ಲಾಕ್ಡೌನ್| ಕೇರಳ-ಕರ್ನಾಟಕ ಗಡಿ ಪ್ರದೇಶದ ಸಂತ್ರಸ್ತರಿಗೆ ಮಧ್ಯಾಹ್ನದ ಬಿಸಿಯೂಟ ವಿತರಿಸಿದ ಕಂಬಳಪ್ರೇಮಿ ಹೊಕ್ಕಾಡಿಗೋಳಿ ಹಕ್ಕೇರಿ ಸನತ್ ಕುಮಾರ್ ಶೆಟ್ಟಿ


ಮಂಜೇಶ್ವರ: ಕೋರೋನ ಮಹಾಮಾರಿ ಪ್ರತಿರೋಧ ಚಟುವಟಿಕೆ ನಿಮಿತ್ತ ಲಾಕ್ ಡೌನ್ ಘೋಷಿಸಿದಾಗ ಹಲವೆಡೆ ಭರಪೂರ ಸೇವಾ ಕಾರ್ಯಗಳು ನಡೆಯುತ್ತಿದೆ. ಇಂತಹ ಮಹತ್ಕಾರ್ಯವೊಂದನ್ನು ಮಾಧ್ಯಮದ ಮೂಲಕ ಗುರುತಿಸಿ ಅ ಸೇವಾ ಕಾರ್ಯಕ್ಕೆ ತನ್ನಿಂದಾದ ಸಹಾಯ ಹಸ್ತವನ್ನು ಸ್ವಯಂ ಪ್ರೇರಿತವಾಗಿ ನೀಡುವ ಮೂಲಕ ಇಲ್ಲೋರ್ವರು ಮಾದರಿಯಾಗಿದ್ದಾರೆ.


ಇಂತಹ ಸೇವಾ ಕೈಂಕರ್ಯದೊಡನೆ ಆದರ್ಶ
ರೆನಿಸಿ ಕೊಂಡವರು ಹಕ್ಕೆರಿ ಕರುಣಾಕರ ಶೆಟ್ಟಿ ಮತ್ತು ಸುಮತಿ ಶೆಟ್ಟಿಯವರ ಪುತ್ರನಾದ ಹೊಕ್ಕಾಡಿಗೋಳಿ ಹಕ್ಕೆರಿ  ಸನತ್ ಕುಮಾರ್ ಶೆಟ್ಟಿ ಅವರಾಗಿದ್ದಾರೆ. ಕಳೆದ 8 ವರ್ಷಗಳಿಂದ ದುಬೈನಲ್ಲಿ ಉದ್ಯೋಗ ನಿರತವಾಗಿರುವ ಇವರು ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಹಾಗೂ ವಜ್ರಿಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ನಡೆಸುತ್ತಿರುವ ಸೇವಾ ಕಾರ್ಯದ ಸಚಿತ್ರ ವರದಿಯನ್ನು "ವಿಶೇಷ ಚಾನೆಲ್" ಡಿಜಿಟಲ್ ಮೀಡಿಯದಲ್ಲಿ  ಗಮನಿಸಿ ಸ್ವಯಂ ಪ್ರೇರಣೆಯಿಂದ ಮುತುವರ್ಜಿ ವಹಿಸಿ ಲಾಕ್ ಡೌನ್ ಸಂತ್ರಸ್ತರಾದವರಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ನೆರವು ನೀಡುವ ಮೂಲಕ ಸೇವೆಗೈದಿದ್ದಾರೆ. 

ಸಮಾಜ ಸೇವೆಯನ್ನೆ ಮುಖ್ಯ ಉದ್ದೇಶವಾಗಿರಿಸಿದ ಹೊಕ್ಕಾಡಿಗೋಳಿ ಹಕ್ಕೆರಿ  ಸನತ್ ಕುಮಾರ್ ಶೆಟ್ಟಿ ಅವರು ಈ ಕರೋನ ಮಹಾಮಾರಿಯ ಸಮಯದಲ್ಲಿ ಸರಕಾರ ಲಾಕ್ ಡೌನ್ ಘೋಷಿಸಿದಾಗ ತನ್ನ ಊರಿನ  ಅವಶ್ಯಕತೆ ಇರುವ ಬಡ ಕುಟುಂಬಗಳಿಗೆ ಕ್ವಿಂಟಲ್ ಗಟ್ಟಲೆ ಅಕ್ಕಿ, ಕಿಟ್ಟ್ ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.   ಉದಾರ ಮನಸ್ಸಿನಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ  ಹಾಗೂ ಬಡವರ ಮನೆ ನಿರ್ಮಾಣಕ್ಕಾಗಿ ಸಂಪೂರ್ಣ ಸಹಾಯ ನೀಡಿತ್ತಾ ಬಂದಿರುವ


ಇವರು ತುಳುನಾಡ ಹೆಮ್ಮೆಯ ಯುವ ಕಂಬಳ ಪ್ರೇಮಿಯಾಗಿದ್ದಾರೆ.  ಸಕ್ರಿಯವಾಗಿ ಕಂಬಳದಲ್ಲಿ ಭಾಗವಹಿಸುವುದನ್ನು  ತಮ್ಮ ಸಂಪ್ರದಾಯಿಕ ಹವ್ಯಾಸವಾಗಿಸಿದ ಇವರು ಕಂಬಳ ಕೋಣಗಳನ್ನು ಸಾಕಿ ಪ್ರೋತ್ಸಾಹಿಸುವ ಮೂಲಕ ಪ್ರಥಮ ದ್ವಿತೀಯ ಬಹುಮಾನಗಳನ್ನು ಪಡೆದಿರುತ್ತಾರೆ.ಕಳೆದ ಬಾರಿಯು ಕೂಡ ಕಂಬಳದಲ್ಲಿ ಬಹುಮಾನ ಪಡೆದಿರುತ್ತಾರೆ.


ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದ ಚೇತನ ಹೊಕ್ಕಾಡಿಗೋಳಿ ಹಕ್ಕೇರಿ ಶ್ರೀ ಸನತ್ ಕುಮಾರ್ ಶೆಟ್ಟಿ (ದುಬೈ) ಪತ್ನಿ ನೀತಾ ಎಸ್.ಶೆಟ್ಟಿ ಅವರೊಡಗೂಡಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಹಾಗೂ ವಜ್ರಿಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಲಾಕ್ ಡೌನ್ ನಿಮಿತ್ತ ನೀಡುತ್ತಿರುವ "ಹಸಿವು ಅರಸಿದ ಹಸ್ತಗಳು" 32 ನೇ ದಿನದ ಮಧ್ಯಾಹ್ನದ ಬಿಸಿ ಊಟವನ್ನ ಗುರುವಾರ ನೀಡಲಾಯಿತು. 


ತಲಪಾಡಿ ಕೆಳಗಿನ ಚೆಕ್ಕಿಂಗ್ ಸೆಂಟರ್ ಹಾಗೂ ಮೇಲಿನ ಚೆಕ್ಕಿಂಗ್ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳಾದ ರಾಕೇಶ್ ರವರಿಗೆ ಸೇವಾರ್ಥಿ ಪರವಾಗಿ ಅರ್ಜುನ್ ಭಕ್ತ ಮಂಜೇಶ್ವರ್ ವಿತರಿಸುವ ಮೂಲಕ ಉದ್ಘಾಟಿಸಿದರು. 


ಬಳಿಕ ತಲಪಾಡಿಯಿಂದ ತೊಡಗಿ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ

ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ -  ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ 


ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು.



Post a Comment

0 Comments