ಮಂಜೇಶ್ವರ: ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಹಾಗೂ ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಏರ್ಪಡಿಸುತ್ತಿರುವ
"ಹಸಿವು ಹರಸಿದ ಹಸ್ತಗಳು" ಯೋಜನೆಯ ಬಿಸಿಯೂಟ ವಿತರಣೆಗೆ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದ ಸಾಧಕ ಎಂ.ಇ.ಮುಳೂರು (ದುಬೈ) ಕೊಡುಗೈ ಸಹಾಯ ನೀಡುವ ಮೂಲಕ ಸೇವೆ ಸಲ್ಲಿಸಿದರು.ಶಾರ್ಜಾ ಕರ್ನಾಟಕ ಸಂಘದ ಪ್ರಸ್ತುತ ಅಧ್ಯಕ್ಷರಾಗಿರುವ ಎಂ.ಇ.ಮುಳೂರು ಸೇವಾರ್ಥವಾಗಿ ಇಂದು ಇಪ್ಪತ್ತಎಂಟನೇ ದಿನದ ಮಧ್ಯಾಹ್ನದ ಬಿಸಿ ಊಟ ವಿತರಣೆ ನಡೆಯಿತು.
ಸೇವಾರ್ಥಿಯ ಪರಿಚಯ:
ಎಂ.ಇ.ಮೂಳೂರು ಎಂಬ ಮಹಮ್ಮದ್ ಇಬ್ರಾಹಿಂ ಮೂಳೂರು ಕಳೆದ 42 ವರ್ಷಗಳಿಂದ ದುಬಾಯಿಯಲ್ಲಿ ಉದ್ಯೋಗ ನಿರ್ವಹಿಸುತ್ತಾ ಸಾಮಾಜಿಕ,ಸಾಂಸ್ಕೃತಿಕ ಪ್ರಗತಿಗೆ ಕಾರಣಕರ್ತರಾಗಿರುವ ಈ ಅನಿವಾಸಿ ಕನ್ನಡಿಗ ಮೂಲತಃ ಉಡುಪಿ.ಜಿಲ್ಲೆಯ ಮುಳೂರಿನ ಇಬ್ರಾಹಿಂ ಬ್ಯಾರಿ-ಆಯಿಷಾ ದಂಪತಿಗಳ ಪುತ್ರರಾಗಿದ್ದಾರೆ.
ಸಂಘಟಕ,ನಾಟಕಗಾರ ಎನಿಸಿಕೊಂಡಿರುವ ಎಂ.ಇ.ಮೂಳೂರು ಸಾಮಾಜಿಕ ಕಷ್ಟ-ಸಂಕಷ್ಟಗಳಿಗೆ ಸ್ಪಂದನೆ ನೀಡುತ್ತಿರುವವರು.1978ರಿಂದ ಕೊಲ್ಲಿ ರಾಷ್ಟ್ರದ ಶಾರ್ಜಾಕ್ಕೆ ಆಗಮಿಸಿದ ಇವರು ಇದೀಗ ದುಬಾಯಿಯ ಮಿಲಾನೊ ಗ್ರೂಪ್ ಅಫ್ ಆಪ್ಟಿಕಲ್ ಎಲ್ ಎಲ್ ಸಿ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ.
