ಮಂಗಳೂರು: ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೆರ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಜರಗಿದ 7 ನೇ ವಾರ್ಷಿಕ ಸಂಭ್ರಮವು ಕಳೆದ ಭಾನುವಾರ ನಗರದ ಬಲ್ಮಠ ರಸ್ತೆಯ ಕುಡ್ಲ ಫೆವಿಲಿಯನ್ ಸಭಾಂಗಣದಲ್ಲಿ ಬಹಳ ಸಂಭ್ರಮದಿಂದ ಜರಗಿತ್ತು.ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡುತ್ತ ಸಾರ್ವಜನಿಕ ಸಮಾಜ ಸೇವಾಸಂಘಗಲ್ಲಿ ನುರಿತ ಅನುಭವಿ ಸಮರ್ಥ ನಾಯಕನಿರುವ ತಂಡದಿಂದ ಜನಮೆಚ್ಚುಗೆಯ ಜನಪ್ರಿಯ ಕಾರ್ಯಗಳನ್ನು ಅಯೋಜಿಸಲು ಸಾದ್ಯ. ಈ ನಿಟ್ಟಿನಲ್ಲಿ ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಎಲ್ಲಾ ಕ್ಷೇತ್ರಗಳಲ್ಲಿ ಅಲ್ಪಾವಧಿಯಲ್ಲಿ ಜನಮೆಚ್ಚುಗೆಯ ಕೆಲಸವನ್ನು ಮಾಡುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಥಾಣೆ ಬಂಟರ ಸಂಘದ ಅದ್ಯಕ್ಷ ಕುಶಲ್ ಸಿ ಭಂಡಾರಿ,ವೇಣುಗೋಪಲ ಶೆಟ್ಟಿ ಪಾದೆ,ಅಜಿತ್ ರೈ,ಡಾ.ದೇವದಾಸ್ ರೈ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ ನ ಅಧ್ಯಕ್ಷರಾದ ಸದಾನಂದ ಶೆಟ್ಟಿ ಅವರು ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಕ್ಕೆ ಟ್ರಸ್ಟ್ ನ ವತಿಯಿಂದ ಬಹಳಷ್ಟು ಪೋತ್ಸಹ ನೀಡಲಾಗಿದೆ.ಟ್ರಸ್ಟ್ ನಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುವುದರಿಂದ ಈ ಕೆಲಸವನ್ನು ಯಶಸ್ವಿಯಾಗಿ ನಡೆದುಕೊಂಡು ಬಂದಿದೆ ಎಂದರು.
ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ
ಸಮಾರಂಭದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಬಿ.ಎಂ ಹೆಗ್ಡೆ, ಕರ್ನಾಟಕ ರಾಜ್ಯ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಯಮಿತ ಅಧ್ಯಕ್ಷ ರವಿಂದ್ರ ಶೆಟ್ಟಿ ಉಳಿದೊಟ್ಟು,ಬಂಟ್ವಳ ಎಪಿಎಂಸಿ ಅಧ್ಯಕ್ಷ ನೇಮಿರಾಜ್ ರೈ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಬಂಟ ಸಾಂಸ್ಕೃತಿಕ ವೈಭವ
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಂಗಳೂರು ವಲಯ ಮಟ್ಟದಲ್ಲಿ ಬಂಟರ ಸಂಘ (ಕಂಕನಾಡಿ,ಜಪ್ಪು,ಸುರತ್ಕಲ್, ಮೂಲ್ಕಿ,ಕಾವೂರು,ಗುರುಪುರ,ಉಳ್ಳಲ,ಜಪ್ಪಿನಮೊಗರು,ಕೋಡಿಕಲ್)ಗಳ ವತಿಯಿಂದ ಜರಗಿದ ಬಂಟ ಸಾಂಸ್ಕೃತಿಕ ವೈಭವ ಸೇರಿದ ಜನರನ್ನು ಮನಸೊರೆಗೊಳ್ಳಿಸಿತ್ತು.
ಬಂಟ್ಸ್ ಮಜಿಬೈಲ್ ನ ಕೆ.ಕಾರ್ತಿಕ್ ಶೆಟ್ಟಿ ಮಜಿಬೈಲ್, ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ, ಸಂಪತ್ ಶೆಟ್ಟಿ ತೋಕುರುಗುತ್ತು(ದುಬೈ), ಮಂಗಳೂರು ವಲಯದ ಬಂಟರ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ಡಾ.ವಸಂತ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು.ರಾಜ್ ಗೋಪಲ್ ರೈ ಸ್ವಾಗತಿಸಿ ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ವಂದಿಸಿದರು.ಕದ್ರಿ ನವನೀತ ಶೆಟ್ಟಿ ಮತ್ತು ಸಾಹಿಲ್ ರೈ ನಿರೂಪಣೆಗೈದರು.
ವರದಿ: ವಿಜಯಕುಮಾರ್ ಶೆಟ್ಟಿ ಮಜಿಬೈಲ್ (ದುಬೈ)
+971552032097
ಚಿತ್ರ: ರಾಜೇಶ್ ಶೆಟ್ಟಿ ಬಲ್ಲಲ್ ಬಾಗ್
ಜಾಹೀರಾತು








0 Comments