ವಿದೇಶ_ವಿಶೇಷ- ಅಂಕಣ 21
ಕತಾರ್ : ಗಲ್ಪ್ ರಾಷ್ಟ್ರದಲ್ಲಿ ಇದ್ದುಕೊಂಡು ಸ್ವದೇಶದ ಅತೀ ಹೆಚ್ಚು ಜನತೆಗೆ ಉದ್ಯೋಗದಾತರಾಗುವ ಮೂಲಕ ತನ್ನ ಬಹುಮುಖಿ ಆಸಕ್ತಿ ಅಭಿರುಚಿಯಿಂದ ಕ್ರೀಡಾ,ಸಾಂಸ್ಕೃತಿಕ ಪ್ರೋತ್ಸಾಹಕರಾಗಿ ಗುರುತಿಸಿಕೊಂಡಿರುವ ಮಹಾನ್ ಸಾಧಕರ ಸಾಲಿನಲ್ಲಿ ಕತಾರ್ ದೇಶದ ಅನಿವಾಸಿ ಕನ್ನಡಿಗರಾಗಿರುವ ಡಾ.ಮೂಡಂಬೈಲ್ ರವಿ ಶೆಟ್ಡಿ ಎಂಬವರ ಸಾಧನೆ ಗಮನಾರ್ಹವಾಗಿದೆ.
ಭಾರತೀಯರಾದ ಯುವಕರನ್ನು ಅದರಲ್ಲೂ ಅತ್ಯಂತ ಹೆಚ್ಚು ಕರ್ನಾಟಕದ ಕನ್ನಡಿಗರ ಪಾಲಿನ ಅನ್ನದಾತರೆನಿಸಿಕೊಂಡಿರುವ ಈ ವಿಶೇಷ ಸಾಧಕನ ಯಶಸ್ಸಿ ಬದುಕಿನ ಬಗ್ಗೆ ಬರಹ ರೂಪದಲ್ಲಿ ವಿಶೇಷ ಚಾನೆಲ್ ಈ ಬಾರಿಯ ವಿದೇಶ_ವಿಶೇಷ ಅಂಕಣ ಬೆಳಕು ಚೆಲ್ಲುತ್ತಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡಂಬೈಲಿನ ತಿಮ್ಮಪ್ಪ ಶೆಟ್ಟಿ- ದೋಣಿಂಜೆಗುತ್ತು ಸರೋಜಿನಿ ಶೆಟ್ಟಿ ದಂಪತಿಗಳ ಪುತ್ರನಾದ ರವಿ ಶೆಟ್ಟಿ ಅವರು ಬಿ.ಇ.ಮೆಕಾನಿಕಲ್ ಹಾಗೂ ಎಂ.ಬಿ.ಎ.ಪದವಿಧರರು.ತನ್ನ ವಿದ್ಯಾರ್ಥಿ ಜೀವನದಿಂದಲೇ ದೈನಂದಿನ ಪಠ್ಯ ಚಟುವಟಿಕೆಗಳ ಜೊತೆಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟಿವಟಿಕೆಗಳಲ್ಲಿ ವಿಶೇಷ ಒಲವು ಬೆಳೆಸಿಕೊಂಡಿದ್ದರು. ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡಾ ಚಟುವಟಿಕೆಗಳಾದ ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್‌ನಲ್ಲಿ ವಿಶೇಷ ಅಸಕ್ತಿಯನ್ನು ಹೊಂದಿದ್ದರು. ಇದರೊಂದಿಗೆ ವಿದ್ಯಾರ್ಥಿ ಜೀವನದಲ್ಲಿ ಶ್ರೀಯುತರು ವಿಶೇಷ ವಾಗ್ಮಿಗಳಾಗಿಯೂ ಗುರುತಿಸಿ ಕೊಂಡಿದ್ದರು. ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸುಲಭವಾಗಿ ತಮ್ಮ ವಿಶೇಷ ವಾಕ್ ಚಾತುರ್ಯದಿಂದ ಅನೇಕ ಬಹುಮಾನಗಳನ್ನು ಗಳಿಸಿದರು.ವೃತ್ತಿ ಜೀವನ: ಡಾ.ರವಿ ಶೆಟ್ಟಿಯವರ ವೃತ್ತಿ ಜೀವನಮುಂಬಯಿಯ ಸೈಮನ್ ಕಾರ್ವ್ಸ್ ಇಂಡಿಯಾ ದಲ್ಲಿ ಇಂಜಿನಿಯರಿಂ ಗ್ಗ್ರಾ ಜುವೇಟ್ ಟ್ರೈನಿಯಾಗಿ 1985 ರಲ್ಲಿ ಪ್ರಾರಂಭವಾಯಿತು. ಅವರ ಕೆಲಸದ ಮೇಲಿನ ಶ್ರದ್ಧೆ, ಉತ್ಸಾಹದಿಂದಾಗಿ ಪ್ರತಿಷ್ಟಿತ ಟಾಟಾ ಪ್ರಾಜೆಕ್ಟ್ ಲಿ.ನಲ್ಲಿ 1986ರಲ್ಲಿ ಕೆಲಸದ ಅವಕಾಶ ದೊರೆಯಿತು. ಹಲವಾರು ಪ್ರೊಜೆಕ್ಟ್ ಸೈಟ್ ಗಳಲ್ಲಿ ಕೆಲಸ ಮಾಡಿದ ನಂತರ ಹೈದರಾಬಾದ್‌ನ ಕಾರ್ಪೋರೇಟ್ ಆಫೀಸ್‌ನಲ್ಲಿ “ಪ್ರಾಜೆಕ್ಟ್ ಇಂಜಿನೀಯರ್” ಆಗಿ ನಿಯುಕ್ತಿಗೊಂಡರು.ರವಿ ಶೆಟ್ಟಿ ಅವರು ತಮ್ಮ ದೈನಂದಿನ ಕೆಲಸದ ಜೊತೆ ಜೊತೆಗೆ ಟಾಟಾ ಪ್ರೋಜೆಕ್ಟ್ ಲಿ.ನಲ್ಲಿ ಕ್ರೀಡೆಗೆ ವಿಶೇಷ ಒತ್ತು ಕೊಟ್ಟು,ಸುಮಾರು ಏಳು ವರ್ಷಗಳ ಕಾಲ ಕ್ರಿಕೆಟ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇದರ ಜೊತೆಗೆ ಟಾಟಾ ಪ್ರೋಜೆಕ್ಟ್ಸ್ ಬ್ಯಾಡ್ಮಿಂಟನ್ ತಂಡ ಸತತವಾಗಿ ಮೂರು ವರ್ಷಗಳ ಕಾಲ ಚಾಂಪಿಯನ್ಸ್ ಪಾರಿತೋಷಕ ಗೆಲ್ಲಲು ಕಾರಣರಾಗಿದ್ದರು.
