ಅಂತರ್ಜಾಲದ ಮೂಲಕ ದುಬೈಯಲ್ಲಿ ಅಭೂತಪೂರ್ವವಾಗಿ ನಡೆದ ನಾಡ ಹಬ್ಬ ದಸರಾ

 ಅಬುಧಾಬಿ {ಸುದ್ದಿ_ವಿಶೇಷ} :  ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮತ್ತು ದುಬೈ ಯುವರಾಜ ಹಿಸ್ ಹೈನೆಸ್ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ಅಲ್ ಮಕ್ತುಂ ಈ ದೇಶದ  ನಾಗರಿಕರಿಗೆ ತಮ್ಮ ದೈಹಿಕ ದ್ರಡತೆ ಕಾಪಿಡಿಕೊಳ್ಳಲು ಕರೆಕೊಟ್ಟಿರುವ ದುಬೈ ಫಿಟ್ನೆಸ್ ಚಾಲೆಂಜ್ ಕಾರ್ಯಕ್ಕೆ ಬೆಂಬಲ ಸೂಚಕವಾಗಿ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡದವರು ಮೂರನೇ  ವರ್ಷದ ದುಬೈ ದಸರಾ ಕ್ರೀಡೋತ್ಸವನ್ನು ಕೋವಿಡ್ ಶಿಷ್ಟಾಚಾರ ಅನುಸರಿಸಿ ವರ್ಚುಲಾಗಿ ದಿನಾಂಕ 30/10/2020  ಶುಕ್ರವಾರದಂದು ಸಂಜೆ 4ರಿಂದ ಏರ್ಪಡಿಸಿದ್ದರು .

 video link https://www.youtube.com/watch?v=MiIH9esnhCM&t=4283s 

ಈ ಮೇಲಿನ ಲಿಂಕ್ ಓಪನ್ ಮಾಡಿ ಕಾರ್ಯಕ್ರಮ ವೀಕ್ಷಿಸಬಹುದು.


ಈ ವರ್ಷದ ದಸರಾ ಕ್ರೀಡೋತ್ಸವ ಕಾರ್ಯಕ್ರಮವನ್ನು ಕೋವಿಡ್ ಸಂಕಷ್ಟ ಸಮಯದಲ್ಲಿ ತಮ್ಮ ಜೀವನ ಮುಡಿಪಿಟ್ಟು ಸೇವೆ ನೀಡಿದ ಕೋವಿಡ್ ಯೋಧರಿಗೆ ಸಮರ್ಪಿಸಿಕೊಂಡು ಆರಂಭಗೊಂಡ ಕಾರ್ಯಕ್ರಮದ  ಅತಿಥಿಗಳನ್ನು ಸಮಿತಿ ಸದಸ್ಯೆ  ಪಲ್ಲವಿ ದಾವಣಗೆರೆ ಸ್ವಾಗತಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಸುದೀಪ್ ದಾವಣಗೆರೆ ಅವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ನಡೆದ ಕವಿಗೋಷ್ಠಿ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಮ್ಮೆಯ ಕನ್ನಡಿಗರು ತಂಡದ ಉಪಾಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು ಅವರು ವಹಿಸಿ ನೇರೆವೇರಿಸಿದರು.

ಸಮಾರೋಪ ಸಮಾರಂಭದಲ್ಲಿ ಯುಎಇ ದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡ ಮಕ್ಕಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರಶಸ್ತಿ ಪುರಸ್ಕಾರ ಮಾಡಲಾಯಿತ್ತು, ದಸರಾ ಕುರಿತು ಕನ್ನಡ ಮಕ್ಕಳಿಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ಬಾಗವಹಿಸಿದ ಮಕ್ಕಳಿಗೆ ಪದಕ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತ್ತು, ಕನ್ನಡ ನಾಡು ನುಡಿ ಜಲ ಮತ್ತು ಯುಎಇ ದೇಶದ ಬಗ್ಗೆ ನಡೆದ  ಕವಿಗೋಷ್ಠಿಯಲ್ಲಿ ಹಾಗೂ ಇದೆ ವಿಷಯವಾಗಿ ಹಿರಿಯರಿಗೆ ಕಿರಿಯರಿಗೆ ನಡೆದ ರಸಪ್ರಶ್ನೆಯಲ್ಲಿ ಪಾಲ್ಗೊಂಡವರಿಗೆ ಪ್ರಶಸ್ತಿ ಪತ್ರ ಮತ್ತು ಪದಕ ನೀಡಲಾಯಿತು. ರಂಗೋಲಿ ಸ್ಪರ್ಧೆ ಮತ್ತು ಅಂತಾಕ್ಷರಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತ್ತು, ಕೋವಿಡ್ ಸಮಯದಲ್ಲಿ ಅರೋಗ್ಯ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದ ಮುಖ್ಯ ವಾಹಿನಿಯಲ್ಲಿ ಸೇವೆ ಸಲ್ಲಿಸಿದ ಕೋವಿಡ್ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತ್ತು. 


