ಬೆಂಗಳೂರಿನಲ್ಲಿ ತುಳು ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು: "ತುಳು ಭಾಷೆಗೆ ಭವಿಷ್ಯವಿದೆ.ಅದಕ್ಕಾಗಿ ತುಳು ಮಾತನಾಡುವ ಮೂಲಕ ಹಾಗೂ ತುಳು ಭಾಷೆ ಸಂಸ್ಕೃತಿಗಳ ಬಗ್ಗೆ ಒತ್ತು ಕೊಡುವಂತಹ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮುಖೇನ ಭಾಷೆಯ ಉಳಿವಿಗೆ ಶ್ರಮಿಸಬೇಕು" ಎಂದು ಕರ್ನಾಟಕ ಸರಕಾರದ ಮೀನುಗಾರಿಕಾ ಸಚಿವ ಎಸ್ ಅಂಗಾರ ತಿಳಿಸಿದರು.ಅವರು ಕರ್ನಾಟಕದ ತುಳು ಸಾಹಿತ್ಯ ಅಕಾಡೆಮಿ ನಗರದಲ್ಲಿ ಬಾನುವಾರ ಆಯೋಜಿಸಿದ 2018,2019 ಹಾಗೂ 2020ನೇ ಸಾಲಿನ 'ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ'ವಿತರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.

     


ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅದ್ಯಕ್ಷ ದಯಾನಂದ ಜಿ ಕತ್ತಲ್ಸಾರ್ ಮಾತನಾಡಿ "ತುಳುವನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕು.ತುಳು ಭಾಷೆಯ 54  ಶಾಸನಗಳ ಪೈಕಿ 3 ರಲ್ಲಿ ತುಳು ರಾಜ್ಯದ ಉಲ್ಲೇಖವಿದೆ. ಅತ್ಯಂತ ಪ್ರಾಚಿನ ಭಾಷೆಯಾಗಿರುವ ತುಳುವಿಗೆ ತನ್ನದೆ ಆದ ಲಿಪಿ ಇದೆ.ತುಳು ಕ್ಯಾಲೆಂಡರ್ ಇದೆ. ಇಂದು ಶಾಲೆಯಲ್ಲಿ ತುಳುವನ್ನು 3 ನೇ ಐಚ್ಚಿಕ ಭಾಷೆಯನ್ನಾಗಿ ನೀಡಲಾಗಿದೆ. ತುಳುವಿನಲ್ಲಿ ಸ್ನಾತಕೋತ್ತರ ಪದವಿ ಮಾಡಲು ಅವಕಾಶ ಇದೆ. ಪಿಯುಸಿಗೂ ಪಠ್ಯ ಪುಸ್ತಕ ಸಿದ್ದವಾಗುತ್ತಿದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಿಯುಸಿಯಲ್ಲೂ ತುಳು ಕಲಿಸಲಾಗುವುದು.ಇಷ್ಟೆಲ್ಲಾ ಅರ್ಹತೆಗಳಿದ್ದ ತುಳು ಭಾಷೆಗೆ ಸರಕಾರ ಅಧಿಕೃತ ಭಾಷೆಯ ಸ್ಥಾನಮಾನವನ್ನು ನೀಡಬೇಕು  ಹಾಗು 8 ನೇ ಪರಿಚ್ಚೇದಕ್ಕೆ ಸೇರಿಸಬೇಕು" ಎಂದು ಸರಕಾರವನ್ನು ಒತ್ತಾಯಿಸಿದರು.
Add

ವಿವಿಧ ತುಳು ನಾಡಿನ ಸಾಧಕರಿಗೆ ಗೌರವ

  ನಂತರ ನಡೆದ ಕಾರ್ಯಕ್ರಮದಲ್ಲಿ ತುಳುನಾಡಿನಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2018 ನೇ ಸಾಲಿನ ಗೌರವ ಪ್ರಶಸ್ತಿ:ಲಲಿತ ಆರ್ ರೈ(ತುಳು ಸಾಹಿತ್ಯ), ರತ್ನಕಾರ ರಾವ್ ಕಾವೂರು(ತುಳು ನಾಟಕ),ಎ ಕೆ ವಿಜಯ ಕೋಕಿಲ (ಸಿನಿಮಾ,ಸಂಗೀತ).

