ಮಂಜೇಶ್ವರ: ಗಡಿನಾಡಿನ ಲಾಕ್ಡೌನ್ ಸಂತ್ರಸ್ತರಿಗೆ ಬಿಸಿಯೂಟ ಪ್ರಾಯೋಜಿಸುವ ಮೂಲಕ ಸಾಮಾಜಿಕ ಸೇವೆಗೆ ನೇತೃತ್ವ ವಹಿಸುವ ಸಂಘಟನಾ ಮನೋಭಾವ ಶ್ಲಾಘನೀಯ ಎಂದು ಮಂಜೇಶ್ವರದ ಜನಪ್ರಿಯ ಶಾಸಕ ಎಕೆಎಂ ಆಶ್ರಫ್ ಅಭಿಪ್ರಾಯಪಟ್ಟರು.
ಅವರು ರವಿವಾರ ಕೇರಳ -ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿ ಮಂಜೇಶ್ವರ ಭಾಗದಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಹಾಗೂ ವಜ್ರಿಟೆಕ್ ಪ್ರೈವೆಟ್ ಲಿಮಿಟೆಡ್ ಮಂಗಳೂರು ಇದರ ವತಿಯಿಂದ ಲಾಕ್ ಡೌನ್ ನಿಮಿತ್ತ ನೀಡುವ 42ನೇ ದಿನದ ಮಧ್ಯಾಹ್ನದ ಬಿಸಿಯೂಟ ವಿತರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಯು.ಎ.ಇಯ ಸ್ಪ್ರೆ ಟೆಕ್ ಕೊಟಿಂಗ್ಸ್ ಇದರ ಮೇನೆಜಿಂಗ್ ಡೈರೆಕ್ಟರ್, ಸಮಾಜ ಸೇವಕರೂ, ತುಳು ಕನ್ನಡ ಸಂಘಟನೆಗಳ ಮಹಾ ಪೋಷಕರಾಗಿರುವ ರಾಮಚಂದ್ರ ಹೆಗ್ಡೆ ದುಬೈ ಹಾಗೂ ಪ್ರಸ್ತುತ ಮಂಜೇಶ್ವರ ಪೊಲೀಸ್ ಸ್ಟೇಶನ್ ಬಳಿ ಇರುವ ಜಿ.ಡಬ್ಲ್ಯೂ. ಎಲ್.ಪಿ. ಶಾಲೆಯ ಮುಖ್ಯೋಪಾಧ್ಯಾಯ ರಾಗಿರುವ ಸುಖೇಶ್ ಮಾಸ್ಟರ್ ಹಾಗೂ ಮೂಡುಶೆಡ್ಡೆ ಮಹಿಳೆಯರ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ
ಉದ್ಯೋಗದಲ್ಲಿರುವ ಶ್ರೀಮತಿ ಕಲ್ಪನಾ ದಂಪತಿಗಳ ಏಳನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸೇವಾರ್ಥವಾಗಿ ರವಿವಾರದ ಬಿಸಿಯೂಟ ಸೇವೆ ನಡೆಯಿತು.
ತಲಪಾಡಿಯಿಂದ ತೊಡಗಿ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ - ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು.







0 Comments