ಶಾರ್ಜಾ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ,ಯುಎಇಯ ಕರ್ನಾಟಕ ಎನ್.ಆರ್.ಐ.ಫಾರಂನ ಸಹ ಕಾರ್ಯದರ್ಶಿಯಾಗಿ, ಮಂಗಳೂರಿನ ಬ್ಯಾರಿಸ್ ಕಲ್ಚರಲ್ ಫಾರಮ್ ನ ಉಪಾಧ್ಯಕ್ಷರಾಗಿ, ಮಂಗಳೂರಿನ ವಾರ್ತಾ ಭಾರತೀ ಕನ್ನಡ ದೈನಿಕದ ಮಾಜಿ ನಿರ್ದೇಶಕರಾಗಿ,ಬಿಸಿಫ್ ಸ್ಕಾಲರ್ ಶಿಫ್ ಸಮಿತಿಯ ಚೆಯರ್ಮೆನ್ ಆಗಿ,ಮಂಗಳೂರಿನ ಆಲ್ ಎಹನಾಸ್ ಆಂಗ್ಲ ಮಾಧ್ಯಮ ಶಾಲೆಯ ವಿಭಾಗೀಯ ಅಧ್ಯಕ್ಷರಾಗಿ,ಮೂಳೂರು ಅಲ್ ಇಹನಾಸ್ ಮಹಿಳಾ ಕಾಲೇಜಿನ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ,ಮುಳೂರು ಉಚ್ಚಿಲದ ಅಲ್ ಕಮರ್ ವೆಲ್ಫೇರ್ ಆಸೋಶಿಯೇಶನ್ ನ ಸ್ಥಾಪಕಾಧ್ಯಕ್ಷರಾಗಿ ಮೂಳೂರು ಜಮಾಯತ್ ವೆಲ್ಫೇರ್ ಫಾರಮ್ ನ ಗೌರವಾಧ್ಯಕ್ಷರಾಗಿ, ಪುತ್ತೂರು ಮರ್ಕಝಲ್ ಹುದಾ ಸಮಿತಿಯ ಸಂಚಾಲಕರಾಗಿ,ದುಬಾಯಿಯ ನಮ ತುಳುವೆರ್ ಸಂಘಟನೆಯ ಸದಸ್ಯರಾಗಿ, ಬದಿಯಡ್ಕದಲ್ಲಿ ನಡೆದ ತುಳುನಾಡೋಚ್ಚಾಯದ ಯುಎಇ ಸಮಿತಿ ಸಂಚಾಲಕರಾಗಿ ಹೀಗೆ ವಿವಿಧ ಸಂಘ ಸಂಸ್ಥೆಯ ಮೂಲಕ ಸೇವೆ ಸಲ್ಲಿಸಿ ನಾಡಿನ ಅಭಿವೃದ್ಧಿಪರ ಕೆಲಸ ಕಾರ್ಯಗಳಿಗೆ ಕೈ ಮಿಗಿಲಾದ ಕೊಡುಗೆ ನೀಡಿದ್ದಾರೆ.
ಬ್ಯಾರಿಸ್ ಕಲ್ಚರಲ್ ಫಾರಮ್ ನ "ಸ್ಟಾರ್ ಆಫ್ ದಿ ಬ್ಯಾರಿಸ್" ಪ್ರಶಸ್ತಿ ಸಹಿತ "ಗಡಿನಾಡ ಕನ್ನಡ ರಾಷ್ಟ್ರೀಯ ಪ್ರಶಸ್ತಿ", "ವಿಶ್ವ ತುಳುನಾಡೋಚ್ಚಾಯ ಪ್ರಶಸ್ತಿ", "ಪಯನೀರ್ ಸರ್ವೀಸ್ ಆವಾರ್ಡ್",ಸಹಿತ ಹಲವಾರು ಗೌರವಾಭಿನಂದನೆ ಗಳಿಸಿಕೊಂಡಿರುವ ಇವರು "ವಿಶೇಷ ಚಾನೆಲ್" ವರದಿ ಆಧಾರಿಸಿ ಸ್ವಯಂ ಪ್ರೇರಿತರಾಗಿ ಕಾಸರಗೋಡು ಜಿಲ್ಲೆಯ ಗಡಿನಾಡಲ್ಲೂ ಸೇವೆ ಸಲ್ಲಿಸುವ ಮೂಲಕ ಆದರ್ಶರಾಗಿದ್ದಾರೆ.
ಇದೀಗ ಕೇರಳ - ಕರ್ನಾಟಕ ಗಡಿ ಪ್ರದೇಶವಾದ ಮಂಜೇಶ್ವರದಲ್ಲಿ ಲಾಕ್ ಡೌನ್ ಸಂತ್ರಸ್ತರಿಗೆ ಆಹಾರ ವಿತರಣೆಗೆ ಸಹಕರಿಸುವ ಮೂಲಕ ಸೇವಾಭಾವ ಮೆರೆದಿದ್ದಾರೆ.
ತಲಪಾಡಿ ಕೆಳಗಿನ ಚೆಕ್ಕಿಂಗ್ ಸೆಂಟರ್ ಹಾಗೂ ಮೇಲಿನ ಚೆಕ್ಕಿಂಗ್ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳಾದ ಶಿವೇಶ್ ರವರಿಗೆ ಸೇವಾರ್ಥಿ ಪರವಾಗಿ ಶ್ರೀ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ, ಹೊಸಬೆಟ್ಟು ಮಂಜೇಶ್ವರದ ಧರ್ಮದರ್ಶಿ ಶ್ರೀ ಜಯಾನಂದ ರವರು ವಿತರಿಸುವ ಮೂಲಕ ಉದ್ಗಾಟಿಸಿದರು.
ಬಳಿಕ ತಲಪಾಡಿಯಿಂದ ತೊಡಗಿ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ - ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು.






0 Comments