ಶಾರ್ಜಾ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ
ಶಾರ್ಜಾ ಕರ್ನಾಟಕ ಸಂಘ ಹದಿನೆಂಟು ವರ್ಷಗಳಿಂದ ಕನ್ನಡ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಶ್ರೀ ಆನಂದ್ ಬೈಲೂರ್ ಮತ್ತು ಕಾರ್ಯಕಾರಿ ಸಮಿತಿಯ ಬೀಳ್ಕೊಡುಗೆ ಹಾಗೂ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಝೂಮ್ ನ ಮೂಲಕ ೨೦೨೧ ಫೆಬ್ರವರಿ ೧೨ ನೇ ತಾರೀಕು ಶುಕ್ರವಾರ ರಾತ್ರಿ ಏಳು ಗಂಟೆಗೆ ನಡೆಯಿತು,
ನೂತನ ಅಧ್ಯಕ್ಷರಾಗಿ ಶ್ರೀ ಎಂ. ಇ. ಮೂಳೂರ್ ರವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿ ಅಧಿಕಾರವನ್ನು ಸ್ವೀಕರಿಸಿದರು, ಉಪಾಧ್ಯಕ್ಷರಾಗಿ ಶ್ರೀ ನೋವೆಲ್ ಡಿ ಅಲ್ಮೆಡಾ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವಿಶ್ವನಾಥ್ ಶೆಟ್ಟಿ, ಸಹ ಕಾರ್ಯದರ್ಶಿಯಾಗಿ ಶ್ರೀ ಅಮರ್ ಉಮೇಶ್ ನಂತೂರ್ ಹಾಗೂ ಖಜಾಂಚಿಯಾಗಿ ಶ್ರೀ ಮಹಮ್ಮದ್ ಅಬ್ರಾರ್ ಉಲ್ಲಾ ಶರೀಫ್ ರವರು ಜವಬ್ಧಾರಿಯನ್ನು ವಹಿಸಿಕೊಂಡರು.
ಈ ಸಂದರ್ಭದಲ್ಲಿಕರ್ನಾಟಕ ಸಂಘ ಶಾರ್ಜಾದ ಪೋಷಕರಾದ ಶ್ರೀ ಮಾರ್ಕ್ ಡೆನಿಸ್ ರವರು ತಮ್ಮ ಸಂದೇಶದಲ್ಲಿ ಶುಭವನ್ನು ಹಾರೈಸಿದರು. ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಅನಂದ ಬೈಲೂರ್ ತಮ್ಮ ಸಮಿತಿಯ ಪರವಾಗಿ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿ ತಮ್ಮ ಅವಧಿಯ ಲೆಕ್ಕಚಾರವನ್ನು ಸಭೆಯಲ್ಲಿ ಖಜಾಂಚಿ ಶ್ರೀ ಸುಗಂಧರಾಜ್ ಬೇಕಲ್ ರವರ ಮೂಲಕ ಮಂಡಿಸಿದರು.
ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸಲಹೆಗಾರರಾದ ಶ್ರೀ ಸತೀಶ್ ಪೂಜಾರಿಯವರು ನಡೆಸಿಕೊಟ್ಟರು. ಸಲಹೆಗಾರರಾದ ಶ್ರೀ ಪ್ರವೀಣ್ ಕುಮಾರ ಶೆಟ್ಟಿ, ಬಿ. ಕೆ. ಗಣೇಶ್ ರೈ, ಶ್ರೀ ಹರೀಶ್ ಶೇರಿಗಾರ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಅಬ್ದುಲ್ ರಝಾಕ್, ಕಿರಣ್ ಶೆಟ್ಟಿ ಇವರುಗಳು ನೂತನ ಕಾರ್ಯಕಾರಿ ಸಮಿತಿಗೆ ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡಿದರು.ಸುಗಂಧರಾಜ್ ಬೇಕಲ್ ನಿರೂಪಿಸಿದರು.




0 Comments