ಸ್ವದೇಶದಿಂದ ವಿದೇಶದ ಕತಾರ್ ಗೆ ಪಯಣ:
ಹನ್ನೊಂದು ವರ್ಷಗಳ ಕಾಲ ಯಶಸ್ವಿಯಾಗಿ ಸ್ವದೇಶದಲ್ಲಿ ಕಾರ್ಯನಿರ್ವಹಿಸಿದ ಶ್ರೀ ರವಿ ಶೆಟ್ಟಿಯವರು ರಾಜಿನಾಮೆ ನೀಡಿ ಬಳಿಕ ಕತಾರ್ ದೇಶದ ದೋಹಾದ ಪ್ರತಿಷ್ಟಿತ ಮನ್ನಾಯ್ ಗ್ರೂಪ್‌ನ ಮೆಕಾನ್ ನಿರ್ಮಾಣ ಸಂಸ್ಥೆಯನ್ನು ಸೇರಿದರು. ಶ್ರೀಯುತರ ಕಾರ್ಯನಿಷ್ಠತೆ, ಕಾರ್ಯತತ್ಪರತೆ ಮತ್ತು ಕಾರ್ಯದಕ್ಷತೆಯ ಪರಿಣಾಮದಿಂದಾಗಿ ಬೇಗನೇ “ಪ್ರಪೋಸಲ್ ಮ್ಯಾನೇಜರ್” ಹುದ್ದೆಯನ್ನು ಅಲಂಕರಿಸಿ ಸ್ಥಳೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ಗುತ್ತಿಗೆಗೆ ಕಾರಣಕರ್ತರಾಗಿ ಸಂಸ್ಥೆಗೆ ಅತ್ಯುತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾದರು.
ಸ್ವಉದ್ಯಮದತ್ತ ಮುಖ ಮಾಡಿದ ಉದ್ಯೋಗದಾತ:
ತಮ್ಮ ದೈನಂದಿನ ಕೆಲಸದ ಜೊತೆ ಡಾ.ರವಿ ಶೆಟ್ಟಿಯವರು ಹೈದರಾಬಾದ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಎರಡು ಸಸ್ಯಹಾರಿ ಹೋಟೆಲ್‌ಗಳನ್ನು ಪ್ರಾರಂಭಿಸಿ ತಮ್ಮ ಉದ್ಯೋಗಶೀಲ ಮನೋಭಾವವನ್ನು ದೃಢಪಡಿಸಿದರು. ಕರ್ನಾಟಕದ ನೂರಾರು ಜನರಿಗೆ ಉದ್ಯೋಗ ಒದಗಿಸುವಲ್ಲಿ ಯಶಸ್ವಿಯಾದರು. ಇವರ ಈ “ಉದ್ಯಮಿ ಮನೋಭಾವ” ಇವರನ್ನು ಕತಾರ್ ದೇಶದಲ್ಲಿ ತಮ್ಮದೇ ಆದ ಸ್ವಂತ ಕಂಪನಿ ಪ್ರಾರಂಭಿಸಲು ಪ್ರೇರೇಪಿಸಿತು.ಡಾ.ರವಿ ಶೆಟ್ಟಿಯವರ ಉದ್ಯೋಗಶೀಲ ಮನೋಭಾವವು 2006ರಲ್ಲಿ ತಮ್ಮದೇ ಸ್ವಂತ ಉದ್ಯಮವಾದ “ಅಡ್ವಾನ್ಸ್ಡ್ ಟೆಕ್ನಿಕಲ್ ಸರ್ವೀಸಸ್ ಕಂಪನಿ”ಯನ್ನು ಪ್ರಾರಂಭಿಸಲು ಕಾರಣವಾಯಿತು. ಈ ಸಂಸ್ಥೆ ಪ್ರಸ್ತುತವಾಗಿ ಕತಾರ್ ದೇಶದ ಕೈಗಾರಿಕೆಗಳಿಗೆ ವೃತ್ತಿಪರ ಮತ್ತು ಪರಿಣಾಮಕಾರಿ ತಾಂತ್ರಿಕ ಸೇವೆಯನ್ನು ನೀಡುತ್ತಿದೆ. ವಿದ್ಯುತ್ ಪ್ರತಿಷ್ಠಾಪನಾ ಯೋಜನೆಗಳು, ಯಂತ್ರಗಳ ವಿನ್ಯಾಸ ರಚನೆ ಮತ್ತು ನಿರ್ಮಾಣ, ವಿಶೇಷ ಪರೀಕ್ಷಾ ಉಪಕರಣಗಳು ಮತ್ತು ತಾಂತ್ರಿಕ ನೆರವನ್ನು ನೀಡುವಲ್ಲಿ ಈ ಸಂಸ್ಥೆ ಜನಪ್ರಿಯವಾಗಿದೆ. ಈ ಜನಪ್ರಿಯತೆಯಿಂದ ಶ್ರೀ ರವಿ ಶೆಟ್ಟಿಯವರು 2011 ರಲ್ಲಿ “ಅಸೋಸಿಯೇಟೆಡ್ ಟೆಕ್ನಿಕಲ್ ಸರ್ವೀಸಸ್” ಎಂಬ ಕಂಪನಿಯನ್ನು ಪ್ರಾರಂಭಿಸಿದರು. 2006ರಲ್ಲಿ ಒಬ್ಬ ವ್ಯಕ್ತಿಯಿಂದ ಪ್ರಾರಂಭವಾದ ಡಾ.ರವಿ ಶೆಟ್ಟಿಯವರ “ಎ.ಟಿ.ಎಸ್. ಸಮೂಹ ಸಂಸ್ಥೆ” ಯಲ್ಲಿ ಇಂದು ಸುಮಾರು 300 ಜನರು ಕೆಲಸ ಮಾಡುತ್ತಿದ್ದರೂ, ಒಟ್ಟಾರೆ ಪ್ರಾರಂಭದಿಂದ ಸುಮಾರು 2000 ಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ನಿರುದ್ಯೋಗ ಸಮಸ್ಯೆಯನ್ನುಎದುರಿಸುತ್ತಿರುವ ನಮ್ಮ ದೇಶದಲ್ಲಿ, ಶ್ರೀ ರವಿ ಶೆಟ್ಟಿಯವರು ಕತಾರ್‌ನಲ್ಲಿ ಇಷ್ಟೊಂದು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ ಕೊಟ್ಟಿರುವ ಸೇವೆ ಶ್ಲಾಘನೀಯ. ಜೊತೆಗೆ ಡಾ.