ಮಂಜೇಶ್ವರ: ಮಳೆಗಾಲ ಬಂತೆಂದರೆ ವಿದ್ಯುತ್ ಕೈಕೊಡುವುದೇ ಹೆಚ್ಚು.ನಮಗಾದರೆ ಬೆಳಕಿಲ್ಲದೆ ಕೆಲಸ ಸರಾಗವಾಗಿ ಸಾಗದು.ಹಲವುಬಾರಿ ಲೈನ್ ಮೇನ್ ಗೇ ಬೈದದ್ದೂ ಇದೆ,ನಮ್ಮ ನಮ್ಮ ಅವಶ್ಯಕತೆಗೆ ಅನುಗುಣವಾಗಿ.ಆದರೇ ಇಲ್ಲೊಬ್ಬರು ಲೈನ್ ಮೇನ್ ಗಳ ಕಷ್ಟದ ಕೆಲಸಗಳನ್ನು ಕಂಡು ಜನಸಾಮಾನ್ಯರಿಗೆ ಅವರು ಪಡುವ ಸಾಹಸದ ಬಗ್ಗೆ,ಜೀವ ಪಣತೊಟ್ಟಾದರೂ ಇನ್ನೊಂದು ಮನೆಗೆ ಬೆಳಕು ನೀಡಲು ಶ್ರಮಿಸುವ ಬಗ್ಗೆ ಮನಮುಟ್ಟುವ ಸಾಹಿತ್ಯ,ಸಂಗೀತ,ದೃಶ್ಯಗಳ ಹಾಡಿನ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ.ಅವರೇ ಮಂಜೇಶ್ವರದ ಉಮ್ಮರ್ .
ಹಲವು ಕಾಳಜಿ ವಹಿಸುವ ಸಂದೇಶದೊಂದಿಗೆ ರಸ್ತೆ ದುರಸ್ತಿಯ ಹಾಡನ್ನು ಹಾಡಿ ವೈರಲ್ ಆಗಿ ಇದೀಗ ಕೆ ಎಸ್ ಇ ಬಿ(KSEB)ಯ ಕರ್ತವ್ಯ ನಿಷ್ಠೆಯ ಅದ್ಭುತ ಆಲ್ಬಂ ಗೀತೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮಿಮಿಕ್ರಿ,ಮಾಪ್ಪಿಳ್ಳಪಾಟ್,ಸಿನಿಮಾ ಹಾಡುಗಳನ್ನು ಹಾಡುವ ಜೂನಿಯರ್ ಸೋನು ನಿಗಮ್ ,ಎಸ್ ಪಿ ಬಿ ಖ್ಯಾತಿಯ ಮೂಲಕ ಮಂಜೇಶ್ವರ ಪ್ರತಿಭಾನ್ವಿತನ ಈ ಕಾರ್ಯಕ್ಕೆ ತಮ್ಮೆಲ್ಲರ ಬೆಂಬಲ ಇರಲಿ ಎನ್ನುವ ಆಶಯದೊಂದಿಗೆ ಅವರು ಈ ಯೂ ಟ್ಯೂಬ್ ಹಾಡುಗಳನ್ನು ಕೇಳಿ ಸಹಕರಿಸಿ,ಪ್ರತಿಭೆಯ ಪ್ರೋತ್ಸಾಹಿಸಿ.
ಮಂಜೇಶ್ವರದ ಅಲೀಮ ಅಹಮ್ಮದ್ ಅವರ ಏಕ ಪುತ್ರರಾಗಿರುವ ಇವರಿಗೆ ಮೂರು ಮಕ್ಕಳು ಬಡ ಕುಟುಂಬ, ಸಣ್ಣ ವಯಸ್ಸಿನಲ್ಲಿ ಸಂಗೀತ ಆಸಕ್ತಿ ಇರುವ ಇವರಿಗೆ ನಿಮ್ಮ ಪ್ರೋತ್ಸಾಹವೇ ಆಶ್ರಯ.ಕಲೆಯನ್ನು ಪ್ರೋತ್ಸಾಹಿಸುವ ಗಡಿನಾಡ ಜನರ ಅಭಿಮಾನದ ಸಂಕೇತ ,ಮಂಜೇಶ್ವರ ಪ್ರತಿಭಾನ್ವಿತ ಗಾಯಕ ಉಮ್ಮರ್ ಮಂಜೇಶ್ವರ ಅವರ ಈ ಶ್ರಮಕ್ಕೆ ಈ ಯೂ ಟ್ಯೂಬ್ ಹಾಡನ್ನು ನೋಡಿ ಶೇರ್ ಮಾಡಿ ಕಲಾವಿದನ ಹರಿಸಿ ಹಾರೈಸಿ .
KSEB SONG| UMMER MANJESHWERAM
⚡ಕರೆಂಟು ಹೋದರೆ ಕೂಡಲೇ ಮೊಬೈಲ್ ಫೋನ್ ಕೈಗೆತ್ತಿ ಕರೆಂಟು ಆಫೀಸಿಗೆ ಕರೆಮಾಡಿ ಜರೆಯುವವರು ಈ ವೀಡಿಯೋ ಒಮ್ಮೆ ನೋಡಿ
https://youtu.be/XjeQq807ayI
ಬರಹ : ಎನ್.ಕೆ.ಕುಲಾಲ್ ಬೇಕೂರು





0 Comments