ಪ್ರತಿಭಾ_ವಿಶೇಷ : ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ಚಿತ್ರಕಲಾವಿದ, ಸಂಗೀತಗಾರರಾಗಿ ಎಲೆಮರೆಯ ಕಾಯಿಯಂತಿರುವ ಶ್ರೀಯುತ ಪ್ರಸಾದ್ ಶೆಟ್ಟಿ ಯವರ ಬಗ್ಗೆ ಇಂದು ವಿಶೇಷ ಚಾನೆಲ್ ಬೆಳಕು ಚೆಲ್ಲುತ್ತಿದೆ.
ಮೂಲತಃ ಹೆಬ್ರಿಯ ಸದಾಶಿವ ಶೆಟ್ಟಿ ಮತ್ತು ಇಂದಿರಾ ದಂಪತಿಯ ಪುತ್ರರಾಗಿರುವ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲು ಹೆಬ್ರಿ ತಾಲೂಕು ಉಡುಪಿ ಜಿಲ್ಲೆ ಇಲ್ಲಿ ಪೂರೈಸಿದರು.
ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಮುನಿಯಾಲು ಹೆಬ್ರಿ ತಾಲೂಕು ಇಲ್ಲಿ ಪೂರೈಸಿರುವುದಲ್ಲದೆ, ಮುಕ್ತ ವಿಶ್ವ ವಿದ್ಯಾನಿಲಯ ಮೈಸೂರು ಇಲ್ಲಿ ಪದವಿಯನ್ನೂ, ಕಸ್ತೂರ್ಬಾ ಟೀಚರ್ ಟ್ರೇನಿಂಗ್ ಇನ್ಸ್ಟಿಟ್ಯೂಷನ್ ಕುಕ್ಕುಂದೂರು ಕಾರ್ಕಳ ಇಲ್ಲಿ ಶಿಕ್ಷಕರ ತರಬೇತಿಯನ್ನು ಪೂರೈಸಿರುತ್ತಾರೆ. ಪ್ರಸ್ತುತ ಕಳೆದ ಐದು ವರ್ಷಗಳಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೂರ್ಯತ್ತಾವು ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಹುಮುಖ ಪ್ರತಿಭೆಯ ಶಿಕ್ಷಕ :
ಬಹುಮುಖ ಪ್ರತಿಭಾ ಸಂಪನ್ನರಾಗಿರುವ ಇವರು ಚಿತ್ರಕಲೆ, ಹಾಡುಗಾರಿಕೆ, ವರ್ಲಿಪೇಂಟಿಂಗ್, ಕ್ರಾಫ್ಟ್ ತಯಾರಿಕೆ ಇವರ ಮುಖ್ಯ ಹವ್ಯಾಸಗಳಾಗಿದೆ.ಇವರು ಪ್ರತಿಭಾಕಾರಂಜಿಗೆ ತಮ್ಮ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ಹಲವಾರು ಪಾರಿತೋಷಕಗಳನ್ನು ಪಡೆಯುವಲ್ಲಿ ಶ್ರಮವಹಿಸಿರು ವುದಲ್ಲದೆ ಬಣ್ಣ ಬಣ್ಣದ ಹಾಳೆಗಳಲ್ಲಿ ಕ್ರಾಪ್ಟ್ ಗಳನ್ನು ಮಾಡಿ ಶಾಲೆಯ ಗೋಡೆಗೆ ಹಾಕಿರುವುದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರುವುದಲ್ಲದೆ ಶಾಲೆಯ ಅಂದವನ್ನು ಹೆಚ್ಚಿಸಿದೆ.
ವರ್ಲಿ ಪೈಟಿಂಗ್ :
ಹಲವಾರು ಹವ್ಯಾಸಗಳನ್ನು ಮೈಗೂಡಿಸಿಕೊಂಡಿರುವ ಇವರು 53 ವಿದ್ಯಾರ್ಥಿಗಳಿಗೆ ಓರ್ವನೇ ಶಿಕ್ಷಕರಾಗಿ ಸೇವಾ ನಿರತರಾಗಿದ್ದಾರೆ.
ಬಿಡುವಿನ ವೇಳೆಯಲ್ಲಿ ತನ್ನ ಸ್ವಂತ ಖರ್ಚಿನಿಂದ ಶಾಲೆಯ ಗೋಡೆಗಳಿಗೆ ವರ್ಲಿ ಪೈಟಿಂಗ್ ಮಾಡಿರುವ ಓರ್ವ ಅಪರೂಪದ ಕಲಾವಿದ. ತಮ್ಮ ಶಾಲೆಯ ಗೋಡೆಯ ಮೇಲೆ, ತಮ್ಮ ಕುಂಚದಲ್ಲಿ ವಿವಿಧ ಚಿತ್ರಗಳು ಅರಳಿದ್ದು ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದೆ. ಮಾತ್ರವಲ್ಲ ಸಂಗೀತಗಾರ ರಾಗಿರುವ ಇವರು ಪದವಿಪೂರ್ವ ವಿದ್ಯಾರ್ಥಿಗಳಿಗೆ ನಡೆಸುವ ಭಾವಗೀತೆ ಸ್ಪರ್ಧೆಯಲ್ಲಿ ವಿಭಾಗಮಟ್ಟಕ್ಕೆ ಆಯ್ಕೆ ಆಗಿರುವುದಲ್ಲದೆ,ಹಲವಾರು ಸಂಗೀತ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ.
ಓರ್ವ ಶಿಕ್ಷಕನಿಗೆ ಇರಬೇಕಾದ ಎಲ್ಲಾ ಅರ್ಹತೆ ಸಂಪನ್ಮೂಲಗಳನ್ನು ಹೊಂದಿರುವ ಶಿಕ್ಷಕರಾಗಿ, ಸಂಗೀತಗಾರರಾಗಿ,ವರ್ಲಿ ಪೈಟಿಂಗ್ ಮಾಡುವ ಚಿತ್ರಕಲಾವಿದರಾಗಿರುವ ಶ್ರೀಯುತ ಪ್ರಸಾದ್ ಶೆಟ್ಟಿಯವರ ಕರ್ತವ್ಯನಿಷ್ಠೆ, ವೃತ್ತಿ ಗೌರವ, ವ್ಯಕ್ತಿತ್ವ ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿದೆ. ಸರಕಾರಿ ಶಾಲೆ ಉಳಿಯುವಲ್ಲಿ ಇಂತಹ ಶಿಕ್ಷಕರ ಪಾತ್ರ ಬಹುಮುಖ್ಯವಾದುದು. ಬಹುಮುಖ ಪ್ರತಿಭಾಸಂಪನ್ನರಾಗಿರುವ ಶ್ರೀಯುತ ಪ್ರಸಾದ್ ಶೆಟ್ಟಿಯವರ ಕಲಾ ಸೇವೆಗೆ ಕಲಾಮಾತೆಯ ಅನುಗ್ರಹ ಇರಲಿ ಎಂಬುದು ನಮ್ಮೆಲ್ಲರ ಹರಕೆ,.... ಹಾರೈಕೆ.







1 Comments
This is our lam lucky student my inspiration teacher
ReplyDelete