ರವಿ ಶೆಟ್ಟಿಯವರು ಬೆಂಗಳೂರಿನ “ಸೀ.ಪಿ. ಏಜೆನ್ಸೀಸ್”, ಮತ್ತು ಹೈದರಾಬಾದ್‌ನ “ಮಾಡರ್ನ್ ಸೇಫ್ಟಿ ಗ್ಲಾಸ್” ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆ. ಈ ಕಂಪೆನಿಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಸುಮಾರು 150 ಜನರಿಗೆ ಉದ್ಯೋಗ ಕಲ್ಪಿಸಿರುವುದು ಶ್ಲಾಘನೀಯ.ಕತಾರ್‌ನಲ್ಲಿ ತಮ್ಮ ಪ್ರಾರಂಭಿಕ ದಿನಗಳಲ್ಲಿ ಮೆಕಾನ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೂ ಉದ್ಯೋಗ ಅರಸಿಕೊಂಡು ಬರುತ್ತಿದ್ದವರಿಗೆ ಸದಾ ಸಹಾಯ ಹಸ್ತವನ್ನು ನೀಡುತ್ತಿದ್ದರು.
ಮಹಾನುಭಾವತೆಯ ಸಾಕಾರ ಮೂರ್ತಿ : ಡಾ. ರವಿ ಶೆಟ್ಟಿ ಅವರು ಒಬ್ಬ ಉದ್ಯೋಗ ಶೀಲ ವ್ಯಕ್ತಿಯಾಗದೇ ಹಲವಾರು ಸಾಮಾಜಿಕ ಸಂಸ್ಥೆಗಳಲ್ಲಿ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸಿ ಒಬ್ಬ ವಿಶೇಷ ವ್ಯಕ್ತಿಯಾಗಿದ್ದಾರೆ. 1993ರಲ್ಲಿ ಕತಾರ್‌ನಲ್ಲಿ ಪಾದಾರ್ಪಣೆ ಮಾಡಿದ ಶ್ರೀ ರವಿ ಶೆಟ್ಟಿಯವರು ಹಲವಾರು ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ನೇತೃತ್ವವಹಿಸುವ ಮೂಲಕ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದಾರೆ.ಸೇವಾ ನಿರತ ಪ್ರಮುಖ ಸಂಘ ಸಂಸ್ಥೆ ಹಾಗೂ ಸಮಿತಿಗಳು
👉 2021- ಮೋಕ್ತೆಸರರು ಶ್ರೀಸುಬ್ರಾಯ ದೇವಸ್ಥಾನ ಪುತ್ತೂರು.
👉 2020- ಟ್ರಸ್ಟಿ, ಶ್ರೀ ಮಹಾಲಕ್ಷ್ಮಿ ಕ್ಷೇತ್ರ, ಶ್ರೀ ಧಾಮ ಮಾಣಿಲ.
👉 2016 ಸಲಹಾ ಸಮಿತಿ ಸದಸ್ಯರು, (Nominated by Indian ambassador)
ಐಬಿಪಿಸಿ (ಇಂಡಿಯನ್ ಬ್ಯುಸಿನೆಸ್ ಪ್ರೊಫೆಶನಲ್ಸ್ ಕೌನ್ಸಿಲ್ – an apex body of Embassy of India-Qatar)
👉 2018 ಉಪಾಧ್ಯಕ್ಷರು, ಕರ್ನಾಟಕ ಸಂಘ ಕತಾರ್
👉2018 ಗೌರವಾಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಶನ್, ಕತಾರ್ ಘಟಕ
👉 2018 ಸಲಹಾ ಸಮಿತಿ ಸದಸ್ಯರು , ವೀರ ರಾಣಿ ಅಬ್ಬಕ್ಕ ರಾಷ್ರ್ಟೀಯ ಪ್ರತಿಷ್ಠಾನ
👉2013 ಸಲಹಾ ಸಮಿತಿ ಸದಸ್ಯರು,(Nominated by Indian ambassador) ಐಸಿಬಿಎಫ್ (ಇಂಡಿಯನ್ ಕಮ್ಯೂನಿಟಿ ಬೆನೊವೆಲೆಂಟ್ ಫೋರಂ an apex body of Embassy of Idia-Qatar)
👉 2013 ಮಹಾಪೋಷಕರು, ತುಳುಕೂಟ ಕತಾರ್.
