ಶ್ರೀಮಹಾಲಿಂಗೇಶ್ವರನ ಭಕ್ತಿ ಪಾರಮ್ಯತೆಯನ್ನು ಅನಾವರಣಗೊಳಿಸುವ "ಮುಳಿಂಜದ ಬೊಲ್ಪು" ತುಳುಭಕ್ತಿ ಗೀತೆ ಬಿಡುಗಡೆ


ಉಪ್ಪಳ : ಇತಿಹಾಸ ಪ್ರಸಿದ್ಧ ಮುಳಿಂಜ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಬಗ್ಗೆ ಕತಾರ್ ನ ಉದ್ಯೋಗಿಗಳಾದ ಸದಾನಂದ ಶೆಟ್ಟಿ ಕುಂಟುಪುಣಿ ಹಾಗೂ ಯಜ್ಙೇಶ್ ಶಿವತೀರ್ಥಪದವು ನಿರ್ಮಿಸಿದ "ಮುಳಿಂಜದ ಬೊಲ್ಪು" ಎಂಬ ತುಳು ಭಕ್ತಿಗೀತೆಯನ್ನು ಏಷ್ಯಾನೆಟ್ ಸುವರ್ಣವಾಹಿನಿಯ ಪ್ರಧಾನ ನಿರೂಪಕರಾದ ಜಯಪ್ರಕಾಶ್ ಶೆಟ್ಟಿ ಬಿಡುಗಡೆಗೊಳಿಸಿದರು.

 
ಮುಳಿಂಜ ಕ್ಷೇತ್ರ ಜಾತ್ರಾ ಮಹೋತ್ಸವದಂಗವಾಗಿ ಯುವಕೇಸರಿ ಫ್ರೆಂಡ್ಸ್ ಕ್ಲಬ್ ವತಿಯಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಭಕ್ತಿಗೀತೆಯ ಸಿಡಿಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಭಕ್ತಿಗೀತೆಗೆ ಸಾಹಿತ್ಯ ರಚಿಸಿ ರಾಗ ಸಂಯೋಜನೆ ಮಾಡಿದ  ಸೋಮನಾಥ್ ಶೆಟ್ಟಿ ಮಂಗಲ್ಪಾಡಿ ಹಾಗೂ ಭಕ್ತಿಗೀತೆಯನ್ನು ಹಾಡಿದ ಬಾಲ ಪ್ರತಿಭೆ ಶಾನ್ವಿ ಭರತ್

ಉಪ್ಪಳ ಅವರನ್ನು ಅತಿಥಿ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು. 

https://youtu.be/8c6e1FsuPLU

"ಮುಳಿಂಜದ ಬೊಲ್ಪು" ಭಕ್ತಿಗೀತೆಗೆ ಲವ ಕುಮಾರ್ ಐಲ ಸಂಗೀತ ನೀಡಿದ್ದಾರೆ.ರಾಜುಬಿ.ಕೆ.ಛಾಯಾಗ್ರಹಣ ನಡಸಿದ್ದು,ನವೀನ್ ಸಂಕಲನಗೈದಿದ್ದಾರೆ.

ಇದೀಗ ವಿಶೇಷ ಚಾನೆಲ್ ಯೂಟ್ಯೂಬ್ ನಲ್ಲಿ ಲಭ್ಯವಿದೆ.

https://youtu.be/8c6e1FsuPLU

ಮೇಲಿನ ಲಿಂಕ್ ಒತ್ತಿ "ಮುಳಿಂಜದ ಬೊಲ್ಪು" ಭಕ್ತಿಗೀತೆಯನ್ನು ವೀಕ್ಷಿಸಿ. ಪ್ರತಿಭೆಗಳನ್ನು ಪ್ರೋತ್ಸಾಹಿಸಿ.

                  ಚಿತ್ರಗಳು: ದೀಪಕ್ ರಾಜ್ ಉಪ್ಪಳ


Post a Comment

0 Comments