ಸಾರಡ್ಕ ಗಡಿ ಪ್ರದೇಶದ ಸಂಚಾರ ನಿಯಂತ್ರಣಕ್ಕೆದುರಾಗಿ ಎಣ್ಮಕಜೆ ಗ್ರಾ.ಪಂ‌.ಅಧ್ಯಕ್ಷರಿಂದ ಠರಾವು ಮಂಡನೆ


ಪೆರ್ಲ: ಕೋವಿಡ್ 19 ಕಾರಣಕ್ಕಾಗಿ ಎಣ್ಮಕಜೆ ಗ್ರಾಮ ಪಂಚಾಯತಿನ ಗಡಿ ಪ್ರದೇಶವಾದ ಸಾರಡ್ಕ ಚೆಕ್ ಪೋಸ್ಟ ನ್ನು  ದ.ಕ.ಜಿಲ್ಲಾಧಿಕಾರಿ ಗಡಿ ಸಂಚಾರ ನಿರ್ಬಂಧ ವಿಧಿಸಿರುವುದರ ವಿರುದ್ಧ ಪ್ರಯೋಗಿಕವಲ್ಲದ ಈ ಆದೇಶವನ್ನು ಶೀಘ್ರವೇ ಹಿಂಪಡೆಯಬೇಕೆಂದು ಆಗ್ರಹಿಸಿ ಎಣ್ಮಕಜೆ ಗ್ರಾಮ ಪಂಚಾಯತ್ ಆಡಳಿತ ಸಮಿತಿ ಇಂದು ಮಧ್ಯಾಹ್ನ ಬಳಿಕ ನಡೆದ ಆಡಳಿತ ಸಮಿತಿ ಸಭೆಯಲ್ಲಿ ಠರಾವು ಮಂಡನೆಗೈದಿದೆ.ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಸಭೆಯಲ್ಲಿ ಠರಾವು ಮಂಡಿಸಿದರು.

ಹಿಂದೆ ನಾಲ್ಕಾರು ತಿಂಗಳುಗಳ ಕಾಲ ಮುಚ್ಚಿದ್ದ ಗಡಿ ಚೆಕ್ ಪೋಸ್ಟು ಅ ಬಳಿಕ ತೆರವುಗೊಳಿಸಿ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೇ ಇದೀಗ ಮತ್ತೊಮ್ಮೆ ಏಕಾಏಕಿ ಗಡಿ ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದರಿಂದ ಕಂಗೆಟ್ಟ ಪರಿಸ್ಥಿತಿ ಇಲ್ಲಿನ ಜನತೆಯದ್ದಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಕೋರೊನ ಪಾಸಿಟಿವ್ ಪ್ರಕರಣಗಳು  ದಾಖಲಾಗದಿದ್ದು ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ನಿಗ್ರಹ ಕಾರ್ಯ ಕಟ್ಟು ನಿಟ್ಟಾಗಿ ನಡೆಯುತ್ತಿದೆ. ಹೀಗಿರುವಾಗಲೇ ಕರ್ನಾಟಕವನ್ನು ಆಶ್ರಯಿಸುವ ಜನತೆಯಿಂದ ಕೋವಿಡ್ ನೆಗೆಟಿವ್ ಸರ್ಟಿಫೀಕೆಟ್ ಆಗ್ರಹಿಸುವುದು ದ.ಕ.ಜಿಲ್ಲಾಡಳಿತದ ಯೋಗ್ಯ ರೀತಿಯಲ್ಲ. ಕೃಷಿಕರಿಗೂ,ಕೂಲಿಕಾರ್ಮಿಕರಿಗೂ ವಿದ್ಯಾರ್ಥಿಗಳಿಗೂ ಈ ಏಕಾಏಕಿ ನಿರ್ಬಂಧ ತೀರಾ ಸಮಸ್ಯೆಯನ್ನುಂಟು ಮಾಡಿದೆ.72 ಗಂಟೆ ಮುಂಚಿತವಾಗಿ ಲಭಿಸಿದ ಅರ್ ಟಿ ಪಿ ಸಿ ಆರ್ ಟೆಸ್ಟ್ ರಿಪೋರ್ಟ್ ಇವರು ಹಾಜರುಪಡಿಸಬೇಕೆಂಬ ಆದೇಶ ಅಪ್ರಾಯೋಗಿಕವಾಗಿದೆ

ದಕ್ಷಿಣ ಜಿಲ್ಲಾಡಳಿತದ ಆದೇಶದಿಂದ ಉದ್ಭವಿಸಿದ ಗಡಿಪ್ರದೇಶದ ಜನರ ಆತಂಕ ಹಾಗೂ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಜನರ ಸಂಚಾರ ಸ್ವಾತಂತ್ರ್ಯ ಹಾಗೂ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುವ ಆದೇಶ ಹಿಂಪಡೆಯಬೇಕೆಂದು ಎಣ್ಮಕಜೆ ಆಡಳಿತ ಸಮಿತಿಯಲ್ಲಿ ಮಂಡಿಸಿದ ಠರಾವಿನ ಪ್ರತಿಯನ್ನು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಿಗೆ ಹಾಗೂ ದ.ಕ.ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಗ್ರಾ.ಪಂ.ಕ್ರಮ ಕೈಗೊಂಡಿದೆ.

Post a Comment

0 Comments