👉 ೨೦೧೬-೨೦೧೭ “ತುಳುಕೂಟ ಕತಾರ್” ನ ಅಧ್ಯಕ್ಷ (ಮೂರನೇ ಬಾರಿಗೆ)
👉 2016 ಆಡಳಿತ ಮೊಕ್ತೇಸರರು-ಸುಬ್ರಾಯ ದೇವಸ್ಥಾನ ಪುತ್ತೂರು
👉 2015 ಮೆನೇಜಿಂಗ್ ಟ್ರಸ್ಟೀ – “ಮೂಡಂಬೈಲು ನೇಸರ ಫೌಂಡೇಶನ್”
👉 2014-2016 “ತುಳುಕೂಟ”ದ ಅಧ್ಯಕ್ಷ (ಎರಡನೇ ಬಾರಿಗೆ)
👉2013-2015 ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ-ಸುಬ್ರಾಯ ದೇವಸ್ಥಾನ, ಪುತ್ತೂರು.
👉 2012-2014 ಕತಾರ್ ದೇಶದ “ಬಂಟ್ಸ್ ಸಂಘ”ದ ಸಂಸ್ಥಾಪಕ ಅಧ್ಯಕ್ಷ
👉 2010 ತುಳುಕೂಟದ ವಿಶೇಷ ಅಗತ್ಯಗಳ ಸಮಿತಿಯ ಅಧ್ಯಕ್ಷ
👉 2008-2910 ಕತಾರ್‌ನ “ತುಳುಕೂಟ”ದ ಅಧ್ಯಕ್ಷ.
👉 1999 ಕತಾರ್ ಕರ್ನಾಟಕ ಸಂಘದ ಅಜೀವ ಸದಸ್ಯರು ಹಾಗೂ ಕಾರ್ಯಕ್ರಮಗಳ ಸಕ್ರಿಯ ಪ್ರಾಯೋಜಕರು.
👉 1992 “ಟಾಟ ಸ್ಪೋರ್ಟ್ಸ್ & ರಿಕ್ರಿಯೇಶನ್ ಕ್ಲಬ್ ನ ಜನರಲ್
ಸೆಕ್ರೆಟರಿ.
ಅರಸಿ ಬಂದ ಪ್ರಶಸ್ತಿ / ಪುರಸ್ಕಾರಗಳು.....
01.ಇಂದೋರ್ ನಲ್ಲಿ ನಡೆದ ಆತ್ಮನಿರ್ಭರ ಭಾರತ್ ರಾಷ್ರ್ಟೀಯ ಕಾನ್ಫರೆನ್ಸ್ ನಲ್ಲಿ International Commotion Of Culture &Diplomatic Prlationಗಾಗಿ NELSON MANDELA Award
02. “ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” - 2016-ಸಮಾಜ ಸೇವೆ.
03. “ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ” – 2015-ಸಮಾಜ ಸೇವೆ.
04. "ಗೌರವ ಡಾಕ್ಟರೇಟ್" ಪದವಿ-ಸಮಾಜ ಸೇವೆ ಹಾಗೂ ಉದ್ಯಮಶೀಲ-ಕಿಂಗ್ಸ್ ಯೂ ಯುನಿವೆರ್ಸಿಟಿ ಅಮೇರಿಕಾ.05. “ಮದರ್ ಥೆರೇಸಾ ಸೋಶಿಯಲ್ ಹಾರ್ಮೋನಿ ಪ್ರಶಸ್ತಿ-2018" -ಎಮ್.ಸಿ.ಸಿ. ಕತಾರ್.
06. "ಭಾರತ ರತ್ನ, ಸರ್ ಎಂ. ವಿಶ್ವೇಶ್ವರಯ್ಯ ನವರ ಜನ್ಮದಿನ"ದ
ನಿಮಿತ್ತ ಕರ್ನಾಟಕ ಸಂಘ ಕತಾರ್ ವತಿಯಿಂದ ದೋಹ-ಕತಾರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿಯಂತರ ದಿವಸ ಸಮಾರಂಭದಲ್ಲಿ "ಅಭಿಯಂತರ ಶ್ರೀ" ಪ್ರಶಸ್ತಿ.
07.2018ರಲ್ಲಿ ಕೈರಳಿ ಟಿ.ವಿ.ಯ“ಸೋಶಿಯಲ್ ರೆಸ್ಪೋಶಿಬಿಲಿಟಿ ಎಂಡ್ ಬ್ಯುಸ್ ನೆಸ್ ಎಕ್ಸಾಲೆನ್ಸ್" ಅವಾರ್ಡ್
08.ಗ್ಲೋಬಲ್ ಮೀಡಿಯ ಈವೆಂಟ್ಸ್ ನ "ಗೋಲ್ಡನ್ ಅಚ್ಯುಮೆಂಟ್ ಆವಾರ್ಡ್” -2018
09. “SIBA-South Indian Business Excellence Awards-2019
10. ಕರ್ನಾಟಕ ಜಾನಪದ ಪರಿಷತ್ ಕೇರಳ ಘಟಕ ಇದರ "ಜಾನಪದ ಮೇಳ-2020" ಸಮಾರಂಭದಲ್ಲಿ "ಗಡಿನಾಡ ಸಿರಿ ಪ್ರಶಸ್ತಿ".
