ಮಂಜೇಶ್ವರ: ಮಜಿಬೈಲ್ ಸಮೀಪದ ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರದ ಭಕ್ತಿಯ ಸಾರವನ್ನು ಒಳಗೊಂಡ "ಶ್ರೀ ಪಾಡಾಂಗರೆ ಅಪ್ಪೆ" ವಿಡಿಯೋ ಅಲ್ಬಮ್ ಸಾಂಗ್ ಕ್ಷೇತ್ರದ ಕಳಿಯಾಟ ಮಹೋತ್ಸದ ಆರಂಭದ ದಿನವಾದ ಇಂದು ಬಿಡುಗಡೆಗೊಂಡಿತು.
ಕ್ಷೇತ್ರದ ಅನುವಂಶಿಕ ದರ್ಶನ ಪಾತ್ರಿಗಳು ಹಾಗೂ ಕ್ಷೇತ್ರದ ಪೂಜಾರಿಗಳ ದಿವ್ಯ ಹಸ್ತದಿಂದ ಕ್ಷೇತ್ರದ ಸೇವಾ ಸಮಿತಿಯ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಇಲ್ಲಿ ಕೆಳಗಿನ ಈ 👇 ಲಿಂಕ್ ಒತ್ತಿ ವಿಡಿಯೋ ವೀಕ್ಷಿಸಬಹುದು.
https://youtu.be/FrqifuTNUYw
ನಾಟಕ ರಚನೆಕಾರ,ನಟ ಸೋಮನಾಥ ಶೆಟ್ಟಿ ಮಂಗಲ್ಪಾಡಿಯವರು ಸಾಹಿತ್ಯ ರಚಿಸಿ ರಾಗ ಸಂಯೋಜನೆ ಮಾಡಿದ "ಶ್ರೀ ಪಾಡಾಂಗರೆ ಅಪ್ಪೆ" ವಿಡಿಯೋ ಅಲ್ಬಮ್ ನ
ನಿರ್ಮಾಪಕರಾಗಿ ಯತೀಶ್ ಭಗವತಿ ಹಾಗೂ
ಯಜ್ಞೇಶ್ ಶಿವತಿರ್ಥಪದವು ಸಹಕಾರ ನೀಡಿದ್ದಾರೆ.
ನಿರ್ಮಾಪಕರಾಗಿ ಯತೀಶ್ ಭಗವತಿ ಹಾಗೂ
ಯಜ್ಞೇಶ್ ಶಿವತಿರ್ಥಪದವು ಸಹಕಾರ ನೀಡಿದ್ದಾರೆ.
ರಶ್ಮಿತಾ ಆಚಾರ್ಯ ಹೊಸಂಗಡಿ,ಲೇಖನ ಶ್ರೀನಿವಾಸ್ ಕುಂಜತ್ತೂರು,ಶೃತಿ ಹೂಹಾಕುವಕಲ್ಲು ಇವರು ಹಾಡನ್ನು ಹಾಡಿ ಅಲ್ಬಂ ಸಾಂಗ್ ನಲ್ಲಿ ಅಭಿನಯಿಸಿದ್ದಾರೆ. ಲವ ಕುಮಾರ್ ಐಲ ಸಂಗೀತ ನೀಡಿದ್ದಾರೆ.
ಮೇಲಿನ ಲಿಂಕ್ ಒತ್ತಿ "ಶ್ರೀ ಪಾಡಾಂಗರೆ ಅಪ್ಪೆ" ವಿಡಿಯೋ ಅಲ್ಬಮ್ ಸಾಂಗ್ ವೀಕ್ಷಿಸಿ....ಪ್ರೋತ್ಸಾಹಿಸಿ.
ಸುದ್ದಿ ಬರಹ ✒️ವಿಜಯಕುಮಾರ್ ಶೆಟ್ಟಿ ಮಜಿಬೈಲ್ (ದುಬೈ)








0 Comments