ಅಂತರಾಷ್ಟ್ರೀಯ ವಿಕಲಚೇತನ ಒಲಂಪಿಕ್ ಕ್ರೀಡಾತಾರೆ, ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತೆ  ನಮ್ಮ ಹೆಮ್ಮೆಯ ಕನ್ನಡತಿ ಅವರು ಈ ಕ್ರೀಡೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಹಾಗೆ ಹೆಮ್ಮೆಯ ಕನ್ನಡಿಗರು ತಂಡ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಕರ್ನಾಟಕದ ಹೆಸರನ್ನು ಎತ್ತರಕ್ಕೆ ಬೆಳಸಿದ ಕ್ರೀಡಾಪಟುಗಳನ್ನು ಗುರುತಿಸಿ ಎಲ್ಲಾ ವರ್ಷ ನೀಡಿ ಬರುತ್ತಿರುವ ಪ್ರತಿಷ್ಠಿತ ದುಬೈ ಕ್ರೀಡಾ ರತ್ನ ಪ್ರಶಸ್ತಿಯನ್ನು ಈ ಬಾರಿ ಪ್ಯಾರಾ ಒಲಿಂಪಿಕ್ ಸೇರಿ ಭಾರತವನ್ನು ಹಲವು ಬಾರಿ ಪ್ರತಿನಿಧಿಸಿ ಪದಕಗಳಿಸಿಕೊಟ್ಟು ಭಾರತದ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಬೆಳಗಿಸಿದ  ಹೆಮ್ಮೆಯ ಕನ್ನಡತಿ ವಿಕಲತೆಯಲ್ಲೂ ಇದ್ದು ಬಾನೆತ್ತರದ ಸಾಧನೆ ಮಾಡಿ ದೇಶಕ್ಕೆ ರಾಜ್ಯಕ್ಕೆ ಅಭಿಮಾನವಾಗಿರುವ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹೆಮ್ಮೆಯ ಕನ್ನಡತಿ ಡಾ.ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರಿಗೆ ನೀಡಿ ಗೌರವಿಸಿ ಸನ್ಮಾನಿಸಿದರು, ಮಾಲತಿ ಕನ್ನಡತಿಯಂತ ವಿಶಿಷ್ಟ ಪ್ರತಿಭೆಗೆ ಸನ್ಮಾನ ಮಾಡಲು ಸಿಕ್ಕ ಅವಕಾಶ ನಿಜವಾಗಲೂ ಹೆಮ್ಮೆ ಮತ್ತು ಸಂತೋಷದ ವಿಷಯ ಎಂದು ಸಂಘಟಕರು ತಿಳಿಸಿದರು.


ಹಾಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾಜಿ ಭಾರತೀಯ ವಾಲಿಬಾಲ್ ಪಟು ಶ್ರೀಯುತ ಇಮ್ತಿಯಾಜ್ ಅಹಮದ್ ಮತ್ತು ಮಾಜಿ ಭಾರತೀಯ ಈಜುಗಾರ ಶ್ರೀಯುತ ಶ್ರೀಹರಿ ನಟರಾಜ್ ಅವರನ್ನು ಸಹ ಸನ್ಮಾನಿಸಿ ಗೌರವಿಸಿದರು. ಅತಿಥಿಗಳಾಗಿ ಎಮ್ ಸ್ಕ್ವೇರ್ ಎಂಜಿನೀರಿಂಗ್ ಕನ್ಸಲ್ಟೆಂಟ್ ಸಂಸ್ಥೆಯ ಮಾಲಿಕರಾದ ಕನ್ನಡ ಸಂಘಟನೆಗಳ ಮಹಾ ಪೋಷಕರು ಕೊಡುಗೈ ದಾನಿಗಳು ಆದ ಹೆಮ್ಮೆಯ ಕನ್ನಡಿಗ ಮೊಹಮ್ಮದ್ ಮುಸ್ತಫಾ ಅವರು ಜೂಮ್ ಮುಖಾಂತರ ಮಾತಾಡಿ ಕನ್ನಡಿಗರಿಗೆ ಇನ್ನಷ್ಟು ಸಹಾಯ ಮಾಡುದಾಗಿ ಭರವಸೆ ನೀಡಿದರು,  ಬೆಂಗಳೂರಿನಿಂದಲೇ ಜೂಮ್ ಮೂಲಕ ನಿರೂಪಕಿಯಾಗಿ ಮತ್ತು ಅತಿಥಿಯಾಗಿ ಕಸ್ತೂರಿ, ಸುವರ್ಣ, ಝೀ ಕನ್ನಡ ವಾಹಿನಿಗಳಲ್ಲಿ ಸೇವೆ ಸಲ್ಲಿಸಿರುವ, ಖ್ಯಾತ ನಿರೂಪಕಿ ಹಾಗು ಹಿನ್ನೆಲೆ ಕಂಠ ದಾನ  ಕಲಾವಿದೆ  ಶೃತಿ ಅವರು ಸಹ ಪಾಲ್ಗೊಂಡು ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸದರು.