ಪುಸ್ತಕ ಬಹುಮಾನ: ಶಾಂತರಾಮ ವಿ ಶೆಟ್ಟಿ (ಕವನ ವಿಭಾಗ), ರಾಜಶ್ರೀ ಟಿ ರೈ ಪೆರ್ಲ (ಕಾದಂಬರಿ ವಿಭಾಗ).

2019 ನೇ ಸಾಲಿನ ಗೌರವ ಪ್ರಶಸ್ತಿ:ಡಾ.ಎಸ್ ಆರ್ ವಿಘ್ನರಾಜ್ ಧರ್ಮಸ್ಥಳ (ತುಳು ಸಾಹಿತ್ಯ), ದಿ.ತಿಮ್ಮಪ್ಪ ಗುಜರನ್ (ತುಳು ಯಕ್ಷಗಾನ/ಮರಣೋತ್ತರ),ಗುರುವ ಕೊರಗ ಹಿರಿಯಡ್ಕ (ಜಾನಪದ ಕ್ಷೇತ್ರ).


ಪುಸ್ತಕ ಬಹುಮಾನ: ಕುಶಾಲಕ್ಷಿ ವಿ ಕುಲಾಲ್ ಕಣ್ವತಿರ್ಥ ಮಂಜೇಶ್ವರ(ಕವನ ವಿಭಾಗ)

2020 ನೇ ಸಾಲಿನ ಗೌರವ ಪ್ರಶಸ್ತಿ: ರಾಮಚಂದ್ರ ಬೈಕಂಪಾಡಿ(ತುಳು ಸಾಹಿತ್ಯ), ತುಂಗಪ್ಪ ಬಂಗೇರ(ತುಳು ನಾಟಕ), ಅನಂದ ಪೂಜಾರಿ(ಜಾನಪದ  ಕ್ಷೇತ್ರ).

ಪುಸ್ತಕ ಬಹುಮಾನ: ಡಾ.ಕೆ ಚೆನ್ನಪ್ಪ ಗೌಡ 

ವಿಶೇಷ ಬಾಲ ಪ್ರತಿಭಾ ವಿಶೇಷ: ಕು.ತನುಶ್ರೀ ಪಿತ್ರೋಡಿ(ಯೋಗ),


ಸನ್ನಿಧಿ ಟಿ ರೈ ಪೆರ್ಲ(ಕಲೆ) ಹಾಗೂ ತಕ್ಷಿಲ್ ದೇವಾಡಿಗ (ಜಾನಪದ).

ವಿಶೇಷ ಯುವ ಸಾಧಕ: 

ಯೋಗೀಶ್ ಶೆಟ್ಟಿ (ತುಳು ಭಾಷ ಸಂಘಟಕ),ನವೀನ್ ಶೆಟ್ಟಿ ಎಡ್ಮೆಮಾರ್(ನಿರೂಪಣ ಕ್ಷೇತ್ರ),ರಮೇಶ್ ಪಿ (ಜಾನಪದ ಕ್ಷೇತ್ರ),ನಾಗರಾಜ್ ಭಟ್ (ದೈವ ಕ್ಷೇತ್ರ ಸಂಶೋಧಕ),ಭಾರತ್ ಸೌಂದರ್ಯ (ತುಳುನಾಡ ಕಲಾ ಪೋಷಕ), ಸುಭಾಸ್ ನಾಯಕ್(ತುಳು ಶಾಸನ ಸಂಶೋಧನೆ), ದೀಪಕ್ ಪಡುಕೋಣೆ(ತುಳು ಲಿಪಿಯ ಪರಿಶೋಧಕರು).

      ವಿಶೇಷ ಸಂಘಟನ ಪ್ರಶಸ್ತಿ:


ಕುವೈಟ್ ನ ತುಳು ಕೂಟ ಕುವೈಟ್‌, ತುಳು ಸಮಘ ಬರೋಡ,ತುಳು ಕೂಟ ಬೆಂಗಳೂರು, ತುಳು ಕೂಟ ಉಡುಪಿ,ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕುರು ದಕ್ಷಿಣ ಕನ್ನಡ.

