ಉಪ್ಪಳ : ಇತಿಹಾಸ ಪ್ರಸಿದ್ಧ ಮುಳಿಂಜ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಬಗ್ಗೆ ಕತಾರ್ ನ ಉದ್ಯೋಗಿಗಳಾದ ಸದಾನಂದ ಶೆಟ್ಟಿ ಕುಂಟುಪುಣಿ ಹಾಗೂ ಯಜ್ಙೇಶ್ ಶಿವತೀರ್ಥಪದವು ನಿರ್ಮಿಸಿದ "ಮುಳಿಂಜದ ಬೊಲ್ಪು" ಎಂಬ ತುಳು ಭಕ್ತಿಗೀತೆ ಮಾ.18ರಂದು ವಿಶೇಷ ಚಾನೆಲ್ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳ್ಳಲಿದೆ.
ಅಂದು ರಾತ್ರೆ 8.30 ಗಂಟೆಗೆ ಮುಳಿಂಜ ಕ್ಷೇತ್ರ ಜಾತ್ರಾ ಮಹೋತ್ಸವದಂಗವಾಗಿ ಯುವಕೇಸರಿ ಫ್ರೆಂಡ್ಸ್ ಕ್ಲಬ್ ವತಿಯಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣವಾಹಿನಿಯ ಪ್ರಧಾನ ನಿರೂಪಕರದ ಜಯಪ್ರಕಾಶ್ ಶೆಟ್ಟಿ ಉಪ್ಪಳ ಭಕ್ತಿಗೀತೆಯನ್ನು ಬಿಡುಗಡೆಗೊಳಿಸುವರು. ಸೋಮನಾಥ್ ಶೆಟ್ಟಿ ಮಂಗಲ್ಪಾಡಿ ಸಾಹಿತ್ಯ ರಚಿಸಿ ರಾಗ ಸಂಯೋಜನೆ ಮಾಡಿದ ಭಕ್ತಿಗೀತೆಯನ್ನು ಶಾನ್ವಿ ಭರತ್ ಉಪ್ಪಳ ಹಾಡಿದ್ದಾರೆ. ಲವ ಕುಮಾರ್ ಐಲ ಸಂಗೀತ ನೀಡಿದ್ದಾರೆ.ರಾಜುಬಿ.ಕೆ.ಛಾಯಾಗ್ರಹಣ ನಡಸಿದ್ದು,ನವೀನ್ ಸಂಕಲನಗೈದಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂದು ರಾತ್ರಿ 9.30ಕ್ಕೆ ಕಲಾ ಸಂಗಮ ಕಲಾವಿದರು ಅಭಿನಯದ ವಿಜಯಕುಮಾರ್ ಕೊಡಿಯಲ್ ಬೈಲ್ ನಿರ್ದೇಶನದ "ಶಿವದೂತೆ ಗುಳಿಗೆ" ಎಂಬ ತುಳು ನಾಟಕ ಪ್ರದರ್ಶನವಾಗಲಿದೆ.





0 Comments