11.ಪತಂಜಲಿ ಯೋಗ ಸಮಿತಿ ಭಾರತ್ ಸ್ವಾಭಿಮಾನ ಟ್ರಸ್ಟ್,
ಮಂಗಳೂರು ಇದರ “ಕಡಲಾಚೆಯ ಕಣ್ಮಣಿ"ಪುರಸ್ಕಾರ.
12.ಕರ್ನಾಟಕ ರಕ್ಷಣಾ ವೇದಿಕೆಯ"ಕದಂಬ ಪ್ರಶಸ್ತಿ”- 2008
13.ಸೃಷ್ಟಿ ಕಲಾಭೂಮಿ ಬೆಂಗಳೂರು ಇದರ "ತುಳುನಾಡ ಬೊಳ್ಳಿ" ಬಿರುದು.
14.ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಇದರ " ತೌಳವ ಸಿರಿ ಪ್ರಶಸ್ತಿ”.
15.ಕಲಾ ಸಂಪದ ಮುಂಬಯಿ ಇದರ "ರಂಗಮೋಹನ-25"
ಕಾರ್ಯಕ್ರಮದಲ್ಲಿ "ರಜತರಂಗ" ಪ್ರಶಸ್ತಿ.
16.ಪ್ರಖ್ಯಾತ ಅಂತರ್ಜಾಲ ಮಾಧ್ಯಮ “ಡೈಜಿವರ್ಲ್ಡ್” ನಲ್ಲಿ “ಕತಾರ್‌ನಲ್ಲಿ ಮಂಗಳೂರಿನ ಹೆಮ್ಮೆ” ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ಲೇಖನ. ಈ ಲೇಖನದ ಬಗ್ಗೆ ನೂರಾರು ಪ್ರಶಂಸನೀಯ ಓದುಗರ ಅನಿಸಿಕೆಗಳ ಸರಮಾಲೆ ಪ್ರಕಟವಾದುದು ಶ್ರೀ ರವಿ ಶೆಟ್ಟಿಯವರ ಜನಪ್ರಿಯತೆಯನ್ನು ಸಾಬೀತುಪಡಿಸುತ್ತದೆ.
17.ವಿಶ್ವ ಕನ್ನಡ ಸಮ್ಮೇಳನ 2002-ಅಬುಧಾಬಿಯ ಅನಿವಾಸಿ ಭಾರತೀಯರ ಗೋಷ್ಟಿಯಲ್ಲಿ ಪಾಲು.
18.ವಿಶ್ವ ಕನ್ನಡ ಸಮ್ಮೇಳನ 2009-ಕತಾರಿನ ಕಾರ್ಯಕ್ರಮದಲ್ಲಿ ಸಕ್ರಿಯ ಸೇವೆ ಹಾಗೂ ಸನ್ಮಾನ.
19. 2004ರಲ್ಲಿ Qatar Ministry of Environment ಹಾಗೂ Embassy of India ಆಯೋಜಿಸಿದ್ದ “ಪರಿಸರ ಪ್ರಜ್ಞೆ” (Environment Awareness Campaign)ಯಲ್ಲಿ
ಸುಮಾರು 100 ಸಂಘ ಸಂಸ್ಥೆಗಳು ಭಾಗವಹಿಸಿದ್ದು, ತುಳುಕೂಟ ಕತಾರ್ ಪ್ರಥಮ ಬಹುಮಾನ "Ambassodr Tropy” ಪಡೆಯುವಲ್ಲಿ ಅದರ ಅಧ್ಯಕ್ಷರಾಗಿ ಮಹತ್ವದ ಪಾತ್ರ ಹಾಗೂ ಪ್ರಶಸ್ತಿ ಸ್ವೀಕರಿಸಿದ್ದಾರೆ.
20.ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಪರಿಗಣಿಸಿ, ತುಳುಕೂಟ ಕತಾರ್ ಅನೇಕ ಸಂದರ್ಭಗಳಲ್ಲಿ, ಪದ್ಮಶ್ರೀ ಡಾ. ಬಿ.ಆರ್.ಶೆಟ್ಟಿ, ಜಸ್ಟೀಸ್ ಸಂತೋಷ ಹೆಗ್ಡೆ, ಪ್ರೊ.ಬಿ.ಎಂ.ಹೆಗ್ಡೆ, ಪ್ರೊಫೆಸರ್ ವಿವೇಕ ರೈ, ಡಾ.ಶಾಂತಾರಾಮ ಶೆಟ್ಟಿ, ಶ್ರೀಮತಿ ಜಯಮಾಲ (ಕನ್ನಡ ಚಲನಚಿತ್ರ ನಟಿ), ಡಾ.ಮೋಹನ್ ಆಳ್ವ, ಡಾ.ಶಶಿಕಲಾ ಶೆಟ್ಟಿ ಗುರುಪುರ ಮುಂತಾದ ಅನೇಕ ಗಣ್ಯರ ಸಮ್ಮುಖದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿದೆ.
21. ಕೊಲ್ಲಿ ರಾಷ್ಟ್ರದ “ಹೆಮ್ಮೆಯಿಂದ ಕರ್ನಾಟಕ” ಪತ್ರಿಕೆಯಲ್ಲಿ ಶ್ರೀ ರವಿ ಶೆಟ್ಟಿಯವರ ಬಗ್ಗೆ “ಕರ್ನಾಟಕದ ಅಪರೂಪ ಮಣಿರತ್ನ” ಎಂಬ ಶೀರ್ಷಿಕೆ ಅಡಿಯಲ್ಲಿ ವಿಶೇಷ ಲೇಖನ ಪ್ರಕಟಗೊಂಡಿದೆ.
