ವಿದೇಶದಲ್ಲಿ ಉದ್ಯಮಿಯಾಗಿದ್ದ ಬಿಪಿನ್ ರೈ ಅವರ ಹುಟ್ಟು ಹಬ್ಬದಂದು ರಕ್ತದಾನ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿದ ಅಭಿಮಾನಿಗಳು


ಮಂಗಳೂರು: ರಕ್ತ ದಾನಕ್ಕಿಂತ ಮಿಗಿಲಾದ ದಾನ ಇನೊಂದಿಲ್ಲ. ಒಬ್ಬರ ಪ್ರಾಣವನ್ನು ಉಳಿಸಿ ರಕ್ತದಾನ ಮಾಡುವವರು ಸಾಕ್ಷಾತ್ ದೇವರಂತೆ ಕಾಣುತ್ತಾರೆ. ಇದಕ್ಕೆ ಇಂದಿನ ಯುವಜನಾಂಗವೊಂದು ಸಾಕ್ಷಿಯಾಗಿದೆ.


ವಿದೇಶದಲ್ಲಿ ಉದ್ಯಮಿಯಾಗಿರುವ ಶ್ರೀ ಬಿಪಿನ್ ರೈ ಯವರ ಜನ್ಮ ದಿನಾಚರಣೆಯನ್ನು ಅವರ ಅಭಿಮಾನಿಗಳು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. 


ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಸುಮಾರು 150  ಮಂದಿ ಸ್ವಯಂ ಪ್ರೇರಿತ ರಕ್ತದಾನ ಮಾಡಿರುವುದು ಶ್ಲಾಘನೀಯ.

ಅಲ್ಲದೆ ಅನಾಥ ಆಶ್ರಮಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಮಧ್ಯಾಹ್ನದ ಭೋಜನವನ್ನು ಏರ್ಪಡಿಸಿದ್ದಾರೆ. 


ಈ ಸಂದರ್ಭದಲ್ಲಿ ವರುಣ್ ಹೆಗ್ಡೆ, ಭರತ್  ಕುಮ್ಡೇಲ್  ಪ್ರೀತೇಶ್ ಅಂಚನ್, ಪ್ರೀತಮ್ ಪೂಜಾರಿ, ಮೊದಲಾದವರು  ಉಪಸ್ಥಿತರಿದ್ದರು. ಶ್ರೀಯುತ ಬಿಪಿನ್ ರೈಯವರ ಕುಟುಂಬ ಮತ್ತು ಅಭಿಮಾನಿಗಳಿಗೆ ದೇವರು ಆಯುರಾರೋಗ್ಯ ಕರುಣಿಸಲಿ. ಅವರ ಸಮಾಜ ಸೇವೆ ಇತರರಿಗೆ ಮಾದರಿಯಾಗಲಿ ಎಂದು ಹಾರೈಸೋಣ.


 ಮಾಹಿತಿ : ಸುಕೇಶ್ ಬೆಜ್ಜ

Post a Comment

0 Comments