ಪುತ್ತೂರು: ಅಬುಧಾಬಿಯಲ್ಲಿ ಉದ್ಯೋಗ ಕಂಡುಕೊಂಡು ಅದರಲ್ಲಿ ಲಭಿಸಿದ ವರಮಾನದ ಹದಿನೈದು ಶೇಕಡಾವನ್ನು ತನ್ನ ತಾಯ್ನಾಡಿನ ಸಮಾಜ ಸೇವೆಗಾಗಿ ವಿನಿಯೋಗಿಸುವ ಮಿತ್ರಂಪಾಡಿಯ ಜಯರಾಮ ರೈ ಲಾಕ್ ಡೌನ್ ಸಂದರ್ಭದಲ್ಲಿ ಸಂತ್ರಸ್ತರಿಗೆ ಅನ್ನ ಆಹಾರ ,ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ.
ಪುತ್ತೂರು ತಾಲೂಕಿನ ಚೆನ್ನಪ್ಪ ರೈ- ಡಿಂಬ್ರಿಗುತ್ತು ಸರಸ್ವತಿ ರೈ ದಂಪತಿಗಳ ಪುತ್ರರಾಗಿ ಸುಸಂಸ್ಕೃತ ಬಂಟ ಮನೆತನದಲ್ಲಿ ಜನಿಸಿದ ಜಯರಾಮ ರೈಗಳು ಅಬುಧಾಬಿಯಲ್ಲಿ ಇದ್ದುಕೊಂಡು ತಾಯ್ನಾಡಿನ ಸಮಾಜ ಸೇವೆಗೆ ಸ್ಪಂದಿಸುವ ಪರಿ ಅನನ್ಯವಾಗಿದೆ.
ಕೃಪೆ: ಸುದ್ದಿ ಪುತ್ತೂರು
ಕೋರೋನ ದ್ಚಿತೀಯ ಅಲೆಯ ಸಂದರ್ಭದಲ್ಲಿ ಲಾಕ್ ಡೌನ್ ಘೋಷಿಸಿದಾಗ ಪುತ್ತೂರಿನ ಜಾತ್ರೆಗಾಗಿ ಬಂದಿಂದ ತೊಟ್ಟಿಲು, ಜಾಯಿಂಟ್ ವೀಲ್ ಹಾಕುವವರ ಕುಟುಂಬ ಊರಿಗೆ ಮರಳಲಾಗದೆ ಅಲ್ಲೇ ಉಳಿದಿತ್ತು. ಈ ಬಗ್ಗೆ ಸುದ್ದಿ ಮಾಧ್ಯಮದಲ್ಲಿ ಬಂದ ವರದಿಗೆ ಸ್ಪಂದಿಸಿ ಮಿತ್ರಂಪಾಡಿ ಜಯರಾಮ ರೈಗಳು ಸುಮಾರು 60 ಮಂದಿಗೆ 20 ದಿನಗಳಿಗೆ ಬೇಕಾಗುವಷ್ಟು ಆಹಾರ ತಯಾರಿಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಸಕಾಲಿಕ ಸ್ಪಂದನೆ ನೀಡಿದ್ದರು.
(ಮೇಲಿನ ಲಿಂಕ್ ವೀಕ್ಷಿಸಬಹುದು)
ಇದೀಗ ಕೇರಳ -ಕರ್ನಾಟಕದ ಗಡಿಭಾಗವಾದ ತಲಪಾಡಿ, ಮಂಜೇಶ್ವರ ಪ್ರದೇಶದಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ ಹಾಗೂ ವಜ್ರಿಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ವತಿಯಿಂದ ಮಧ್ಯಾಹ್ನನದ ಬಿಸಿಯೂಟ ವಿತರಣೆಗೆ ಸಹಕಾರ ನೀಡುವ ಮೂಲಕ ಗಡಿನಾಡಿಗೂ ತಮ್ಮ ಸಹಾಯ ಹಸ್ತ ಚಾಚಿ ಅಭಿಮಾನ ಮೂಡಿಸಿದ್ದಾರೆ.
ತಲಪಾಡಿ ಕೆಳಗಿನ ಚೆಕ್ಕಿಂಗ್ ಸೆಂಟರ್ ಹಾಗೂ ಮೇಲಿನ ಚೆಕ್ಕಿಂಗ್ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳಾದ ಸಜೀಸ್ ರವರಿಗೆ ಸೇವಾರ್ಥಿ ಮಿತ್ರಂಪಾಡಿ ಜಯರಾಮರೈಗಳ ಪರವಾಗಿ ಸಾಮಾಜಿಕ ಮುಂದಾಳು ಹರಿಜೀವನ್ ದಾಸ್ ನೀರ ಹಳ್ಳಿ ವಿತರಿಸುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಸಾಮಾಜಿಕ ಮುಂದಾಳು ಶ್ರೀ ಕಾರ್ತಿಕ್ ಶೆಟ್ಟಿ ಮಜಿಬೈಲ್ ಹಾಗೂ ಸ್ಕಂದ ಹೆಲ್ಪ್ ಡೆಸ್ಕ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೋರೋನ ಕಾಲದ ಆರಂಭದಿಂದಲೇ ಸಮರೋಪಾದಿ ನೆರವು.....