22. “ಬಂಟರ ಸಂಘ ಮದ್ರಾಸ್” ಇದರ ವಾರ್ಷಿಕೋತ್ಸವ ದಲ್ಲಿ(2011) ಮುಖ್ಯ ಅತಿಥಿಯಾಗಿ ಸನ್ಮಾನ.
23.“ತುಳುಕೂಟ ಪೂನಾ” ದ 19ನೇ ವಾರ್ಷಿಕೋತ್ಸವ ದಲ್ಲಿ (2005) ಮುಖ್ಯ ಅತಿಥಿಯಾಗಿ ಸನ್ಮಾನ.
24.“ಬಂಟರ ಸಂಘ ಕುವೈಟ್” ಇದರ ವಾರ್ಷಿಕೋತ್ಸವ “ಬಂಟಾಯನ-2006”ಸಮಾರಂಭದಲ್ಲಿ ಗೌರವ ಅತಿಥಿ ಹಾಗೂ ಜಸ್ಟೀಸ್ ಶ್ರೀ ಸಂತೋಷ್ ಹೆಗ್ಡೆ ಯವರ ಉಪಸ್ಥಿತಿಯಲ್ಲಿ ಸನ್ಮಾನ.
25.ಧ್ವನಿ ಪ್ರತಿಷ್ಠಾನ ಶಾರ್ಜಾ, ಇದರ ಎರಡನೇಯ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನದ"ಅನಿವಾಸಿ ಅಂತರಾತ್ಮ" ಗೋಷ್ಠಿಯಲ್ಲಿ ಪಾಲು ಹಾಗೂ ಸನ್ಮಾನ.
26."ಬಂಟರ ಸಂಘ ಬೆಂಗಳೂರು” ಇದರ ವಾರ್ಷಿಕೋತ್ಸವ ದಲ್ಲಿ (2007) ಗೌರವ ಅತಿಥಿಯಾಗಿ ಸನ್ಮಾನ.
27. “ಬಂಟರ ಸಂಘ ಹೈದರಾಬಾದ್” ಇದರ ವಾರ್ಷಿಕೋತ್ಸವದಲ್ಲಿ (2019) ಮುಖ್ಯ ಅತಿಥಿಯಾಗಿ ಸನ್ಮಾನ.
28. 2009ರ “ಬಂಟ್ಸ್ ಕತಾರ್” ನ ವಾರ್ಷಿಕೋತ್ಸವದಲ್ಲಿ, ಡಾ. ಶಶಿಕಲಾ ಶೆಟ್ಟಿಗುರುಪುರ, ನಿರ್ದೇಶಕರು, ಸಿಂಬಯಾಸಿಸ್ ಲಾ ಕಾಲೇಜ್ ಪುಣೆ, ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಸನ್ಮಾನ.
29.ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಗೋಲ್ಡನ್ ಜುಬಿಲಿ ಸಮಾರಂಭದ ಉದ್ಘಾಟಿಸಿ,ಮುಖ್ಯ ಅತಿಥಿಯಾಗಿ ಭಾಗಿ.
30. ಎಸ್ ಡಿ ಎಂ ಕಾಲೇಜ್ ಧಾರವಾಡದ 40ನೇ ಸ್ಥಾಪಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಗೌರವ.
31. ತುಳುಕೂಟ ಕುವೈತ್ ನ 20ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಗೌರವ.
32. ನವೋದಯ ಜೂನಿಯರ್ ಕಾಲೇಜಿನ ಗೋಲ್ಡನ್ ಕಾರ್ನಿವಲ್ (ನವೋದಯ ಕನ್ನಡಸೇವಾ ಸಂಘ ಮುಲುಂಡ್) ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಗೌರವಗಳು ಲಭಿಸಿದೆ.
ಸಾಂಸ್ಕೃತಿಕ ಹಾಗೂ ಕ್ರೀಡಾ ರಾಯಭಾರಿ:
ಸಾಮಾಜಿಕ ಮನೋಭಾವವನ್ನು ಬೆಳೆಸಿಕೊಂಡಿರುವ ರವಿ ಶೆಟ್ಟಿ ಅವರ ಬಹಳ ಮುಖ್ಯವಾದ ಚಟುವಟಿಕೆಯೆಂದರೆ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದ ಪ್ರೋತ್ಸಾಹ ಗಮನಾರ್ಹವಾಗಿದೆ. ಕರ್ನಾಟಕದ ಪ್ರಸಿದ್ಧ ಜಾನಪದ ಕಲೆ “ಯಕ್ಷಗಾನ”ವನ್ನು ಕತಾರ್ ನಲ್ಲಿ ಪ್ರಪ್ರಥಮ ಬಾರಿಗೆ ತಮ್ಮ ಮಾಲೀಕತ್ವದ ಎ.ಟಿ.