂಗೀತವನ್ನು ಯೂಟ್ಯೂಬ್ ಚಾನೆಲ್ ಮೂಲಕ ಲೋಕಾರ್ಪಣೆಗೊಳಿಸಲಾಗಿದೆ.

ಇತಿಹಾಸ ಪ್ರಸಿದ್ಧವಾದ ಉದ್ಯಾವರ  ಅಣ್ಣದೈವಪಾತ್ರಿ ಶ್ರೀ ರಾಜ ಬೆಳ್ಚಾಪ್ಪಾಡರು ಶ್ರೀ ಅರಸು ಮಂಜಿಷ್ಣಾರು ದೈವಗಳ ಭಂಡಾರ ಮನೆಯಲ್ಲಿ ಬಿಡುಗಡೆಗೊಳಿಸಿದರು.

ತುಳುನಾಡ ಗಾನಗಂಧರ್ವ ಬಿರುದಾಂಕಿತ ಜಗದೀಶ್ ಪುತ್ತೂರು ಸಂಗೀತ ನಿರ್ದೇಶಿಸಿ ಹಾಡಿರುವ  ತುಳು ಭಕ್ತಿಗೀತೆ ಬಿಡುಗಡೆಗೊಂಡಿದೆ.

https://youtu.be/_ooAsYT_Ggs

ಮೇಲಿನ ಲಿಂಕ್ ಒಪನ್ ಮಾಡಿ ಭಕ್ತಿಗೀತೆ ವೀಕ್ಷಿಸಬಹುದಾಗಿದೆ.

ಸ್ವತಃ  ಶ್ರಿ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರು,ಗುರುಸ್ವಾಮಿಗಳು ಆಗಿರುವ ಸಾಹಿತಿ ಸಂಜೀವ ಶೆಟ್ಟಿ ಮಾಡ ಅವರು ಭಕ್ತಿಗೀತೆಯ ಸಾಹಿತ್ಯ ರಚನೆ ಮತ್ತು ನಿರ್ಮಾಣ ಮಾಡಿ ಶಬರಿಮಲೆ ಯಾತ್ರೆಯ ಈ ಸಂಕ್ರಮಣ ಕಾಲಘಟ್ಟದಲ್ಲಿ ಭಕ್ತ ಜನತೆಗಾಗಿ ಸಮರ್ಪಿಸಿದ ಭಕ್ತಿಗೀತೆ ಇದಾಗಿದೆ. ಇದರ ಸಂಕಲನ ಕಾರ್ಯವನ್ನು ಜೆ.ಪಿ. ಬಂದ್ಯೋಡು ಹಾಗೂ  ಶಿಶಿರ್ ರೈ ಸಹಕಾರ ನೀಡಿದ್ದಾರೆ.


ಬಿಡುಗಡೆಯ ಬಳಿಕ ಗಾಯಕ ಜಗದೀಶ್ ಪುತ್ತೂರು ಅವರನ್ನು ರಾಜ ಬೆಳ್ಚಾಪ್ಪಾಡರು ಸನ್ಮಾನಿಸಿದರು.

Post a Comment

0 Comments