ಕಾರ್ಯಕ್ರಮದ ವಿಶೇಷತೆ:  ಆನ್ಲೈನ್ ಮುಖಾಂತರ ಹಲವು ಆಟ ಮತ್ತು ಚಟುವಟಿಕೆಗಳು ನಡೆಯಿತು, ಸಮಾರಂಭವನ್ನು ಕರ್ನಾಟಕ ನಾಡ ಗೀತೆ, ಭಾರತ ರಾಷ್ಟ್ರಗೀತೆ  ಮತ್ತು  ಯುಎಇ ದೇಶದ ರಾಷ್ಟ್ರ ಗೀತೆ ಹಾಡುದರ ಮೂಲಕ  ಪ್ರಾರಂಭಿಸಲಾಗಿತ್ತು,ಕಾರ್ಯಕ್ರಮದಲ್ಲಿ ರಾಕ್ ಮೆಡಿಕಲ್ ಯೂನಿವರ್ಸಿಟಿ ನಿರ್ದೇಶಕರಾದ ಡಾ .ಗುರುಮಾಧವ ರಾವ್, ರೀವಾ ಮೆಡಿಕಲ್ ಸೆಂಟರ್ ದುಬೈ ಮಾಲಿಕರಾದ  ಡಾ ರಶ್ಮಿ ನಂದಕಿಶೋರ್ ಬೆಂಗಳೂರು, ಗಲ್ಫ್ ಸ್ಟ್ರೀಮ್ ಮಾಲೀಕರಾದ  ಮಾನ್ಯ ಶೇಖರ್ ರೆಡ್ಡಿ, ಹಿವೆಲ್ವೋ ಇಂಟಿರಿಯರ್ಸ್ ಮಾಲಿಕರಾದ ಮಾನ್ಯ ಮೋಹನ್ ಉಪ್ಪಿನ್, ಫಾರ್ಚ್ಯೂನ್ ಗ್ರೂಪ್ ಮಾಲಿಕರಾದ ಮಾನ್ಯ : ಪ್ರವೀಣ್ ಶೆಟ್ಟಿ, ಕನ್ನಡಿಗರು ದುಬೈ ಅಧ್ಯಕ್ಷರಾದ  ಶ್ರೀಮತಿ ಉಮಾ ವಿಧ್ಯಾದರ್, ಅಬುಧಾಬಿ  ಸಂಘದ ಅಧ್ಯಕ್ಷರಾದ ಮಾನ್ಯ : ಸರ್ವೋತ್ತಮ ಶೆಟ್ಟಿ, ಶಾರ್ಜಾ ಕನ್ನಡ ಸಂಘದ ಅಧ್ಯಕ್ಷರಾದ  ಮಾನ್ಯ : ಆನಂದ್ ಬೈಲೂರು,  ರಾಕ್ ಕನ್ನಡ ಸಂಘದ ಅಧ್ಯಕ್ಷರಾದ ಡಾ.ಅಶೋಕ್ ಕುಮಾರ್ ಮತ್ತು ಮಾನ್ಯ ಸತ್ಯ, ಅಲ್ ಐನ್ ಕನ್ನಡ ಸಂಘದ ಮಾನ್ಯ : ವಿಮಲ್ ಕುಮಾರ್, ಯುಎಇ ಬಸವ ಸಮಿತಿ ಅಧ್ಯಕ್ಷರಾದ ಮಾನ್ಯ : ಸತೀಶ್ ಹಿಂದರ್, ಕನ್ನಡ ಮಿತ್ರರು ಅಧ್ಯಕ್ಷರಾದ  ಮಾನ್ಯ : ಶಶಿಧರ್ ನಾಗರಾಜಪ್ಪ, ಒಮಾನ್ ಕನ್ನಡ ಸಂಘದ ಅಧ್ಯಕ್ಷರಾದ  ಮಾನ್ಯ ಕರುಣಾಕರ್ ರಾವ್, ಕತಾರ್ ಕನ್ನಡ ಸಂಘದ ಅಧ್ಯಕ್ಷರಾದ ಮಾನ್ಯ : ನಾಗೇಶ್ ರಾವ್, ಮಾನ್ಯ : ಬಹರೈನ್ ಕನ್ನಡ ಸಂಘದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಕುವೈತ್ ಕನ್ನಡ ಸಂಘದ ಅಧ್ಯಕ್ಷರಾದ ಮಾನ್ಯ : ರಾಜೇಶ್ ವಿಠ್ಠಲ್, ದುಬೈ ಶಿರೂರು ಅಧ್ಯಕ್ಷರಾದ ಮಾನ್ಯ : ಮನಾಫ್ ಮೀರು, ಯುಎಇ ಭಟ್ಕಳ ಸಮಿತಿ ಅಧ್ಯಕ್ಷರಾದ ಮಾನ್ಯ : ನಯ್ಯರ್ ಭಟ್ಕಳ, ಬ್ಯಾರಿ ಕಲ್ಚರಲ್ ಫೋರಮ್ ಅಧ್ಯಕ್ಷರಾದ ಡಾ .ಯೂಸುಫ್, ಕರ್ನಾಟಕ ಸ್ಪೋರ್ಟ್ಸ್ ಕ್ಲಬ್ ದುಬೈ ಅಧ್ಯಕ್ಷರಾದ ಇಸ್ಮಾಯಿಲ್ ಮೂಳೂರು, ಐಕೆಎಫ್ ಸಂಚಾಲಕರಾದ ಹಿದಾಯತ್ ಅಡ್ಡೂರು, ಗಂಗೊಳ್ಳಿ ಸ್ಪೋರ್ಟ್ಸ್ ಕ್ಲಬ್ ಮುಖ್ಯಸ್ಥರಾದ ಮಾನ್ಯ ನಿಸಾರ್  ಮುಂತಾದ ದೇಶ ವಿದೇಶದ ಗಣ್ಯರು ಪಾಲ್ಗೊಂಡು ಯುಎಇ ಇತಿಹಾಸದಲ್ಲೇ ಒಂದು ಕಾರ್ಯಕ್ರಮಕ್ಕೆ ಎಲ್ಲಾ ಕನ್ನಡಪರ, ಸಾಮಜಿಕ ಸಾಂಸ್ಕ್ರತಿಕ ಕ್ರೀಡಾ ಕ್ಷೇತ್ರದ ಸಂಘ ಸಂಸ್ಥೆಗಳ ಪ್ರಮುಖರು ಒಟ್ಟಿಗೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