ಎಸ್. ಸಂಸ್ಥೆಯ ಸಹಯೋಗದೊಂದಿಗೆ ಕತಾರ್ ತುಳುಕೂಟದ 10ನೇ ವಾರ್ಷಿಕ ಸಮ್ಮೇಳನದಲ್ಲಿ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.2009ರಲ್ಲಿ ಕತಾರ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಜಾನಪದ ಕಲೆ “ಯಕ್ಷಗಾನ”ವನ್ನುಏರ್ಪಡಿಸಿ ಕರ್ನಾಟಕದ ಪ್ರಸಿದ್ಧ ಯಕ್ಷಗಾನ ಕಲಾವಿದರನ್ನು ಆಮಂತ್ರಿಸಿ, ಕತಾರ್ ದೇಶದಲ್ಲಿಕರ್ನಾಟಕ ಜಾನಪದ ಕಲೆ “ಯಕ್ಷಗಾನ”ವನ್ನು ಜನಪ್ರಿಯಗೊಳಿಸಿ ಪ್ರೋತ್ಸಾಹಿಸಿದ ಇವರು ಕತಾರ್‌ನಲ್ಲಿ ತಮ್ಮ ಎ.ಟಿ.ಎಸ್. ಸಂಸ್ಥೆ, ತುಳುಕೂಟ ಹಾಗೂ ಬಂಟ್ಸ್ ಸಂಘದ ಮುಖಾಂತರ ಹಲವಾರು ಕಲಾವಿದರಿಗೆ ಹಾಗೂ ಕರ್ನಾಟಕದ ಸಾಂಸ್ಕೃತಿಕ ತಂಡಗಳಿಗೆರಾಜ್ಯದ ಸಾಂಸ್ಕೃತಿಕ ಕಂಪನ್ನು ಹರಡಲು ಮುಕ್ತ ಅವಕಾಶ ನೀಡುತ್ತಿದ್ದಾರೆ. ಕತಾರ್ ದೇಶದಲ್ಲಿಹೊರನಾಡ ಕನ್ನಡಿಗರಿಗಾಗಿ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಕಬಡ್ಡಿಪಂದ್ಯಾವಳಿಯನ್ನು ಏರ್ಪಡಿಸುತ್ತಿರುವುದಲ್ಲದೆ ಇದು ಕತಾರ್ ದೇಶದ ಅತ್ಯಂತ ಜನಪ್ರಿಯ ವಾರ್ಷಿಕ ಕ್ರೀಡಾಕೂಟವಾಗಿ ಜನಪ್ರಿಯತೆ ಗಳಿಸುವಲ್ಲಿ ಯಶಸ್ವಿಯಾಗಿರುವುದು ಇನ್ನೊಂದು ಹೆಮ್ಮೆಯ ವಿಚಾರವಾಗಿದೆ. ಕತಾರಿನಲ್ಲಿ ತುಳುಕೂಟ ಹಾಗೂ ತಮ್ಮ ಎ.ಟಿ.ಎಸ್.ಸಂಸ್ಥೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೇರಣೆಯನ್ನು ನೀಡುತ್ತಿದ್ದಾರೆ.ಇವೆಲ್ಲವೂ ಶ್ರೀ ರವಿ ಶೆಟ್ಟಿಯವರ ಕ್ರೀಡಾ ಹಾಗೂ ಸಾಂಸ್ಕೃತಿಕ ಒಲವನ್ನು ಸಾರಿ ಹೇಳುತ್ತದೆ.ಕರ್ನಾಟಕದ ಸಾಂಸ್ಕೃತಿಕ ರಸದೌತಣವನ್ನು ಹೊರನಾಡ ಕನ್ನಡಿಗರಿಗೆ ಉಣಬಡಿಸುವಲ್ಲಿ ಶ್ರೀ ರವಿ ಶೆಟ್ಟಿಯವರ ಸೇವೆ ಶ್ಲಾಘನೀಯ ಎಂಬುದು ಜನಜನಿತವಾದ ಮಾತಾಗಿದೆ.
ಯಶಸ್ವಿ ಪರಿಸರ ಪ್ರೇಮಿ: ಒಬ್ಬ ಪರಿಸರ ಪ್ರೇಮಿಯಾಗಿ 2004 ರಲ್ಲಿ Qatar Ministry of Environment ಹಾಗೂ Embassy of India ಆಯೋಜಿಸಿದ "ಪರಿಸರ ಪ್ರಜ್ಞೆ” (Environment Awareness Campaign)ಲ್ಲಿ ಸುಮಾರು ನೂರು ಸಂಘ- ಸಂಸ್ಥೆಗಳು ಭಾಗವಹಿಸಿದ್ದು, ತುಳುಕೂಟ ಕತಾರ್ ಹಾಗೂ ಕರ್ನಾಟಕ ಸಂಘ ಕತಾರ್ ಜಂಟಿಯಾಗಿ ಪ್ರಥಮ ಬಹುಮಾನ ಪಡೆಯುವಲ್ಲಿ ಇವರು ಮಹತ್ತರ ಪಾತ್ರ ವಹಿಸಿರುವರು.
ಚಿಕ್ಕಂದಿನಿಂದಲೂ ಪರಿಸರದ ಕಡೆಗೆ ವಿಶೇಷ ಕಾಳಜಿ ವಹಿಸುತ್ತಿದ್ದ ಇವರು ಇತ್ತೀಚೆಗೆ ಪುತ್ತೂರಿನ ಸುಭ್ರಾಯ ದೇವಸ್ಥಾನದ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ 500 ಕ್ಕಿಂತಲೂ ಮೇಲೆ ಸಸಿಗಳನ್ನು ನೆಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪರಿಸರ ಕಾಳಜಿ ಒಂದು ಕರ್ತವ್ಯ ಪ್ರಜ್ಞೆ ಹಾಗೂ ಸಾಮಾಜಿಕ ಜವಾಬ್ದಾರಿಯೆಂದು ಮನಗಂಡು ಈ ಕೆಲಸವನ್ನು ನಿರಂತರವಾಗಿ ಕತಾರಿನಲ್ಲಿ ಹಾಗೂ ತಮ್ಮ ಊರಿನಲ್ಲಿ ಹಮ್ಮಿಕೊಂಡಿರುವ ಯಶಸ್ವಿ ಪರಿಸರ ಪ್ರೇಮಿಯಾಗಿದ್ದಾರೆ.
