ಕಾಸರಗೋಡು : ಎಡನೀರು ಶ್ರೀಮಠದ ವಿಷ್ಣು ಮಂಗಲ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಐದು ದಿನಗಳ ಪರ್ಯಂತ ನಡೆದು ಸಂಪನ್ನಗೊಂಡಿತು. ಎಡನೀರು ಮಠಾಧೀಪತಿ ಶ್ರೀಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಧ್ವಜಾರೋಹಣಗೈದು ಸರಕಾರದ ಕೋವಿಡ್ ಮಾನದಂಡ ಪಾಲಿಸಿಕೊಂಡು ಸರಳ ಸಂಪ್ರದಾಯಿಕ ಕಾರ್ಯಕ್ರಮ ದೊಂದಿಗೆ ಈ ಬಾರಿ ಜಾತ್ರೆ ಏರ್ಪಡಿಸಲಾಗಿತ್ತು. ಕ್ಷೇತ್ರದಲ್ಲಿ ನೀರಮುನಿ ಪ್ರತಿಷ್ಠಾಪಿತ ಶಿವ,ವಿಷ್ಣು ದೇವರುಗಳ ಆರಾಧನೆ ಪ್ರಮುಖವಾಗಿದ್ದು ಜಾತ್ರಾ ಮಹೋತ್ಸವ
ಸಂದರ್ಭದಲ್ಲಿ ಎರಡು ದೇವರುಗಳನ್ನು ಹೊತ್ತ "ತಿಡಂಬು ನೃತ್ತ" ಇಲ್ಲಿನ ವಿಶೇಷತೆಯಾಗಿದೆ.ಸಂಪ್ರದಾಯಿಕ ಬೆಡಿ ಉತ್ಸವ ಹಾಗೂ ಮಠದ ಸಮೀಪದ
ಮಧುವಾಹಿನಿ ಹೊಳೆಯಲ್ಲಿ ಶ್ರೀದೇವರ ಅವಭೃತ ಸ್ನಾನ ನಡೆಯಿತು.









0 Comments