ಮಂಜೇಶ್ವರ: ಪೆರ್ಲದ ಕುದುಕ್ಕೊಳಿ ಪೆಟ್ರೋಲ್ ಬಂಕ್ ಮಾಲೀಕರಾದ ಅಬುದಾಬಿಯಲ್ಲಿ ಝಯೆದ್ ಫೌಂಡೇಶನ್ ನ ಸೀನಿಯರ್ ಫಿನಾನ್ಶಿಯಲ್ ಕಂಟ್ರೋಲರ್ ರಾಗಿ ಉದ್ಯೋಗದಲ್ಲಿರುವ ಕೊಡುಗೈ ದಾನಿ ಅಬ್ದುಲ್ಲಾ ಮಾದುಮೂಲೆ (ಅಬುದಾಬಿ) ಇವರ ಸೇವಾರ್ಥವಾಗಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ, ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಲಾಕ್ ಡೌನ್ ನಿಮಿತ್ತ ನೀಡುತ್ತಿರುವ "ಹಸಿವು ಅರಸಿದ ಹಸ್ತಗಳು" 41 ನೇ ದಿನದ ಮಧ್ಯಾಹ್ನದ ಬಿಸಿ ಊಟವನ್ನ ಶನಿವಾರ ಅಪರಾಹ್ನ ನೀಡಲಾಯಿತು.
ಕೇರಳ ಕರ್ನಾಟಕದ ಗಡಿಭಾಗವಾದ ತಲಪಾಡಿಯಲ್ಲಿ ವಿವಿಧ
ರಾಜ್ಯಗಳಿಂದ ಕೇರಳ - ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ ಲಾರಿ ಚಾಲಕ ಕ್ಲಿನರ್ ಗಳಿಗೆ,ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ , ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ಇಂದು ಮಧ್ಯಾಹ್ನದ ಬಿಸಿಯೂಟ ಅಬ್ದುಲ್ಲ ಮಾದುಮೂಲೆಯವರ ವತಿಯಿಂದ ನೀಡಲಾಯಿತು.





1 Comments
ಕೊಡುಗೈ ದಾನಿ ಅಬ್ದುಲ್ಲಾರಿಗೆ ಪರಮಾತ್ಮನು ಇನ್ನೂ ಹೆಚ್ಚಿನ ಶಕ್ತಿ ನೀಡಲಿ
ReplyDelete