ಉಪ್ಪಳ: ಯುವ ಕೇಸರಿ ಶಿವತೀರ್ಥಪದವು ಮುಳಿಂಜ ಇದರ 11ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮುಳಿಂಜ ಕ್ಷೇತ್ರ ವಾರ್ಷಿಕ ಜಾತ್ರಾ ಮಹೋತ್ಸವದ ಕೊನೆಯ ದಿನದಂದು ನಡೆಯಿತು.ಇದರಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿಯ ಪ್ರಧಾನ ನಿರೂಪಕ ಜಯಪ್ರಕಾಶ್ ಶೆಟ್ಟಿ ಉಪ್ಪಳ ಅವರಿಗೆ "ಮಾಧ್ಯಮರತ್ನ ಪ್ರಶಸ್ತಿ" ನೀಡಿ ಸನ್ಮಾನಿಸಲಾಯಿತು. ಮುಳಿಂಜ ಶ್ರೀಮಹಾಲಿಂಗೇಶ್ವರ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷರಾದ ಹರಿನಾಥ ಭಂಡಾರಿ ಮುಳಿಂಜಗುತ್ತು ಅಧ್ಯಕ್ಷತೆವಹಿಸಿದ್ದರು.ಶೈಕ್ಷಣಿಕ ಸಾಧನೆಗೈದ ಕೊಂಡೆವೂರಿನ ವೈಷ್ಣವಿ ಕೆ. ಶೆಟ್ಟಿ ಅವರಿಗೆ ವಿದ್ಯಾರತ್ನ ಪ್ರಶಸ್ತಿ ಪ್ರದಾನಿಸಲಾಯಿತು.ಈ ಸಂದರ್ಭದಲ್ಲಿ ಕಲಾ ಸಂಗಮ ಕುಡ್ಲ ಇದರ ನಿರ್ದೇಶಕರಾದ ಚಂದ್ರಕುಮಾರ್ ಕೊಡಿಯಲ್ ಬೈಲ್, ಮುಳಿಂಜ ಶ್ರೀಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಜಯರಾಮ ಶೆಟ್ಟಿ ಕಡಂಬಾರು, ಉದ್ಯಮಿ ಬಾಲಕೃಷ್ಣ ಶೆಟ್ಟಿ ಕುಂಟುಪುಣಿ,ಯುವ ಕೇಸರಿಯ ಉಪಾಧ್ಯಕ್ಷ ಅಮಿತ್ ರಾಜ್ ಚುಳ್ಳಿ ಸಭೆಯಲ್ಲಿ ಉಪಸ್ಥಿತರಿದ್ದರು.ಭಾಸ್ಕರ ಕೊಂಡೆವೂರು ಹಾಗೂ ಶಾನ್ವಿ ಭರತ್ ಸನ್ಮಾನ ಪತ್ರ ವಾಚನಗೈದರು. ದಿನೇಶ್ ಮುಳಿಂಜ ಸ್ವಾಗತಿಸಿ ಸತೀಶ್ ಶಿವತೀರ್ಥಪದವು ವಂದಿಸಿದರು. ಜಗದೀಶ್ ಪ್ರತಾಪನಗರ ಕಾರ್ಯಕ್ರಮ ನಿರೂಪಿಸಿದರು.
ಅನಿವಾಸಿ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದ ಯಶಸ್ವಿ ಕಾರ್ಯಕ್ರಮ:
ಯುವಕೇಸರಿ ಶಿವತೀರ್ಥಪದವು ಇದರ ಊರ ಸದಸ್ಯರ ನೇತೃತ್ವದಲ್ಲಿ 11ನೇ ವಾರ್ಷಿಕೋತ್ಸವ ಈ ಬಾರಿ ಹಮ್ಮಿಕೊಂಡಿದ್ದು ಇದರ ಯಶಸ್ವಿಗೆ ಕೊಲ್ಲಿ ರಾಷ್ಟ್ರದಲ್ಲಿರುವ ಅನಿವಾಸಿ ಸದಸ್ಯರು ಕಾರಣೀಕರ್ತರಾಗಿರುವುದು ವಿಶೇಷವಾಗಿದೆ.
ಯುವ ಕೇಸರಿಯ ಅಧ್ಯಕ್ಷರಾದ ಸದಾನಂದ ಶೆಟ್ಟಿ ಅವರ ಅನುಪಸ್ಥಿತಿಯಿದ್ದರೂ ಕಾರ್ಯಕ್ರಮದ ಯಶಸ್ವಿಗೆ ಅವರು ಹಾಗೂ ಇದರ ಸಕ್ರಿಯ ಕಾರ್ಯಕರ್ತ ಪೋಷಕರಾದ ವಿದೇಶಿ ಉದ್ಯೋಗಿ ಯಜ್ಞೇಶ್ ಶಿವತೀರ್ಥಪದವು ಸೂಕ್ತ ಸಲಹೆ ಸೂಚನೆ ಮೂಲಕ ವಾರ್ಷಿಕೋತ್ಸವದ ಯಶಸ್ವಿಗೆ ಕಾರಣೀಭೂತರಾಗಿದ್ದರು.
ಚಿತ್ರಗಳು : ದೀಪಕ್ ರಾಜ್ ಉಪ್ಪಳ










0 Comments