video link https://www.youtube.com/watch?v=MiIH9esnhCM&t=4283s 

ಈ ಮೇಲಿನ ಲಿಂಕ್ ಓಪನ್ ಮಾಡಿ ಕಾರ್ಯಕ್ರಮ ವೀಕ್ಷಿಸಬಹುದು.

ಈ ವರ್ಷದ ದಸರಾ ಕ್ರೀಡೋತ್ಸವವನ್ನು ಕೋವಿಡ್ ಕಾಲದಲ್ಲಿ ಮುಂದೆ ನಿಂತು ನಾಗರಿಕರ ಪ್ರಾಣ ರಕ್ಷಕರಾದ ಕೋವಿಡ್ ಯೋಧರಿಗೆ ಸಮರ್ಪಿಸಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ಕೋವಿಡ್ ಯೋಧರಾದ ಡಾ .ಸವಿತಾ ಮೋಹನ್ ದುಬೈ, ಡಾ . ಜಗದೀಶ್ ನಂಜಪ್ಪ ದುಬೈ ಡಾ .ಮಮತಾ ಬಸವರಾಜ್ ದುಬೈ, ಡಾ . ವಿಶ್ವನಾಥ್ ಗೌರಯ್ಯ ಅಬುಧಾಬಿ, ಡಾ. ಗಾಡ್ಫ್ರೆಡ್ ರಾಸ್ ಅಲ್ ಖೈಮಾ, ಡಾ.ಕಿಸ್ಸನ್ ಉಮ್ಮುಲ್ ಕ್ವೀನ್, ಮಾನ್ಯ : ಶ್ರೀಕಾಂತ್ ಬೆಂಗಳೂರು - ದುಬೈ ಆಸ್ಪತ್ರೆ ಆಂಬುಲೆನ್ಸ್,  ಮಾನ್ಯ : ಜಲೀಲ್ ಮಂಗಳೂರು - ನರ್ಸ್ - ದುಬೈ ಕೋವಿಡ್ ಆಸ್ಪತ್ರೆ