ಸಮಾಜ ಸೇವೆ: ಒಬ್ಬ ಲೋಕೋಪಕಾರಿಯಾಗಿ ರವಿ ಶೆಟ್ಟಿ ಅವರು ರಾಜ್ಯದ ಹಲವಾರು ಕಷ್ಟದಲ್ಲಿರುವ ನಾಗರೀಕರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಆರ್ಥಿಕ ಸಹಾಯವನ್ನು ನೀಡುತ್ತಾ ಅವರ ಪ್ರೀತಿಗೆ ಪಾತ್ರರಾಗಿರುತ್ತಾರೆ.ಹಲವಾರು ದೇವಸ್ಠಾನಗಳ, ಚರ್ಚುಗಳ ನಿರ್ಮಾಣಕ್ಕೆ, ಸಂಘ ಸಂಸ್ಥೆಗಳ ಸಮಾಜ ಸೇವಾ ಕಾರ್ಯಗಳಿಗೆ, ಹಲವಾರು ಬಡ ಕುಟುಂಬಗಳ ವೈದ್ಯಕೀಯ ಚಿಕಿತ್ಸೆಗಳಿಗೆ, ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಗಳಿಗೆ ಸದಾ ಆರ್ಥಿಕ ನೆರವನ್ನು ನೀಡುತ್ತಿರುವುದು ಅವರ ಹೃದಯ ಸ್ಪಂದನೆ ಹಾಗೂ ಸೌಜನ್ಯತೆಗೆ ನಿದರ್ಶನವಾಗಿರುತ್ತದೆ.೨೦೦೮-೨೦೧೪ರ ಅವಧಿಯಲ್ಲಿ ಕತಾರ್‌ನ ತುಳುಕೂಟದ ಅಧ್ಯಕ್ಷರಾಗಿದ್ದಾಗ “ವಿಶೇಷ ಅಗತ್ಯಗಳ ಆಯೋಗ”ವನ್ನು ರಚಿಸಿ ಅತ್ಯಂತ ತೊಂದರೆ ಮತ್ತು ಕಷ್ಟ ಅನುಭವಿಸುತ್ತಿದ್ದ ಕರ್ನಾಟಕ ಸಮುದಾಯಕ್ಕೆ ವಿಶೇಷ ಆರ್ಥಿಕ ನೆರವು ನೀಡಿರುತ್ತಾರೆ.
ಶ್ರೀಯುತರು ಹಲವಾರು ಸಮುದಾಯ ಸಂಘಗಳಿಗೆ ನಿರಂತರವಾಗಿ ಆರ್ಥಿಕ ಸಹಾಯ ನೀಡಿರುವುದಲ್ಲದೆ ಹಲವಾರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದ್ದಾರೆ.ಕರ್ನಾಟಕ ಸಂಘ ಕತಾರ್, ತುಳುಕೂಟ ಕತಾರ್, ಕತಾರ್ ಬಂಟ್ಸ್ ಸಂಘ, ಐಸಿಬಿಎಫ್, ಐಸಿಸಿ, ಕರ್ನಾಟಕ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಷನ್, ಮಂಗಳೂರು ಕ್ರಿಕೆಟ್ ಕ್ಲಬ್, ಮಂಗಳೂರು ಕಲ್ಚರಲ್ ಅಸೋಸಿಯೇಷನ್ ಇವುಗಳಲ್ಲಿ ಪ್ರಮುಖವಾದುವುಗಳಾಗಿದೆ. ಇದಲ್ಲದೆ ಇನ್ನೂ ಹಲವಾರು ಕರ್ನಾಟಕದ ಸ್ಥಳೀಯ ಸಂಘ ಸಂಸ್ಥೆಗಳಿಗೆ ನಿರಂತರವಾಗಿ ಸಹಾಯ ಸಹಕಾರ ನೀಡುತ್ತಿದ್ದಾರೆ.
ಡಾ.ರವಿ ಶೆಟ್ಟಿಯವರು ಶ್ರೀಮತಿ ಸುಜ್ಯೋತಿ ಶೆಟ್ಟಿಯವರನ್ನು ವಿವಾಹವಾಗಿ ಒಬ್ಬ ಗಂಡು ಮಗ,ರೋಶನ್ ಶೆಟ್ಟಿ ಮತ್ತು ಒಂದು ಹೆಣ್ಣು ಮಗಳು ಕುಮಾರಿ ರಚನಾ ಶೆಟ್ಟಿಯವರೊಂದಿಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ಇವರ ಯಶಸ್ಸಿನ ಹಿಂದೆ ಅವರ ಧರ್ಮಪತ್ನಿ ಜ್ಯೋತಿ ಶೆಟ್ಟಿಯವರ ಸಹಕಾರ ಗಮನಾರ್ಹ. ಸಾಮಾಜಿಕ,ಸಾಂಸ್ಕೃತಿಕ ಹಾಗೂ ಕ್ರೀಡಾತ್ಮಕ ಕೊಡುಗೆಗಳು ತಂದೆ ತಾಯಿ ಹಾಗೂ ಗುರು ಹಿರಿಯರ ಆಶೀರ್ವಾದದಿಂದ ಸಾಧ್ಯವಾಗಿದೆ ಎಂದು ಸದಾ ಸ್ಮರಿಸುತ್ತಾರೆ.
ರವಿ ಶೆಟ್ಟಿ ಅವರ ಜನೋಪಯೋಗ ಸೇವಾ ತತ್ಪರತೆ ಹಾಗೂ ಸರಳ ಸಜ್ಜನಿಕೆ ಸರ್ವರಿಗೂ ಮಾದರಿಯಾಗಿದ್ದು ಅವರಿಗೆ ವಿಶೇಷ ಚಾನೆಲ್ ಈ ಬರಹದ ಮೂಲಕ ವಿಶೇಷ ಅಭಿನಂದನೆ ಸಲ್ಲಿಸುತ್ತದೆ.















0 Comments