ಮಂಜೇಶ್ವರ: ಪೆರ್ಲದ ಕುದುಕ್ಕೊಳಿ ಪೆಟ್ರೋಲ್ ಬಂಕ್ ಮಾಲೀಕರಾದ ಅಬುದಾಬಿಯಲ್ಲಿ ಝಯೆದ್ ಫೌಂಡೇಶನ್ ನ ಸೀನಿಯರ್ ಫಿನಾನ್ಶಿಯಲ್ ಕಂಟ್ರೋಲರ್ ರಾಗಿ ಉದ್ಯೋಗದಲ್ಲಿರುವ ಕೊಡುಗೈ ದಾನಿ ಅಬ್ದುಲ್ಲಾ ಮಾದುಮೂಲೆ (ಅಬುದಾಬಿ) ಇವರ ಸೇವಾರ್ಥವಾಗಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ, ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಲಾಕ್ ಡೌನ್ ನಿಮಿತ್ತ ನೀಡುತ್ತಿರುವ "ಹಸಿವು ಅರಸಿದ ಹಸ್ತಗಳು" 39 ನೇ ದಿನದ ಮಧ್ಯಾಹ್ನದ ಬಿಸಿ ಊಟವನ್ನ ಇಂದು ಅಪರಾಹ್ನ ನೀಡಲಾಯಿತು.
ಇತ್ತೀಚಿಗೆ ಪೆರ್ಲದಲ್ಲಿ ರಿಕ್ಷಾ ಚಾಲಕರಿಗೆ ಉಚಿತ ಪೆಟ್ರೊಲ್/ಡಿಸೇಲ್ ವಿತರಣೆ ಮಾಡಿ ಜನಾನುರಾಗಿಯಾಗಿರುವ ಇವರು ಪೆರ್ಲದ ಕುದುಕ್ಕೋಳಿ ಪೆಟ್ರೋಲ್ ಬಂಕ್ ಮಾಲೀಕರು. ಅಬುದಾಭಿಯಲ್ಲಿ Zayed ಫೌಂಡೇಶನ್ ನ ಸೀನಿಯರ್ ಫಿನಾನಿಸಿಯಲ್ ಕಂಟ್ರೋಲರ್ ಆಗಿ ಉದ್ಯೋಗದಲ್ಲಿರುವ ಅಬ್ದುಲ್ಲ ಮಾದುಮೂಲೆ ಈ ಲಾಕ್ ಡೌನ್ ಕಾಲಘಟ್ಟದಲ್ಲಿ ರಿಕ್ಷಾ ಡ್ರೈವರ್ ಗಳಿಗೆ ವರದಾನವಾದ ವ್ಯಕ್ತಿಯಾಗಿದ್ದಾರೆ. ಅಬುದಾಭಿಯಲ್ಲಿ ನಡೆಯುವ ಯಾವುದೇ ಸಾಂಸ್ಕೃತಿಕ-ಸಾಮಾಜಿಕ ಕಾರ್ಯಕ್ರಮಗಳ ಪ್ರಾಯೋಜಕರಾಗಿಯೂ ಸಹಕರಿಸುವ ಇವರು ಅಬುಧಾಬಿ ಇಂಡಿಯನ್ ಸ್ಕೂಲ್ ಬೋರ್ಡ್ ಪದಾಧಿಕಾರಿ,ಬ್ಯಾರಿ ವೆಲ್ಫರ್ ಫಾರಂ ನ ಪ್ರಧಾನ ಕಾರ್ಯದರ್ಶಿ,ಬ್ಯಾರಿಸ್ ಚೆಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀ ಯುಎಇಯ ಉಪಾಧ್ಯಕ್ಷ,ಅಡ್ಕಸ್ಥಳ ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷರು ಹಾಗೂ ಅಬುದಾಭಿ ಕರ್ನಾಟಕ ಸಂಘದ ಸದಸ್ಯರು ಹೀಗೆ ಯುಎಇಯಲ್ಲಿ ಹಾಗೂ ತಾಯ್ನಾಡಿನಲ್ಲಿ ಸಾಮಾಜಿಕ ಸಂಘಟನೆಗಳೊಂದಿಗೆ ಸಕ್ರಿಯರಾಗಿದ್ದಾರೆ. ಬಡ ವ್ಯಕ್ತಿಗಳ ಬವಣೆ ಬಗ್ಗೆ ಮಮ್ಮಲ ಮರುಗುವ ಸಹೃದಯಿಯಾಗಿದ್ದಾರೆ.
ತಲಪಾಡಿ ಕೆಳಗಿನ ಚೆಕ್ಕಿಂಗ್ ಸೆಂಟರ್ ಹಾಗೂ ಮೇಲಿನ ಚೆಕ್ಕಿಂಗ್ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳಾದ ದಿವೇಶ್ ರವರಿಗೆ ಸೇವಾರ್ಥಿ ಪರವಾಗಿ ಸ್ಕಂದ ಹೆಲ್ಪ್ ಡೆಸ್ಕ್ ನ ಪಧಾಧಿಕಾರಿಯೂ, ಸಾಮಾಜಿಕ ಮುಂದಾಳುವಾಗಿರುವ ಲಕ್ಷ್ಮಣ್ ಭಕ್ತ ಮಂಜೇಶ್ವರ ರವರು ವಿತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ತಲಪಾಡಿಯಿಂದ ತೊಡಗಿ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ - ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು.





0 Comments