ಮಂಜೇಶ್ವರದ "ಹಸಿವು ಅರಸಿದ ಹಸ್ತ" ಯೋಜನೆಗೆ ಸಾಥ್ ನೀಡಿದ ಶಾರ್ಜಾದ ಸಂಘಟಕ,ಸಮಾಜ ಸೇವಕ "ಆನಂದ್ ಬೈಲೂರು"


ಮಂಜೇಶ್ವರ: ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ರಂಗದ ಧುರೀಣರೂ, ಸಮಾಜ ಸೇವಕರೂ, ಕರ್ನಾಟಕ ಸಂಘ ಶಾರ್ಜಾದ ಮಾಜಿ ಅಧ್ಯಕ್ಷರಾದ ಆನಂದ ಬೈಲೂರು (ದುಬೈ) ಇವರ ಸೇವಾರ್ಥವಾಗಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಹಾಗೂ ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಸಂಸ್ಥೆ ಕರೊನಾ ಹಿನ್ನೆಲೆಯಲ್ಲಿ ನೀಡುತ್ತಿರುವ "ಹಸಿವು ಹರಸಿದ ಹಸ್ತಗಳು" ಎಂಬ ಇಪ್ಪತ್ತ ಆರನೇ ದಿನದ ಮಧ್ಯಾಹ್ನದ ಬಿಸಿ ಊಟ ವಿತರಣೆ ಇಂದು ನಡೆಯಿತು. 


ಮೂಲತಃ ಉಡುಪಿ ಜಿಲ್ಲೆಯ ಬೈಲೂರಿನವರಾದ ಆನಂದ್ ಅವರು ಔದ್ಯೋಗಿಕವಾಗಿ ಕಳೆದ ಮೂವತೈದು ವರ್ಷಗಳಿಂದ ದುಬಾಯಿಯಲ್ಲಿ ನೆಲೆಸಿರುವ ಇವರು ಸ್ವಂತಕ್ಕೆ ಲಭಿಸಿದ ಅಲ್ಪ ಆದಾಯದ ಒಂದು ಪಾಲನ್ನು  ಸಮಾಜ ಸೇವೆ, ಸಾಂಸ್ಕೃತಿಕ  ರಂಗಕ್ಕೆ  ಕೊಡುಗೆ ನೀಡುತ್ತಾ ಬಂದಿರುವ ಮಾದರಿ ವ್ಯಕ್ತಿಯಾಗಿದ್ದಾರೆ.ಇದೀಗ ಕಾಸರಗೋಡು ಜಿಲ್ಲೆಗೂ ತಮ್ಮ ಸೇವಾ ಹಸ್ತವನ್ನು ಕೈ ಚಾಚಿ ಆದರ್ಶರಾಗಿದ್ದಾರೆ.


ತಲಪಾಡಿ ಕೆಳಗಿನ ಚೆಕ್ಕಿಂಗ್ ಸೆಂಟರ್ ಹಾಗೂ ಮೇಲಿನ ಚೆಕ್ಕಿಂಗ್ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳಾದ ಬಾಬುರವರಿಗೆ ಸೇವಾರ್ಥಿ ಪರವಾಗಿ ಶ್ರೀ ಅರ್ಜುನ್ ಭಕ್ತ ಮಂಜೇಶ್ವರ ವಿತರಿಸುವ ಮೂಲಕ ಉದ್ಘಾಟಿಸಿದರು. 


ಬಳಿಕ ತಲಪಾಡಿಯಿಂದ ತೊಡಗಿ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ -  ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು. ಈ ಬಿಸಿ ಊಟ ವಿತರಣೆಯಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ ನ ಪಧಾಧಿಕಾರಿಗಳಾದ ಲಕ್ಷ್ಮಣ್ ಭಕ್ತ ಮಂಜೇಶ್ವರ, ರತನ್ ಕುಮಾರ್ ಹೊಸಂಗಡಿ, ಸುಧೀನ್ ವರ್ಕಾಡಿ, ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments