ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ- ಗಳಾಗಿದ್ದು ಇದೀಗ ಭಡ್ತಿ ಹೊಂದಿ ಧರ್ಮಸ್ಥಳ ಕೇಂದ್ರ ಕಛೇರಿಗೆ ತೆರಳುತ್ತಿರುವ ಶ್ರೀಮತಿ ಚೇತನಾ ಎಂ ಅವರನ್ನು ಮಂಜೇಶ್ವರದ ಶ್ರೀ ಕಟಿಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಶ್ರೀ ಕಟಿಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ನ ಮಾರ್ಗದರ್ಶಕಿಯಾಗಿ ಹಲವಾರು ಸಮಾಜಮುಖಿ ಕಾರ್ಯ ಚಟುವಟುಕೆಗೆ ಪ್ರೋತ್ಸಾಹದಾಯಕರಾದ ಚೇತನ ಎಂ.ಅವರಿಗೆ ಟ್ರಸ್ಟ್ ನ ಪರವಾಗಿ ಶಾಲುಹೊದಿಸಿ, ಸ್ಮರಣಿಕೆ
ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಈ ವೇಳೆ ಟ್ರಸ್ಟ್ ನ ಸಂಸ್ಥಾಪಕರಾದ ರತನ್ ಕುಮಾರ್ ಹೊಸಂಗಡಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ವರ್ಕಾಡಿ, ಪ್ರಧಾನ ಸಂಚಾಲಕರಾದ ಜಯ ಮಣಿಯಂಪಾರೆ, ಸಂಕಬೈಲ್ ಮಂಜುನಾಥ ಅಡಪ್ಪ, ಅಶ್ವಥ್ ಪೂಜಾರಿ ಲಾಲ್ ಭಾಗ್, ಹರೀಶ್ ಶೆಟ್ಟಿ ಕಡಂಬಾರ್, ಜಯಪ್ರಕಾಶ್ ಶೆಟ್ಟಿ ಬೇಳ ಉಪಸ್ಥಿತರಿದ್ದರು.
ಚಿತ್ರ: ದೀಪಕ್ ರಾಜ್ ಉಪ್ಪಳ






0 Comments