ಸಮಾರೋಪ ಸಮಾರಂಭ


"ದ್ರಾವಿಡ ಭಾಷೆಯಲ್ಲಿ ಒಂದಾಗಿರುವ ತುಳುವನ್ನು ಭಾರತಿಯ ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರಿಸುವಂತೆ ಕೆಂದ್ರ ಸರಕಾರಕ್ಕೆ ಪ್ರಸ್ತವನೆ ಸಲ್ಲಿಸಲಾಗಿದೆ ಹಾಗು ತುಳುವನ್ನು ಅಧಿಕೃತ ಭಾಷೆಯಾಗಿಸಲು ಮುಖ್ಯಮಂತ್ರಿಯೊಂದಿಗೆ ಜತೆ ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳಳಲಾಗುವುದು" ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬವಾಳಿ ಭರವಸೆ ನೀಡಿದರು." ತುಳುವನ್ನು ರಾಜ್ಯ ಭಾಷೆಯನ್ನಾಗಿ ಘೋಷಿಸುವ ಕುರಿತು ಚರ್ಚೆಯ ಜತೆಗೆ ತುಳು ಕೊಡವ ಮತ್ತು ಬಂಜಾರ ಭಾಷೆಯನ್ನು 8 ನೇ ಪರಿಚ್ಚೇಧಕ್ಕೆ ಸೇರಿಸುವ ಕುರಿತು ಕೆಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೆ ಶಿಘ್ರ ಅನುಮೋದನೆ ನೀಡುವಂತೆ ಕೆಂದ್ರದ ಸಂಸ್ಕೃತಿ ಸಚಿವರ ಬಳಿಗೆ ಸಂಬಂಧಪಟ್ಟ  ಅಕಾಡೆಮಿ ಮತ್ತು ಪ್ರಾಧಿಕಾರದ ಸದಸ್ಯರನ್ನೊಳಗೊಂಡ ನಿಯೋಗವನ್ನು ಕರೆದುಕೊಂಡು ಹೋಗಲಾಗುವುದು " ಎಂದು ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅಬಾಗ್ಯತರಾಗಿ ಮಾತನಾಡಿದರು.ವೇದಿಕೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತಿರ್ಥ ಸ್ವಾಮೀಜಿ,ರಾಜ್ಯಸಭಾ ಸದಸ್ಯ ಕೆ ನಾರಯಣ,ಧರ್ಮಸ್ಥಳ ಸಮೂಹ ಶಿಕ್ಷಣ ಸಂಸ್ಥೆಗಳ ಉಪದ್ಯಕ್ಷರಾದ ಸುರೇಂದ್ರ ಕುಮಾರ್ , ಡಾ.ಪ್ರಭಾಕರ್ ಭಟ್ ಕಲ್ಲಡ್ಕ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಟ್ಟರು ರತ್ನಾಕರ ಹೆಗ್ಡೆ, ಅದ್ಯಕ್ಷರು ಬ್ಯಾರಿ ಸಾಹಿತ್ಯ ಅಕಾಡೆಮಿಯ ರಹಿಂ ಉಚ್ಚಿಲ,ಕೊಂಕಣಿ ಸಾಹಿತ್ಯ ಅಕಾಡೆಮಿಯ ಅದ್ಯಕ್ಷರಾದ ಡಾ.ಜಗದೀಶ್ ಪೈ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಡಾ.ಸಿ ಸೋಮಶೇಖರ್, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ ಉಪಸ್ಥಿತರಿದ್ದರು.

