ಪೆರ್ಲ: ದೇಶದೆಲ್ಲೆಡೆ ಅಧಿಕವಾಗುತ್ತಿರುವ ಕೋರೋನ ಸೋಂಕಿನ ಎರಡನೇ ಪ್ರಬಲ ಅಲೆ ಇದೀಗ ಗ್ರಾಮಾಂತರದಲ್ಲೂ ಕಂಡು ಬರತೊಡಗಿದ್ದು ಕೇರಳ -ಕರ್ನಾಟಕ ಗಡಿ ಪ್ರದೇಶವಾದ ಎಣ್ಮಕಜೆ ಗ್ರಾಮ ಪಂಚಾಯತಿನಲ್ಲಿ ಇದರ ನಿವಾರಣೋಪಯಕ್ಕಾಗಿ ಹಲವು ನಿರ್ದೇಶನಗಳನ್ನು ಜಾರಿಗೊಳಿಸಲಾಗಿದೆ ಎಂದು ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ವಿಶೇಷ ಚಾನೆಲ್ ಗೆ ತಿಳಿಸಿದ್ದಾರೆ.
ಸರಕಾರದ ನಿಬಂಧನೆಯ ಜತೆಗೆ ಪಂಚಾಯತ್, ಆರೋಗ್ಯ ಇಲಾಖೆಗಳು ವಿಶೇಷ ಕಾಳಜಿವಹಿಸಿ ಸಕ್ರಿಯವಾಗಿಸಲು ಆಡಳಿತ ಸಮಿತಿ ವಿಶೇಷ ಸಭೆ ನಡೆಸಿತ್ತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ತುರ್ತು ಸಭೆ ನಡೆಸಲಾಯಿತು.
ಈಗಾಗಲೇ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದಕ್ಕಾಗಿ ಸರ್ವ ಜನ ಸಹಾಯದೊಂದಿಗೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಈ ನಡುವೆ ಪಂಚಾಯತಿನ ಒರ್ವ ನಿವಾಸಿಯು ಕೋರೋನ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಾರೆ. ಸಂಪರ್ಕದಿಂದ ದಿನಂಪ್ರತಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿಯೂ ಪಂಚಾಯತ್ ಇಲಾಖೆಯ ನಿಬಂಧನೆ ಹಾಗೂ ಆರೋಗ್ಯ ಕೇಂದ್ರದ ಪರಿಚರಣೆಯೊಂದಿಗೆ ಸಹಕರಿಸಲು ಕೋರಲಾಗಿದೆ.
ಪಂಚಾಯತ್ ಕೇಂದ್ರೀಕರಿಸಿ ಕೋರೋನ ಹೆಲ್ಪ್ ಡೆಸ್ಕ್ ಸ್ಥಾಪಿಸಲು ಹಾಗೂ ವಾರ್ಡ್ ಸಮಿತಿ ಕೋರೋನ ಜಾಗೃತ ಸಮಿತಿ ಸಭೆ ಸೇರಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲು, ಪಂಚಾಯತ್ ಮಟ್ಟದಲ್ಲಿ ಮೈಕ್ ಪ್ರಚಾರ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
1.ಸರಕಾರದ ಕೋವಿಡ್ ನಿಬಂಧನೆಗಳಿಗೆ ಪ್ರಾಧಾನ್ಯತೆ ನೀಡಿ.
2.ವಿನಾ ಕಾರಣ ಪೇಟೆ,ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸದಿರಿ.
3.ಅನ್ಯರಾಜ್ಯದ ಹಾಗೂ ಸಾರ್ವಜನಿಕ ಸಂಪರ್ಕ ಇರಿಸದಿರಿ.
4.ಮಕ್ಕಳನ್ನು ,ಮಹಿಳೆಯರನ್ನು ಪೇಟೆ ಪಟ್ಟಣ ಪ್ರವೇಶಿಸುವಲ್ಲಿ ಮುಂಜಾಗ್ರತೆವಹಿಸಿ.
5.ಪಂಚಾಯತ್ ನ ಪ್ರತಿ ವಾರ್ಡಿನ ಆರೋಗ್ಯಕಾರ್ಯಕರ್ತೆಯರ,ಅಂಗನವಾಡಿ ವರ್ಕರ್ ಗಳ ಪೋನ್ ನಂಬರ್ ಪ್ರತಿ ಮನೆಯವರು ಕೈಯಲ್ಲಿರಿಸಿಕೊಳ್ಳಿ.
6. ನಿಮ್ಮ ಅಥವ ಹತ್ತಿರದ ಮನೆಯಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ನಮ್ಮ ವಾರ್ಡ್ ಜನಪ್ರತಿನಿಧಿ,ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ನೀಡಿ.
7. ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಿ.
8.ಕೋವಿಡ್ ಲಸಿಕೆ ಹಾಕಲು ಬರುವ ವೃದ್ಧರನ್ನು ಪ್ರತ್ಯೇಕ ವಾಹನದಲ್ಲಿ ಕರೆ ತನ್ನಿ ಹಾಗೂ ಸಂಚಾರ ಸಮಯದಲ್ಲಿ ಮುಂಜಾಗ್ರತೆವಹಿಸಿ.
9.ಸರಕಾರ ಜ್ಯಾರಿಗೊಳಿಸುವ ಸುತ್ತೋಲೆ ದಿನಾಂಕದವರೆಗಿನ ಸಾರ್ವಜನಿಕ ಕಾರ್ಯಕ್ರಮ ,ಶುಭ ಸಮಾರಂಭಗಳಿಗೆ ಕಡಿವಾಣ ಇರಿಸಿ.
10.ಕೋರೋನ ನಿಗ್ರಹಕ್ಕಾಗಿ ಎಣ್ಮಕಜೆ ಗ್ರಾಮ ಪಂಚಾಯತ್ ಆಡಳಿತ ಸಮಿತಿಯು ಸದಾ ಸಜ್ಜಾಗಿದ್ದು ಸಾರ್ವಜನಿಕರು ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ಪೆರ್ಲ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ.
ಸೋಮಶೇಖರ್ ಜೆ.ಎಸ್.
ಅಧ್ಯಕ್ಷರು -ಎಣ್ಮಕಜೆ ಗ್ರಾಮ ಪಂಚಾಯತು






0 Comments