ಎಂಟರ ಹರೆಯದಲ್ಲಿ ಸುಮಧುರ ಕಂಠ ಸಿರಿಯಿಂದ ವೈರಲ್ ಆದ ಚಿತ್ರಾಪುರದ ಸಾನ್ವಿ ಭಟ್
ಕುಳಾಯಿಯ ಅಂಕುರ್ ಸ್ಕೂಲ್ ನ ವಿದ್ಯಾರ್ಥಿನಿಯಾಗಿರುವ ಈಕೆಯ ಸುಂದರ ಗಾಯನವನ್ನು ಸ್ವತಃ ತಂದೆ ತಾಯಿ ಗಮನಿಸಿ ಪ್ರೋತ್ಸಾಹ ನೀಡಿದ್ದು ಇದೀಗ ದುಬೈಯಲ್ಲಿರುವ ಹಿತೇಶ್ ಸುರತ್ಕಲ್ ಅವರ ನಿರ್ಮಾಣದಲ್ಲಿ
ದುಬೈಯ ಸುಧಾಕರ್ ಸಸಿಹಿತ್ಲು ಸಾಹಿತ್ಯ ರಚಿಸಿ ನಿರ್ದೇಶಿಸಿದ "ಶ್ರೀಗಜಾನನ" ಎಂಬ ಹಾಡನ್ನು ಮಹಮ್ಮದ್ ಫೈಯಝ್ ಸಹಕಾರದೊಂದಿಗೆ ಮಂಗಳೂರಿನ ಸೌಂಡ್ ವೇವ್ ಸ್ಟುಡಿಯೋದಲ್ಲಿ ರೇಕಾರ್ಡಿಂಗ್ ಮಾಡಿ SSB ಕ್ರಿಯೇಶನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗಿದ್ದು ಎರಡು ವಾರದೊಳಗೆ ಎರಡು ಸಾವಿರಕ್ಕಿಂತ ಅಧಿಕ ಜನ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.
ಮೇಲಿನ ಲಿಂಕ್ ಒತ್ತಿ ಸಾನ್ವಿ ಭಟ್ ಹಾಡಿದ ಶ್ರೀ ಗಜಾನನ ಹಾಡು ವೀಕ್ಷಿಸಿ.
ಉಳಿದಂತೆ "ಕಡಲ ಪುಡೆತ" "ಅಯ್ಯಪ್ಪ" "ಮೈನಿಲಿಕೆ" ಮೊದಲಾದ ಎಂಟು ಹಾಡುಗಳನ್ನು ಸಾನ್ವಿ ಭಟ್ ಹಾಡಿದ್ದು ಯೂಟ್ಯೂಬ್ ಮೂಲಕ ಬೇಡಿಕೆ ಗಳಿಸಿಕೊಂಡಿದ್ದಾಳೆ.
ಇದೀಗ "ಗುಳಿಗಜ್ಜೆ" ಎಂಬ ಹೊಸ ತುಳು ಹಾಡೊಂದು ರೇಕಾರ್ಡಿಂಗ್ ಮಾಡಲಾಗಿದ್ದು ಬಿಡುಗಡೆಗೆ ಸಿದ್ಧವಾಗಿದೆ.
ಕೇವಲ ಗಾಯನ ಕಲೆ ಮಾತ್ರವಲ್ಲದೆ ಮಿಮಿಕ್ರಿ ಅನುಕರಣೆ ಕಲೆಯನ್ನು ಕರಗತ ಮಾಡಿಕೊಂಡಿರುವ ಸಾನ್ವಿಭಟ್ ಚಿತ್ರಾಪುರ ತನ್ನದೆ ಆದ "ಸಾನ್ವಿ ಭಟ್" ಯೂಟ್ಯೂಬ್ ಚಾನೆಲ್ ಮಾಡಿಕೊಂಡು ವಿವಿಧ ಕೌಶಲ್ಯಗಳನ್ನು ಪ್ರದರ್ಶಿಸುತ್ತಿದ್ದಾಳೆ.
ಎಂಟರ ಹರೆಯದ ಈ ಪುಟಾಣಿ ಗಾಯಕಿ ಈಗಾಗಲೇ ಶ್ರೀದೈವಾನುಗ್ರಹದ ಕಂಠ ಸಿರಿ ಹಾಗೂ ವಿಶೇಷ ಅರಿವಿನ ಮೂಲಕ ಪ್ರಸಿದ್ಧಿಗೆ ಬಂದಿದ್ದು ಮುಂದೆ ಸಶಕ್ತ ಸಂಗೀತ ಶಿಕ್ಷಣ, ಗುರು ಹಿರಿಯರ ಪ್ರೋತ್ಸಾಹ ,ಸಂಗೀತ ಪ್ರಿಯರ ಬೆಂಬಲದೊಂದಿಗೆ ಜಗತ್ಪ್ರಸಿದ್ಧಿಯಾಗಲಿ ಎಂಬುದೇ "ವಿಶೇಷ" ಹಾರೈಕೆ.








0 Comments