ಮುಳ್ಳೇರಿಯ: ಬಡ ಜನತೆಯ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸ್ಥಳೀಯಾಡಳಿತಗಳು ಅಭಿವೃದ್ಧಿ ಕಾರ್ಯದಲ್ಲಿ ಮಾತ್ರ ಸ್ವಜನ ಪಕ್ಷಪಾತ ನೀತಿ ಅನುಸರಿಸುವುದು ಹಲವೆಡೆ ಕಂಡು ಬರುತ್ತಿದ್ದೂ ಬೆಳ್ಳೂರು ಗ್ರಾಮ ಪಂಚಾಯತಿನಲ್ಲೂ ಇದು ಸಾಕ್ಷತ್ಕಾರಗೊಳ್ಳುತ್ತಿರುವ ಬಗ್ಗೆ ನಾಗರಿಕರು ಆರೋಪಿಸಿದ್ದು ಹಲವು ಆರೋಪಗಳು ಇದಕ್ಕೆ ಪುಷ್ಠಿ ನೀಡುವಂತಿದೆ.
ಇಲ್ಲಿನ ವಾರ್ಡ್ ಒಂದರಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಇಟ್ಟಿದ್ದ ಹತ್ತು ಸಾವಿರ ಲೀಟರ್ ಸಂಗ್ರಹವಾಗುವ ಸಿಂಥೆಟಿಕ್ ಟ್ಯಾಂಕನ್ನು ಕೆಲವರು ಸ್ವಪ್ರಯೋಜನಕ್ಕಾಗಿ ಬಳಸುತ್ತಿದ್ದಾರೆ ಎಂಬ ಆರೋಪ ಇದೀಗ ಸುದ್ದಿಯಾಗುತ್ತಿದೆ. 2017-18ರ ಸರಕಾರಿ ಪದ್ಧತಿಯಲ್ಲಿ ಹನ್ನೆರಡನೇ ವಾರ್ಡು ಮತ್ತು ಹದಿಮೂರನೇ ವಾರ್ಡುಗಳ ಗಡಿಭಾಗದ ರಸ್ತೆ ಬದಿಯ ಹರಿಜನ ಕಾಲನಿಯಲ್ಲಿ ಸ್ಥಾಪಿಸಿದ್ದ ನೀರಿನ ಟ್ಯಾಂಕನ್ನು ಇದೀಗ ಸ್ಥಳಾಂತರಿಸಿರುವುದು ಚರ್ಚಾಸ್ಪದ ವಿಷಯವಾಗಿದೆ. ಇದೀಗ ಕುಡಿ ನೀರಿನ ಈ ಟ್ಯಾಂಕನ್ನು ಕೇವಲ ಕೃಷಿ ಪ್ರಯೋಜನಕ್ಕಾಗಿ ಉಪಯೋಗಿಸುವ ಒಂದೇ ತಾಯಿಯ ಮಕ್ಕಳಿಗೆ ಯಾವುದೋ ರಾಜಕೀಯ ಪಕ್ಷದ ಬೆಂಬಲಿಗರ ಕೊಡುಗೆ ನೀಡುರುವ ಹಾಗೆ ಗುಮನಿಯೂ ಇದೆ.
ಅಂತೆಯೇ ಬೇರೆ ವಾರ್ಡುಗಳಲ್ಲಿ ಇಂತಹ ಬೃಹತ್ ಗಾತ್ರದ ಟ್ಯಾಂಕುಗಳು ಸ್ವಜನ ಪಕ್ಷಪಾತಕ್ಕೆ ಸಿಲುಕಿ ಸಿರಿವಂತರ ಮಹಡಿ ಸೇರಿರುವ ಬಗ್ಗೆಯೂ ಗುಮಾನಿ ಇದೆ. ಹಲವು ಬಡ ಜನರ ಪರವಾಗಿರುವ ಪದ್ಧತಿಗಳ ದುರ್ಲಾಭ ಪಡೆಯುತ್ತಾ ಸ್ವಪಕ್ಷೀಯರು ಬೀಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಬಡಪಾಯಿ ಜನಗಳ ಗಂಟಲಿಗಿಳಿಯುವ ದಾಹದ ನೀರು ಚಾಣಾಕ್ಷರ ಕೃಷಿವಿಚಾರಕ್ಕೆ ನೀಡಿರುವುದರ ಬಗ್ಗೆ ಗುಸು ಗುಸು ಚರ್ಚೆಗಳು ದೊಡ್ಡ ಮಟ್ಟಕ್ಕೆ ತಲುಪಿ ಆಡಳಿತ ವಿರುದ್ಧ ಪ್ರತಿಭಟನೆಗಿಳಿಯಲು ಸ್ಥಳೀಯರು ಸಿದ್ಧವಾಗುತ್ತಿರುವುದಾಗಿ ತಿಳಿದು ಬಂದಿದೆ.



0 Comments