ತುಳು ಸಂಸ್ಕೃತಿ ವೈಭವ, ಸಿನಿಮಾ ಬೆಳ್ಳಿ ಹಬ್ಬ,ಯಕ್ಷ ನಾಟ್ಯ ಹಾಸ್ಯ ವೈಭವ

   ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ ತುಳುನಾಡ ನಕ್ಷತ್ರ ತರಂಗ (ರಿ) ಕರಾವಳಿ ಕಲಾತರಾಂಗ ಶ್ರೀ ಸರಸ್ವತಿ ಯೋಗಕೆಂದ್ರ ಬೆಂಗಳೂರು ಇವರಿಂದ ತುಳುನಾಡ್ದ ಪದರಂಗಿತ- ನಲಿಕೆ -ತೆಲಿಕೆ-ಯೋಗ ಪ್ರದರ್ಶನ, ರಮೇಶ್ಚಂದ್ರ ಬೆಂಗಳೂರು, ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಶ್ರೀಮತಿ ಕಲಾವತಿ ದಯಾನಂದ ಹಾಗು ತುಳುನಾಡ ಸಾಧಕರಿಂದ ಪಾಡ್ದನ - ಗಾಯನ- ನಲಿಕೆ- ಯೋಗ ಜರಗಿತ್ತು. ಮಧ್ಯಾಹ್ನ ತುಳು ಸಿನಿಮಾದ 50 ನೇ ವರ್ಷದ ಬಂಗಾರ ಪರ್ಬ ಆಚರಿಸಲಾಯಿತ್ತು.ಇದರ ಸಂಯೋಜನೆಯನ್ನು ನಟ ನಿರ್ದೇಶಕ ಶಿವದ್ವಜ್ ಮಾಡಿದ್ದರು.ರಾತ್ರಿ ತುಳುನಾಡ ವೈವಿದ್ಯತೆ ಹಾಗೂ ಯಕ್ಷ ನಾಟ್ಯ ಹಾಸ್ಯ ವೈಭವ ಜರಗಿತ್ತು.

ಅಭಿನಂದನೆ ಸಲ್ಲಿಸಿದ ಅದ್ಯಕ್ಷ ದಯಾನಂದ ಜಿ ಕತ್ತಲ್ ಸಾರ್ ಹಾಗು ಕಾರ್ಯಕ್ರಮದ ಸಂಚಾಲಕಿ ಕಾಂತಿ ಶೆಟ್ಟಿ

ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಸಂಘ ಸಂಸ್ಥೆಗಳಾದ ತುಳು ಕೂಟ(ರಿ) ಬೆಂಗಳೂರು, ತುಳುವೆರೆಂಕುಲು (ರಿ) ಬೆಂಗಳೂರು,ತುಳುವೆರೆ ಚಾವಡಿ(ರಿ)ಬೆಂಗಳೂರು,ಕರ್ನಾಟಕ ಕರಾವಳಿ ಮಿತ್ರ ಮಂಡಳಿ(ರಿ)ಬೆಂಗಳೂರು, ಕೆನಾರ ಅಸೋಸಿಯೇಷನ್ ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು, ತುಳುನಾಡ ತುಳುಕೂಟ(ರಿ) ಬೊಮ್ಮನಹಳ್ಳಿ ಬೆಂಗಳೂರು,ತುಳುವೆರೆ ಚಾವಡಿ ತೆನ್ ಕೈ ಬೊಮ್ಮನಸಂದ್ರ ಬೆಂಗಳೂರು ಹಾಗೂ ಸರ್ವ ತುಳು ಸಂಘಟನೆಗಳು ಬೆಂಗಳೂರು ಮತ್ತು ದುಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಿಗೆ ಹಾಗು ಮಾದ್ಯಮ ಮಿತ್ರರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅದ್ಯಕ್ಷರಾದ ದಯಾನಂದ ಜಿ ಕತ್ತಲ್ಸಾರ್ ಹಾಗು ಕಾರ್ಯಕ್ರಮದ ಸಂಚಾಲಕಿ ಕಾಂತಿ ಶೆಟ್ಟಿ ಬೆಂಗಳೂರು ಅಭಿನಂದನೆಗಳನ್ನು ಸಲ್ಲಿಸಿದರು.

✒️ವಿಜಯಕುಮಾರ್ ಶೆಟ್ಟಿ ಮಜಿಬೈಲ್ (ದುಬೈ)


+971552032097

Post a Comment

0 Comments