ಸಾಮಾಜಿಕ ಕ್ಷೇತ್ರದಲ್ಲಿ ಕೋವಿಡ್ ಯೋಧರಾಗಿ ಸೇವೆ ಸಲ್ಲಿಸಿದ ಡಾ.ಶಾಂತಿ -ವೈದ್ಯರು ಶಾರ್ಜಾ ಆಸ್ಪತ್ರೆ , ಡಾ.ರುಮಾನ- ವೈದ್ಯರು ದುಬೈ ಆಸ್ಪತ್ರೆ, ನವಾಜ್ ಕುಂದಾಪುರ, ಹರೀಶ್ ಕೊಡಗು, ಕ್ಲೀವನ್ ಉಡುಪಿ, ಅಬ್ದುಲ್ ಹಾದಿ ಭಟ್ಕಳ, ಸುಹೈಲ್ ಮಂಗಳೂರು, ನೌಫಲ್ ದಕ್ಷಿಣ ಕನ್ನಡ,ನಿಜಾರ್ ಕಾಸರಗೋಡು ಕನ್ನಡಿಗ, ಫಯಾಜ್ ಕುಂದಾಪುರ, ಅಬ್ರಾರ್ ಶಿವಮೊಗ್ಗ, ಹಾದಿಯ ಮಂಡ್ಯ, ಮಮತಾ ಶಾರ್ಜಾ, ಸೆಂತಿಲ್ ಬೆಂಗಳೂರು, ಮೊಯಿನುದ್ದೀನ್ ಹುಬ್ಬಳ್ಳಿ, ಸಯ್ಯದ್ ಶಿವಮೊಗ್ಗ,ವಿನೋದ್ ಡಿಸೋಜ ಮಂಗಳೂರು, ರಫೀಕಲಿ ಕೊಡಗು ಮುಂತಾದವರನ್ನು ಗುರುತಿಸಿ ಸನ್ಮಾನ ಮಾಡಿ ಗೌರವಿಸಿದರು.  


ಕಾರ್ಯಕ್ರಮದ ಕೊನೆಯ ಹಂತವಾಗಿ ವರ್ಚುಯಲ್ ದಸರಾ ಕ್ರೀಡೋತ್ಸವದ ರಸಪ್ರಶ್ನೆ, ಅಂತಾಕ್ಷರಿ ಸ್ಪರ್ಧೆ, ರಂಗೋಲಿ ಸ್ಪರ್ಧೆ, ದಸರಾ ಗೊಂಬೆ ಸ್ಪರ್ಧೆ, ಚೆಸ್, ಕ್ಯಾರಮ್, ಲೂಡೋ, ಭಾಷಣ ಸ್ಪರ್ಧೆ  ಮುಂದಾದುವುಗಳಲ್ಲಿ ಪಾಲ್ಗೊಂಡು ವಿಜೇತರಾದ ಕಿರಿಯರಿಗೆ ಮತ್ತು ಹಿರಿಯರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತ್ತು, ಕೊನೆಯಲ್ಲಿ ಅಕ್ರಮ್ ಕೊಡಗು ಅವರು ಪಾಲ್ಗೊಂಡ ಸರ್ವ ಅತಿಥಿಗಳಿಗೆ, ವೀಕ್ಷಕರಿಗೆ ಹಾಗೂ ಸ್ಪರ್ಧಾಳುಗಳಿಗೆ  ಧನ್ಯವಾದ ಸಮರ್ಪಿಸಲಾಯಿತು.

ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಉಪಾಧ್ಯಕ್ಷರಾದ ಮಮತಾ ಮೈಸೂರು, ಕಾರ್ಯದರ್ಶಿಯಾದ ಸೆಂತಿಲ್ ಬೆಂಗಳೂರು, ಸಂಯೋಜಕರಾದ  ರಫೀಕಲಿ ಕೊಡಗು,  ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ, ಡಾ.ಸವಿತಾ ಮೈಸೂರು, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ, ಅನಿತಾ ಬೆಂಗಳೂರು, ಶಂಕರ್ ಬೆಳಗಾವಿ, ಮೊಯಿನುದ್ದೀನ್ ಹುಬ್ಬಳ್ಳಿ ಮುಂತಾದ ಸಮಿತಿ ಸದಸ್ಯರುಗಳು  ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.




Post a Comment

0 Comments