ಹೆಮ್ಮೆಯ ದುಬೈ ಕನ್ನಡ ಸಂಘ ಮತ್ತು ಭಾರತೀಯ ದೂತವಾಸ ಕೇಂದ್ರದ ಸಹಾಯದಿಂದ ಸೌದಿ ಕುವೈತ್ ಕನ್ನಡಿಗರು ತಾಯಿನಾಡಿಗೆ


ಅಬುಧಾಬಿ :ಕೋವಿಡ್ ಕಾರಣ ಭಾರತದಿಂದ ನೇರವಾಗಿ ಸೌದಿ ಅರೇಬಿಯಾ ಮತ್ತು ಕುವೈತ್ ದೇಶಗಳಿಗೆ ಪ್ರಯಾಣ  ಬೆಳೆಸಲು ನಿರ್ಬಂಧ ಇರುದರಿಂದ ಈ   ದೇಶಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಕನ್ನಡಿಗರು ಸೇರಿ ಸಾವಿರಾರು ಭಾರತೀಯರು ಸಂಯುಕ್ತ ಅರಬ್ ಸಂಸ್ಥಾನದ ದುಬೈ ಮೂಲಕ 16 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿ ಅರೇಬಿಯಾ  ಮತ್ತು ಕುವೈತ್ ದೇಶಗಳಿಗೆ ತೆರಳುತ್ತಿದ್ದರು, ಆದರೆ ಕಳೆದ ಹಲವು ದಿನಗಳಿಂದ ವಿಶ್ವದಾದ್ಯಂತ  ಕೋರೋನ  ಆರ್ಭಟ ಹೆಚ್ಚಿದ್ದರಿಂದ ಸೌದಿ ಮತ್ತು ಕುವೈತ್ ದೇಶಗಳು ದುಬೈಯಿಂದ ಸಹ ವಾಯು ಮಾರ್ಗ ಮತ್ತು ಗಡಿಗಳನ್ನು ಮುಚ್ಚಿ ಪ್ರಯಾಣ ನಿರ್ಬಂಧ ಹೇರಿದ್ದದ್ದು  ಸಾವಿರಾರು ಅನಿವಾಸಿಗಳು ದುಬೈಯಲ್ಲಿ ಸಿಲುಕಿಕೊಂಡು ಸಂಕಷ್ಟಕ್ಕೆ ಒಳಪಟ್ಟರು .


ಹೀಗೆ ಸಂಕಷ್ಟಕ್ಕೆ ಸಿಲುಕಿದ ಭಾರತೀಯರಿಗೆ ಮರಳಿ ಭಾರತಕ್ಕೆ  ತೆರಳಲು ದುಬೈಯಲ್ಲಿರುವ ಭಾರತೀಯ ದೂತಾವಾಸ ಕೇಂದ್ರ ಉಚಿತವಾಗಿ ವಿಮಾನ ಸೇವೆಯನ್ನು ಕಲ್ಪಿಸಿತ್ತು.ಕಾನ್ಸುಲೇಟ್ ನೀಡುವ  ಉಚಿತ ವಿಮಾನ ಟಿಕೆಟ್ ಸೇವೆಯನ್ನು ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಹೆಮ್ಮೆಯ ದುಬೈ ಕನ್ನಡ  ಸಂಘವು ಕಾನ್ಸುಲೇಟಿನಲ್ಲಿ ಅರ್ಜಿ ಸಲ್ಲಿಸಿ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. 


ದುಬೈ ಕಾನ್ಸುಲೇಟ್ ಅವರು  ದುಬಾಯಿಂದ ಮೊದಲನೇ ಹಂತದಲ್ಲಿ ಹಲವು ಅನಿವಾಸಿಗಳನ್ನು ತಾಯಿನಾಡು ಸೇರಿಸಿದ್ದು ಅದರಲ್ಲಿರುವ ಅನಿವಾಸಿ ಕನ್ನಡಿಗರಿಗೆ ಇಂದು  ದುಬೈ ಹೆಮ್ಮೆಯ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು,  ಕಾರ್ಯದರ್ಶಿ ಸೆಂತಿಲ್ ಬೆಂಗಳೂರು ಮತ್ತು ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಅವರು ವಿಮಾನ ನಿಲ್ದಾಣಕ್ಕೆ ಹೋಗಿ ಉಚಿತ ವಿಮಾನ ಟಿಕೇಟನ್ನು ಹಸ್ತಾಂತರಿಸಿದರು, ಸಂಘದ ಅಧ್ಯಕ್ಷರು ದುಬೈ ಭಾರತೀಯ ಕಾನ್ಸುಲೇಟ್ ಮತ್ತು ಟಿಕೆಟ್ ಪಡೆಯಲು ಸಹಾಯ ಮಾಡಿದ ಕೇರಳದ ಕೆ ಎಮ್ ಸಿ ಸಿ ಸಂಘಟನೆಗೂ ಧನ್ಯವಾದಗಳನ್ನು ತಿಳಿಸಿದರು.

                                     Add



Post a Comment

0 Comments