"ಹಸಿವು ಹರಸಿದ ಹಸ್ತ"ಕ್ಕೆ ಅನ್ನದಾತರಾದ ಕತಾರ್ ನ ಅನಿವಾಸಿ ಕನ್ನಡಿಗ ಡಾ.ಮೂಡಂಬೈಲ್ ರವಿ ಶೆಟ್ಟಿ


ಮಂಜೇಶ್ವರ:   ಗಲ್ಪ್ ರಾಷ್ಟ್ರದಲ್ಲಿ ಇದ್ದುಕೊಂಡು ಸ್ವದೇಶದ  ಅತೀ ಹೆಚ್ಚು ಜನತೆಗೆ ಉದ್ಯೋಗದಾತರಾಗುವ ಮೂಲಕ ತನ್ನ ಬಹುಮುಖಿ ಆಸಕ್ತಿ ಅಭಿರುಚಿಯಿಂದ ಕ್ರೀಡಾ,ಸಾಂಸ್ಕೃತಿಕ ಪ್ರೋತ್ಸಾಹಕರಾಗಿ ಗುರುತಿಸಿಕೊಂಡಿರುವ ಮಹಾನ್ ಸಾಧಕ  ಕತಾರ್ ದೇಶದ ಅನಿವಾಸಿ ಕನ್ನಡಿಗರಾಗಿರುವ ಮೂಡಂಬೈಲು ಶ್ರೀ ರವಿ ಶೆಟ್ಟಿ ಕತಾರ್ ಅವರು ಲಾಕ್ ಡೌನ್ ಹಿನ್ನಲೆಯಲ್ಲಿ ಕೇರಳ ಕರ್ನಾಟಕದ ಗಡಿನಾಡದ ತಲಪಾಡಿ- ಮಂಜೇಶ್ವರ ಪ್ರದೇಶದಲ್ಲಿ ಅನ್ನದಾನ ವಿತರಿಸುವ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಹಾಗೂ ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರಿನ ಯೋಜನೆಯೊಂದಿಗೆ ಕೈ ಜೋಡಿಸಿದರು. 

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡಂಬೈಲಿನ ತಿಮ್ಮಪ್ಪ ಶೆಟ್ಟಿ- ದೋಣಿಂಜೆಗುತ್ತು ಸರೋಜಿನಿ ಶೆಟ್ಟಿ ದಂಪತಿಗಳ ಪುತ್ರನಾದ ರವಿ ಶೆಟ್ಟಿ  ಇವರು ಪ್ರಸ್ತುತ  ಕತಾರ್ ನಲ್ಲಿ ಕರ್ನಾಟಕ ಮೂಲದ ಕನ್ನಡ-ತುಳು ಸಂಘಟನೆಗಳಲ್ಲಿ ಅಪಾರ ಸೇವೆಗೈಯುತ್ತಾ, ಅಪಾಂಗ ವ್ಯಕ್ತಿಗಳಿಗೆ, ವೃದ್ಧಾಶ್ರಮಕ್ಕೆ ಸಹಾಯವನ್ನಾ ನೀಡುತ್ತಾ ಬಂದಿರುತ್ತಾರೆ. ಅಲ್ಲದೇ ಪುತ್ತೂರಿನಲ್ಲಿ ನೇಸರ ಚಾರಿಟೇಬಲ್ ಟ್ರಸ್ಟ್ ನ್ನು ಸ್ಥಾಪಿಸಿ ಹಲವಾರು ವ್ಯಕ್ತಿಗಳ ಬದುಕಿಗೆ ದಾರಿದೀಪವಾಗಿದ್ದು, ಇದೀಗ ಹಲವು ವರ್ಷಗಳಿಂದ ಕತಾರ್ ನಲ್ಲಿ ಉದ್ಯಮಿಯಾಗಿರುವರು. 


ಇವರ ಸೇವಾರ್ಥವಾಗಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಹಾಗೂ ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಸಂಸ್ಥೆ ಕರೊನಾ ಹಿನ್ನೆಲೆಯಲ್ಲಿ ನೀಡುತ್ತಿರುವ "ಹಸಿವು ಹರಸಿದ ಹಸ್ತಗಳು" ಎಂಬ ಇಪ್ಪತ್ತ ಒಂಬತ್ತನೇ ದಿನದ ಮಧ್ಯಾಹ್ನದ ಬಿಸಿ ಊಟ ವಿತರಣೆ ಇಂದು ನಡೆಯಿತು.  


ತಲಪಾಡಿಯಿಂದ ತೊಡಗಿ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದ ವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ -  ಕರ್ನಾಟಕ ಪ್ರವೇಶಿಸುವ ನಡುವೆ

ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿದ್ದ ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು.

Post a Comment

0 Comments