ಜಗತ್ತನ್ನೇ ತನ್ನ ಕಾಲಡಿಯಲ್ಲಿ ಹೊಸಕಿ ಹಾಕಲು ಹೊರಟ ಕೊರೋನಾ ಎಂಬ ಮಹಾಮಾರಿಯ ನಿಗ್ರಹಕ್ಕಾಗಿ ಕಳೆದ ವರ್ಷ ಪ್ರಥಮ ಬಾರಿಗೆ ಲಾಕ್ ಡೌನ್ ಘೋಷಿಸಿದಾಗ ಅಬುಧಾಬಿಯಲ್ಲಿ ನೆರವು ನೀಡಿ ಸಹಕರಿಸಿದ್ದರು.ಈ ಸಂದರ್ಭದಲ್ಲಿ ವಿದೇಶದಿಂದ ತಾಯ್ನಾಡಿಗೆ ಮರಳುವವರಿಗೆ ವಿಮಾನದ ವ್ಯವಸ್ಥೆಗೆ,ಉಚಿತ ವಿಮಾನ ಟಿಕೆಟ್ ಮೊದಲಾದವುಗಳಿಗೆ ಕೈ ಜೋಡಿಸಿದರು.
ಹುಟ್ಟೂರಿನ ಜನತೆಯ ಬಗ್ಗೆ ಅತೀವ ಪ್ರೀತಿ ಹಾಗೂ ಕಾಳಜಿಯನ್ನು ಬೆಳೆಸಿಕೊಂಡಿರುವ ರೈಗಳು ಅಲ್ಲಿನ ಜನರ ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಿದ್ದರು.
ಇದರಂತೆ ಪುತ್ತೂರು ತಾಲೂಕಿನ ಕೆದಂಬಾಡಿ ಕೆಯ್ಯೂರು. ಸರ್ವೆ, ಒಳಮೊಗ್ರು,ಕುರಿಯ ಹಾಗೂ ಪುತ್ತೂರು ಪಟ್ಟಣದ ಬಡ ಕುಟುಂಬಗಳ ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ಮನೆಗಳಿಗೆ ಅಕ್ಕಿಯನ್ನು ವಿತರಿಸಿದರು.
ಇದರಿಂದಾಗಿ ಜನರಿಗೆ ಜಯರಾಮ ರೈಗಳ ಮೇಲೆ ಎಲ್ಲೆ ಮೀರಿದ ಪ್ರೀತಿ ಮೂಡಿತು. ತಾನಾಯಿತು ತನ್ನ ಸಂಸಾರವಾಯಿತು ಎನ್ನುವ ಮನೋಭಾವದ ಈಗಿನ ಜನತೆಯ ನಡುವೆ ವಿದೇಶದಲ್ಲಿ ಪರಿಶ್ರಮದ ದುಡಿದ ಹಣದಿಂದ ತಾಯ್ನಾಡಿಗೆ ಕೊಡುಗೈ ದಾನ ನೀಡಿದ ಜಯರಾಮ ರೈಗಳ ಅಸಾಮಾನ್ಯ ವ್ಯಕ್ತಿತ್ವ ಆದರ್ಶನೀಯವಾಗಿದೆ.
ಇಷ್ಟು ಮಾತ್ರವಲ್ಲದೆ ವರ್ಷಂಪ್ರತಿ ತಾಯ್ನಾಡಿನ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ,ಹಲವಾರು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರ,ರೋಗಿಗಳಿಗೆ ಚಿಕಿತ್ಸಾ ಧನ ಸಹಾಯ, ಸಾಂಸ್ಕೃತಿಕ -ಸಾಹಿತ್ತಿಕ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವದ ಪ್ರೋತ್ಸಾಹ ಹೀಗೆ ತನ್ನ ಕೈ ಮಿಗಿಲಾದ ಕೊಡುಗೆಗಳನ್ನು ನೀಡುವಲ್ಲಿ ಸಮರ್ಥರೆನಿಸಿ ಜನಪ್ರಿಯತೆ ಗಳಿಸಿಕೊಂಡ ಸಂತ್ರಸ್ತರ ಸಾಂತ್ವನದ ಮಿತ್ರ ಮಿತ್ರಂಪಾಡಿ ಜಯರಾಮ ಅವರಿಂದ ಇನ್ನಷ್ಟು ಸಮಾಜ ಸೇವಾ ಕೈಂಕರ್ಯ ನಡೆಸುವಂತಾಗಲಿ ಎಂಬುದೇ ವಿಶೇಷ ಹಾರೈಕೆ.








0 Comments