ಮಂಜೇಶ್ವರ: ತುಳುನಾಡಿನ ಸಂಸ್ಕೃತಿಗೆ ದೂರದ ಕೊಲ್ಲಿ ರಾಷ್ಟ್ರದಲ್ಲಿದ್ದುಕ್ಕೊಂಡು ಅಹರ್ನಿಶಿ ಸೇವೆ ಸಲ್ಲಿಸುವ "ತುಳುಕೂಟ ಕುವೈಟ್" ಗಡಿನಾಡಿನ ಲಾಕ್ಡೌನ್ ಸಂತ್ರಸ್ತರಿಗೆ ಬಿಸಿಯೂಟ ಪ್ರಾಯೋಜಿಸುವ ಮೂಲಕ ಸಾಮಾಜಿಕ ಸೇವೆಗೆ ಮಾದರಿಯಾಗಿದೆ.
ಕೇರಳ -ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿ ಮಂಜೇಶ್ವರ ಭಾಗದಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಲಾಕ್ ಡೌನ್ ನಿಮಿತ್ತ ನೀಡುವ 33ನೇ ದಿನದ ಮಧ್ಯಾಹ್ನದ ಬಿಸಿಯೂಟಕ್ಕೆ ಸ್ವಯಂ ಪ್ರೇರಣೆಯಿಂದ "ತುಳುಕೂಟ ಕುವೈಟ್"ಸಹಾಯ ನೀಡಿರುವುದು ಆದರ್ಶನೀಯವಾಗಿದೆ.
ಸಂಘಟನೆಯ ಸವಿಶೇಷ: ಕಳೆದ 21 ವರ್ಷಗಳಿಂದ ಕುವೈಟ್ ನಲ್ಲಿ ತುಳುನಾಡ ಸಂಸ್ಕೃತಿ ಹಾಗೂ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಪ್ರಗತಿಗಾಗಿ ಅಹರ್ನಿಸಿ ಕಾರ್ಯನ್ಮೋಖವಾಗಿರುವ "ತುಳುಕೂಟ ಕುವೈಟ್" ಸಂಸ್ಥೆಯು ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ವಿಶೇಷ ಸಂಘಟನಾ ಪ್ರಶಸ್ತಿ ಪುರಸ್ಕೃತ ಸಂಘದ ನೇತೃತ್ವದಲ್ಲಿ ತುಳುಪರ್ಬ, ಕ್ಷೇಮಾಭಿವೃದ್ಧಿ, ಶೈಕ್ಷಣಿಕ, ಸಂಗೀತ, ಸಾಂಸ್ಕೃತಿಕ ಕೈಂಕರ್ಯಗಳನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ನಡೆಸಲಾಗಿದೆ. ತುಳುನಾಡಿಗೆ ಸರ್ವತೋಮುಖ ಸ್ಪಂದನೆ ನೀಡುವ ತುಳುಕೂಟ ಕುವೈಟ್ ಇಂದು ತುಳುನಾಡಿಗಾಗಿ ಸಂಸ್ಕೃತಿ ಪೂರಕ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಇವರ ಸೇವಾರ್ಥವಾಗಿ ಇಂದಿನ ಬಿಸಿಯೂಟ ಸೇವೆ ನಡೆಯಿತು.
ಬಿಸಿಯೂಟ ವಿತರಣಾ ವಿವರ:
ತಲಪಾಡಿ ಕೆಳಗಿನ ಚೆಕ್ಕಿಂಗ್ ಸೆಂಟರ್ ಹಾಗೂ ಮೇಲಿನ ಚೆಕ್ಕಿಂಗ್ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳಾದ ಶ್ವೇತಾರ ಕುಮಾರ್ ರವರಿಗೆ ಸೇವಾರ್ಥಿ ಸಂಘಟನೆಯ ಪರವಾಗಿ ಸ್ಕಂದ ಹೆಲ್ಪ್ ಡೆಸ್ಕ್ ನ ಸಂಸ್ಥಾಪಕ ರತನ್ ಕುಮಾರ್ ಹೊಸಂಗಡಿ ವಿತರಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ತಲಪಾಡಿಯಿಂದ ತೊಡಗಿ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ - ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು.
ಈ ಬಿಸಿ ಊಟ ವಿತರಣೆಯಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ ನ ಪಧಾಧಿಕಾರಿಗಳಾದ ಲಕ್ಷ್ಮಣ್ ಭಕ್ತ ಮಂಜೇಶ್ವರ, ಸುಖೇಶ್ ಬೆಜ್ಜ, ದೀಪಕ್ ರಾಜ್ ಉಪ್ಪಳ, ಸುಧೀನ್ ವರ್ಕಾಡಿ, ಅರ್ಜುನ್ ಭಕ್ತ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು.








0 Comments